Posts

ಸರ್ವೆ ವರದಿ ಬಂದ 30 ದಿನದೊಳಗೆ ವಿಮೆ ಪರಿಹಾರ ನೀಡುವುದು ಕಡ್ಡಾಯ

* ಸರ್ವೆಯರ್‌ ತನ್ನ ವರದಿಯನ್ನು 30ರಿಂದ45 ದಿನಗಳೊಳಗೆ ನೀಡಲೇಬೇಕು ವಿಮೆ ಕಂಪನಿಗಳು ಅಥವಾ ವಿಮೆ ಪಡೆದವರು ಹಾನಿಯ ಅಂದಾಜಿಗೆ ಸರ್ವೆಯರನ್ನು ನೇಮಿಸಿದಾಗ ಅವರು ಮನಬಂದಂತೆ ವಿಳಂಬ ಮಾಡಲು ಬರುವುದಿಲ್ಲ. ನೇಮಕ ಪತ್ರ ಸಿಕ್ಕ ಬಳಿಕ 30 ದಿನಗಳೊಳಗೆ ಹೆಚ್ಚೆಂದರೆ 45 ದಿನಗಳೊಳಗೆ ವರದಿ ಸಲ್ಲಿಸಬೇಕು. ಹೀಗೆ ವರದಿ ಸಲ್ಲಿಕೆಯಾದ 30 ದಿನಗಳೊಳಗೆ ವಿಮೆ ಕಂಪನಿ ಪರಿಹಾರ ಸಂದಾಯ ಮಾಡಬೇಕು. ಇದನ್ನು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌‌ಡಿಎ)ದ ನಿಯಮ 9 ಹೇಳುತ್ತದೆ. ಹಾಗೆಯೇ ಪರಿಹಾರ ನೀಡುವುದು ಆರು ತಿಂಗಳಿಗೂ ವಿಳಂಬವಾದರೆ ಬ್ಯಾಂಕ್‌ ಬಡ್ಡಿ ದರಕ್ಕಿಂತ ಶೇ.2ರಷ್ಟು ಹೆಚ್ಚಿಗೆ ನೀಡಬೇಕಾಗುತ್ತದೆ. ಈ ಪ್ರಕರಣ ಹೈದ್ರಾಬಾದದ ಮೆ.ಲೋಕೇಶ್‌ ಮೆಷಿನ್ಸ್‌ ಲಿ. ಮತ್ತು ನ್ಯೂ ಇಂಡಿಯಾ ಅಶ್ಯುಅರನ್ಸ್‌ ಕಂ.ಲಿ. ನಡುವಿನದು. ಮೆ.ಲೋಕೇಶ್‌ ಮೆಷಿನ್ಸ್‌ ಲಿ. ಇದು ಒಂದು ಪಬ್ಲಿಕ್‌ ಲಿ. ಕಂಪನಿ. ಇದು ಯಂತ್ರೋಪಕರಣಗಳು ಮತ್ತು ಬಿಡಿಭಾಗಗಳನ್ನು ತಯಾರಿಸುವ ಕಂಪನಿಯಾಗಿತ್ತು. ಟೆಲ್ಕೋ, ಅಶೋಕ್‌ ಲೇಲ್ಯಾಂಡ್‌, ಎಲ್‌ ಆ್ಯಂಡ್‌ ಟಿ, ಜಾಂಡೀರ್‌, ಮಹೀಂದ್ರಾ ಮತ್ತು ಮಹೀಂದ್ರಾ, ಎಸ್ಕಾರ್ಟ್‌, ಬಜಾಜ್‌ ಆಟೋ ಮತ್ತು ಹೊಂಡಾ ಮೋಟಾರ್ಸ್‌ನಂಥ ಪ್ರಮುಖ ಕಂಪನಿಗಳಿಗೆ ತನ್ನ ಉತ್ಪನ್ನವನ್ನು ಮಾರಾಟ ಮಾಡುತ್ತಿತ್ತು. ಇವರ ಹೆಚ್ಚಿದ ಬೇಡಿಕೆಗಳನ್ನು ಪೂರೈಸಲು ಮತ್ತು ತನ್ನ ವ್ಯವಹಾರವನ್ನು ವಿಸ್ತರಿಸಲು ಕಂಪನಿಯು ಜರ್ಮನಿಯಿಂದ ಕೆಲವು ಯಂತ್ರಗಳನ್ನು ತರಿಸಲ...

ಆಡಳಿತಾತ್ಮಕ ಲೋಪಗಳು ವಿಳಂಬ ಮನ್ನಾ ಕೋರಿಕೆಗೆ ಸಾಕಾಗದು

* ಮೇಲ್ಮನವಿ ವಿಳಂಬವಾಗಿ ಸಲ್ಲಿಸಿದ್ದಕ್ಕೆ ಕಾರಣಗಳು ಬಲವಾಗಿರಬೇಕು ಗ್ರಾಹಕ ವೇದಿಕೆಗಳಲ್ಲಿ ದೂರು ಸಲ್ಲಿಸಲು ಮತ್ತು ಮೇಲ್ಮನವಿ ಸಲ್ಲಿಸಲು ಕಾಲಮಿತಿ ಇರುತ್ತದೆ. ಆ ಕಾಲಮಿತಿಯನ್ನು ಮೀರಿ ದೂರು ಸಲ್ಲಿಸುವುದು ಮತ್ತು ಮೇಲ್ಮನವಿ ಸಲ್ಲಿಸುವುದನ್ನು ಮಾಡಿದರೆ ದೂರನ್ನು ಅಥವಾ ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸದೆಯೂ ಇರಬಹುದಾಗಿದೆ. ಸಾಮಾನ್ಯವಾಗಿ ಘಟನೆ ನಡೆದ ಎರಡು ವರ್ಷಗಳ ಒಳಗಾಗಿ ದೂರನ್ನು ಸಲ್ಲಿಸಬಹುದು. ಹಾಗೆಯೇ ಜಿಲ್ಲಾ ವೇದಿಕೆಯ ತೀರ್ಪಿನ ವಿರುದ್ಧ ರಾಜ್ಯ ಆಯೋಗದಲ್ಲಿ ತೀರ್ಪು ಬಂದ 45 ದಿನಗಳ ಒಳಗಾಗಿ ಮೇಲ್ಮನವಿ ಸಲ್ಲಿಸಬಹುದಾಗಿದೆ. ಅದೇ ರೀತಿ ರಾಜ್ಯ ಆಯೋಗದ ತೀರ್ಪಿನ ವಿರುದ್ಧ ರಾಷ್ಟ್ರೀಯ ಆಯೋಗದಲ್ಲಿ ತೀರ್ಪು ಬಂದ 45 ದಿನಗಳ ಒಳಗಾಗಿ ಮೇಲ್ಮನವಿ ಸಲ್ಲಿಸಬಹುದು. ರಾಷ್ಟ್ರೀಯ ಆಯೋಗದ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ 30 ದಿನಗಳ ಒಳಗಾಗಿ ಮೇಲ್ಮನವಿ ಸಲ್ಲಿಸಬಹುದಾಗಿದೆ. ಈ ಕಾಲಮಿತಿಯಿಂದಾಗಿ ಅನಗತ್ಯ ವಿಳಂಬವನ್ನು ತಪ್ಪಿಸಬಹುದಾಗಿದೆ. ಅತಿ ವಿಳಂಬವಾಗಿ ಸಲ್ಲಿಸಿದ ಮೇಲ್ಮನವಿಯೊಂದನ್ನು ರಾಜ್ಯ ಆಯೋಗ ವಜಾ ಮಾಡಿದ ಪ್ರಕರಣವೊಂದು ಇಲ್ಲಿದೆ. ಇದು ಮೆ.ವಿಹಾನ್‌ ಡೈರೆಕ್ಟ್‌ ಸೆಲ್ಲಿಂಗ್‌ (ಇಂಡಿಯಾ) ಪ್ರೈವೇಟ್‌ ಲಿ. ವಿರುದ್ಧ ಮಂಗಳೂರಿನ ಲೋಹಿತ್‌ ಶೆಟ್ಟಿ ಎಂಬವರ ದೂರು. ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ವೇದಿಕೆಯ ತೀರ್ಪಿನ ವಿರುದ್ಧ ವಿಹಾನ್‌ ಕಂಪನಿಯು ಸಲ್ಲಿಸಿದ ಮೇಲ್ಮನವಿಯಾಗಿತ್ತು. ಮೆ.ವಿಹಾನ್‌ ಡೈರೆಕ್ಟ್‌ ಸೆಲ್ಲ...

ಕಳುವಾದ ವಾಹನಕ್ಕೆ ಪರಿಹಾರ ನಿರಾಕರಿಸುವ ವಿಮೆ ಕಂಪನಿಯ ಯತ್ನ ವಿಫಲ

* ಕಳುವಾದ ನಂತರ ವಿಮೆ ಪಡೆಯಲಾಯಿತೆಂಬ ಅದರ ವಾದ ನಿಲ್ಲಲಿಲ್ಲ. ವಾಹನ ಕಳುವಾದ ಮಾರನೆ ದಿನ ವಿಮೆ ಪಡೆದು ಪರಿಹಾರ ಕೇಳಲಾಗುತ್ತಿದೆ ಎಂದು ವಿಮೆ ಕಂಪನಿಯು ವಾದಿಸಿ ಪರಿಹಾರವನ್ನು ನಿರಾಕರಿಸುವುದಕ್ಕೆ ಯತ್ನಿಸಿ ಜಿಲ್ಲಾ ವೇದಿಕೆಯ ತೀರ್ಪಿನ ವಿರುದ್ಧ ರಾಷ್ಟ್ರೀಯ ವೇದಿಕೆಯ ವರೆಗೂ ಹೋಗಿದ್ದು ತ್ವರಿತ ನ್ಯಾಯದಾನದ ಆಶಯಕ್ಕೆ ವಿರುದ್ಧವಾದದ್ದು ಮತ್ತು ಉದ್ದೇಶಪೂರ್ವಕ ವಿಳಂಬ ನೀತಿ ಅನುಸರಿಸಿದ್ದಕ್ಕೆ ಒಂದು ಉದಾಹರಣೆಯಾಗಿದೆ. ಈ ಪ್ರಕರಣ ಓರಿಯಂಟಲ್‌ ಇನ್ಸುರನ್ಸ್‌ ಕಂಪನಿ ಲಿ. ಮತ್ತು ಬಿಹಾರದ ಬೋಧಗಯಾದ ನೃಪೇಂದ್ರಕುಮಾರ ಇಂದ್ರಜಿತ್‌ ಸಿಂಗ್‌ ನಡುವಿನದು. ರಾಷ್ಟ್ರೀಯ ಆಯೋಗದಲ್ಲಿ ಮೇಲ್ಮನವಿಯನ್ನು 64 ದಿನ ವಿಳಂಬವಾಗಿ ಸಲ್ಲಿಸಲಾಗಿತ್ತು. ಆದರೆ ಪ್ರತಿವಾದಿ ವಕೀಲರಿಂದ ಯಾವುದೇ ಆಕ್ಷೇಪ ಇರದ ಕಾರಣ, ಅರ್ಹತೆಯ ಆಧಾರದಲ್ಲಿ ನ್ಯಾಯ ಸಿಗಲಿ ಎಂಬ ಉದ್ದೇಶದಿಂದ ವಿಳಂಬವನ್ನು ಮನ್ನಾ ಮಾಡಿ ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸಲಾಗಿತ್ತು. ಜಿಲ್ಲಾ ಗ್ರಾಹಕ ವೇದಿಕೆಯು 12-02-2008ರಂದು ನೀಡಿದ ತೀರ್ಪಿನಲ್ಲಿ ದೂರುದಾರರು ಸೂಕ್ತ ಸಿವಿಲ್‌ ನ್ಯಾಯಾಲಯದಲ್ಲಿ ಪರಿಹಾರ ಕಂಡುಕೊಳ್ಳಲು ಆದೇಶಿಸಿತ್ತು. ಇದರ ವಿರುದ್ಧ ಬಿಹಾರ ರಾಜ್ಯ ಗ್ರಾಹಕ ಆಯೋಗದಲ್ಲಿ ನೃಪೇಂದ್ರಕುಮಾರ ಅವರು ಮೇಲ್ಮನವಿಯನ್ನು ಸಲ್ಲಿಸುತ್ತಾರೆ. ರಾಜ್ಯ ಆಯೋಗವು ದೂರನ್ನು ಅಂಗೀಕರಿಸುತ್ತದೆ. 04-02-2016ರಂದು ನೀಡಿದ ತೀರ್ಪಿನಲ್ಲಿ ವಿಮೆ ಕಂಪನಿಗೆ ಕಳುವಾಗಿರುವ ವಾಹನಕ್ಕೆ ವಿಮೆ ಮೊತ್ತವ...

ವಿಮೆ ಕಂಪನಿಯ ನಿಯಮ ಮೀರಿಯೂ ಮೆಡಿಕ್ಲೇಮ್‌ ಪರಿಹಾರ

* ರಾಷ್ಟ್ರೀಯ ಆಯೋಗ ಕೂಡ ಜಿಲ್ಲಾ ವೇದಿಕೆಯ ತೀರ್ಪನ್ನು ಸಮ್ಮತಿಸಿತು ಗ್ರಾಹಕ ನ್ಯಾಯಾಲಯ ಕೆಲವೊಮ್ಮೆ ನಿಯಮಗಳ ಆಚೆಗೂ ಸಾಧ್ಯತೆಗಳ ಹುಡುಕಾಟ ನಡೆಸುತ್ತದೆ. ಗ್ರಾಹಕರಿಗೆ ನ್ಯಾಯ ಒದಗಿಸುವ ಕಟ್ಟಕಡೆಯ ಸಾಧ್ಯತೆಯನ್ನೂ ಅದು ಪರಿಶೀಲಿಸುತ್ತದೆ. ಮೆಡಿಕ್ಲೇಮ್‌ ಪಾಲಿಸಿಯಲ್ಲಿ ರೋಗಿ ಆಸ್ಪತ್ರೆಗೆ ಸೇರಿದಾಗ ಅದರ ವೆಚ್ಚ, ಔಷಧ ಎಲ್ಲದಕ್ಕೂ ವಿಮೆ ಸಿಗುತ್ತದೆ. ಆದರೆ ರೋಗಿ ಆಸ್ಪತ್ರೆಯಿಂದ ಮನೆಗೆ ಮರಳಿದಾಗ ರೋಗಕ್ಕೆ ಸಂಬಂಧಿಸಿ ಬಳಸುವ ಉಪಕರಣ ಖರೀದಿಸಿದರೆ ಅದಕ್ಕೆ ಪರಿಹಾರ ಸಿಗಬಹುದೆ? ಉದಾಹರಣೆಗೆ ಸರಾಗವಾಗಿ ಉಸಿರಾಡಲು ಮನೆಯಲ್ಲಿ ಬಳಸುವ ಸಿಪಿಎಪಿ ಯಂತ್ರ. ರೋಗಕ್ಕೆ ಸಂಬಂಧಿಸಿ ವೈದ್ಯರೇ ಖರೀದಿಗೆ ಸೂಚಿಸಿದ್ದು. ಇದಕ್ಕೆ ವಿಮೆ ಪರಿಹಾರ ಕೋರಿದಾಗ ಆದದ್ದು ಏನು? ಈ ಪ್ರಕರಣ ನ್ಯೂ ಇಂಡಿಯಾ ಅಶ್ಯೂಅರೆನ್ಸ್‌ ಕಂಪನಿ ಮತ್ತು ಹರ್ಯಾಣದ ಸೋನಾಲಿ ಸರೀನ್‌ ಅವರ ನಡುವಿನದು. ಇದು ಮೆಡಿಕ್ಲೇಮ್‌ಗೆ ಸಂಬಂಧಿಸಿದ್ದು. ಈ ಪ್ರಕರಣದಲ್ಲಿ ಜಿಲ್ಲಾ ವೇದಿಕೆ 08-03-2010ರಂದು ತೀರ್ಪು ನೀಡಿತ್ತು. ಮೇಲ್ಮನವಿಯಲ್ಲಿ ರಾಜ್ಯ ಆಯೋಗವು 09-12-2014ರಂದು ಜಿಲ್ಲಾ ವೇದಿಕೆಯ ತೀರ್ಪನ್ನು ಎತ್ತಿಹಿಡಿದಿತ್ತು. ಅದರ ವಿರುದ್ಧ ವಿಮೆ ಕಂಪನಿಯು ರಾಷ್ಟ್ರೀಯ ಆಯೋಗದಲ್ಲಿ ಮೇಲ್ಮನವಿಯನ್ನು ಸಲ್ಲಿಸಿತ್ತು. ಈ ಮೇಲ್ಮನವಿಯನ್ನು 40 ದಿನ ವಿಳಂಬವಾಗಿ ಸಲ್ಲಿಸಿತ್ತು. ಆದರೆ ಅದನ್ನು ಮನ್ನಿಸುವಂತೆ ಮನವಿ ಮಾಡಿಕೊಂಡಿತ್ತು. ವಿಳಂಬವಾಗಿದೆ ಎಂಬ ಏಕೈಕ ಕಾರಣಕ್ಕೆ ಅದನ್ನು ವಜಾ ...

ಹಾನಿ ಅಂದಾಜಿಗೆ ವಿಮೆ ಪಡೆದವರೂ ಸರ್ವೇಯರ್ ನೇಮಿಸಬಹುದು

* ಈ ಸಂಬಂಧ 2015ರಲ್ಲಿ ಐಆರ್‌‌ಡಿಎ ಸುತ್ತೋಲೆ ಹೊರಡಿಸಿದೆ ವಿಮೆ ಪರಿಹಾರ ನೀಡುವುದನ್ನು ತಪ್ಪಿಸಿಕೊಳ್ಳಲು ವಿಮೆ ಕಂಪನಿಗಳು ನಾನಾ ರೀತಿಯ ನೆಪಗಳನ್ನು ಮುಂದೊಡ್ಡುತ್ತವೆ. ಸರ್ವೇಯರ್‌ ನೇಮಕ ಮಾಡುವುದನ್ನು ವಿಳಂಬ ಮಾಡುತ್ತವೆ. ಆಗ ವಿಮೆ ಪಡೆದವರು ತಾವೇ ಸರ್ವೇಯರನನ್ನು ನೇಮಿಸಬಹುದೆ? ವಿಮೆ ಕಾನೂನು ಈ ಕುರಿತು ಏನು ಹೇಳುತ್ತದೆ? ರಾಷ್ಟ್ರೀಯ ಆಯೋಗದ ವರೆಗೂ ಮೇಲ್ಮನವಿ ಸಲ್ಲಿಸಿ ಮುಖಭಂಗ ಅನುಭವಿಸಿದ ನ್ಯೂ ಇಂಡಿಯಾ ಅಶ್ಯೂ್ರೆನ್ಸ್‌ ಕಂಪನಿಯ ಪ್ರಕರಣ ಇಲ್ಲಿದೆ. ಇದು ನ್ಯೂ ಇಂಡಿಯಾ ಅಶ್ಯೂ್ರೆನ್ಸ್‌ ಕಂಪನಿ ಮತ್ತು ದೆಹಲಿಯ ಮೆ.ಡೆಮ್ಮ್‌ ಅಟೋ ಇಂಜಿನಿಯರಿಂಗ್‌ ವರ್ಕ್ಸ್‌ ನಡುವಿನ ವ್ಯಾಜ್ಯ. ಮೆ.ಡೆಮ್ಮ್‌ ಅಟೋ ಇಂಜಿನಿಯರಿಂಗ್‌ ವರ್ಕ್ಸ್‌ ಇವರು 12-10-2006ರಿಂದ 11-10-2007ರ ಅವಧಿಗೆ ಬೆಂಕಿ ಮತ್ತು ಇತರ ಅನಾಹುತಗಳಿಂದ ಆಗುವ ಹಾನಿಯಿಂದ ರಕ್ಷಿಸಿಕೊಳ್ಳಲು 70 ಲಕ್ಷ ರುಪಾಯಿಗೆ ವಿಮೆಯನ್ನು ಪಡೆದುಕೊಂಡಿದ್ದರು. ಇದರ ವ್ಯಾಪ್ತಿಗೆ ಅವರ ಅಂಗಡಿಯಲ್ಲಿಯ ಎಲ್ಲ ಅಟೋ ಸಾಮಗ್ರಿಗಳ ಸಂಗ್ರಹ ಸೇರಿತ್ತು. ಅಂಗಡಿಯ ಸಾಮಾನುಗಳು ಪಂಜಾಬ್‌ ನ್ಯಾಶನಲ್‌ ಬ್ಯಾಂಕಿನ ಅಡಮಾನಕ್ಕೆ ಒಳಪಟ್ಟಿತ್ತು. 13-05-2007ರಂದು ರಾತ್ರಿ 9 ಗಂಟೆಗೆ ಈ ವಿಮೆಗೆ ಒಳಪಟ್ಟ ಅಂಗಡಿ ಇದ್ದ ಗುರುನಾನಕ ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ ಬೆಂಕಿ ಅನಾಹುತ ಸಂಭವಿಸಿತು. ಅಗ್ನಿಶಾಮಕ ದಳದವರು ಆಗಮಿಸಿ ಹಲವು ಗಂಟೆಗಳ ಕಾಲ ಶ್ರಮಿಸಿ ಬೆಂಕಿಯನ್ನು ನಂದಿಸಿದರು. ಪೊಲೀಸರಿಗೂ ಸುದ್ದಿ ತಿಳಿಸಲ...

ಷರತ್ತು ಉಲ್ಲಂಘಿಸಿದ ವಾಹನ ಅಪಘಾತಕ್ಕೀಡಾದರೆ ವಿಮೆ ಸಿಗುವುದೆ?

* ಅಂದಾಜಿಸಿದ ಹಾನಿಯ ಶೇ.75ರಷ್ಟು ಪರಿಹಾರ ನೀಡಬೇಕೆಂದು ಸುಪ್ರೀಂ ಕೋರ್ಟ್‌ ಆದೇಶವೇ ಇದೆ. ಪ್ರತಿಯೊಂದು ವಾಹನಕ್ಕೂ ವಿಮೆಯನ್ನು ಮಾಡಿಸುವುದು ಕಡ್ಡಾಯ. ಅದು ಸ್ವಂತ ಬಳಕೆಗಿರಬಹುದು ಅಥವಾ ಬಾಡಿಗೆಗೆ ಬಳಸುವ ಉದ್ದೇಶದ್ದು ಇರಬಹುದು. ನೀವು ಪಡೆದುಕೊಳ್ಳುವ ಸೌಲಭ್ಯಗಳ ಆಧಾರದ ಮೇಲೆ ವಿಮೆಯ ಕಂತು ನಿರ್ಧಾರವಾಗುತ್ತದೆ. ವಿಮೆಯ ಪಾಲಿಸಿಯಲ್ಲಿ ಹಲವು ಷರತ್ತುಗಳು ಇರುತ್ತದೆ. ಖಾಸಗಿ ನೊಂದಣಿ ವಾಹನವನ್ನು ಬಾಡಿಗೆಗೆ ಬಳಸುವಂತಿಲ್ಲ. ಚಾಲಕನು ಸರಿಯಾಗಿರುವ ಚಾಲನೆ ಪರವಾನಿಗೆಯನ್ನು ಹೊಂದಿರಬೇಕು, ಅಪ್ರಾಪ್ತರು ವಾಹನ ಚಲಾಯಿಸಬಾರದು, ಪರವಾನಿಗೆ ಇರುವುದಕ್ಕಿಂತ ಹೆಚ್ಚಿನ ಜನರನ್ನು ತುಂಬಬಾರದು ಇತ್ಯಾದಿ ಇತ್ಯಾದಿ. ಈ ಷರತ್ತಿನ ಉಲ್ಲಂಘನೆಯಾದರೆ ವಿಮೆ ಸಿಗುವುದಿಲ್ಲವೆ? ಸಿಗುವುದಾದರೆ ಎಷ್ಟು ಸಿಗುತ್ತದೆ? ಖಾಸಗಿ ನೊಂದಣಿ ವಾಹನವನ್ನು ಬಾಡಿಗೆಗೆ ಬಳಸಿದಾಗ ಅಪಘಾತವಾದ ಒಂದು ಪ್ರಕರಣ ಇಲ್ಲಿದೆ. ಮಧ್ಯಪ್ರದೇಶದ ಇಂದೋರದ ಅನಿಲ್‌ ರಾಮ ಸ್ವರೂಪ್‌ ಅವರು ವಾಹನವೊಂದನ್ನು ಖಾಸಗಿ ಬಳಕೆಗೆಂದು ನೊಂದಾಯಿಕೊಂಡು ಅದಕ್ಕೆ ಐಎಫ್‌ಎಫ್‌ಸಿಐ ಟೋಕಿಯೋ ಜಿಐಸಿ ಲಿ.ನಿಂದ ವಿಮೆ ಪಡೆದುಕೊಂಡಿದ್ದರು. ಆದರೆ ಅವರು ಆ ವಾಹನವನ್ನು ದೂರದರ್ಶನದ ಸಿಬ್ಬಂದಿಯ ಸಾಗಾಟಕ್ಕೆ ಬಳಸುತ್ತಿದ್ದರು. ಆ ವಾಹನ ಅಪಘಾತಕ್ಕೆ ಈಡಾಗುತ್ತದೆ. ಅವರು ವಿಮೆ ಪರಿಹಾರವನ್ನು ಕೋರುತ್ತಾರೆ. ವಿಮೆ ಕಂಪನಿಯು ಸರ್ವೇಯರ್‌ ಒಬ್ಬರನ್ನು ನೇಮಿಸುತ್ತದೆ. ಅವರು ಹಾನಿಯನ್ನು 1,96,850 ರು. ಎಂದು ವರದಿ ನೀಡ...

ಅತಿರಂಜಿತ ಹಾನಿ ತೋರಿಸಿ ಪರಿಹಾರ ಕೇಳಿದರೆ ವಿಮೆ ಸಿಗಲಾರದು

* ಸರ್ವೇಯರ್‌ ವರದಿ ನೀಡಿದ್ದೇ ಅಂತಿಮವಲ್ಲ, ವಿಮೆ ಕಂಪನಿ ಮತ್ತೊಮ್ಮೆ ಸರ್ವೆ ಮಾಡಿಸಬಹುದು ದೊಡ್ಡ ದೊಡ್ಡ ಉದ್ಯಮಗಳು ಆಕಸ್ಮಿಕಗಳಿಂದ ಆಗುವ ನಷ್ಟವನ್ನು ತಪ್ಪಿಸಿಕೊಳ್ಳಲು ವಿಮೆಯನ್ನು ಮಾಡಿಸುತ್ತವೆ. ಹಾಗೆ ಮಾಡಿಸಿದ ವಿಮೆಯ ಪರಿಹಾರ ಕೋರುವಾಗ ಎಷ್ಟು ಪ್ರಾಮಾಣಿಕರಾಗಿರುತ್ತೇವೋ ಅಷ್ಟು ಸುರಕ್ಷಿತ. ಹೇಗೂ ವಿಮೆ ಮಾಡಿಸಿದ್ದೇವಲ್ಲ, ಪರಿಹಾರ ಸ್ವಲ್ಪ ಹೆಚ್ಚಿಗೆಯೇ ಕೋರಬಹುದು ಎಂದು ದುರಾಸೆಗೆ ಒಳಗಾಗಿ ಸುಳ್ಳು ಲೆಕ್ಕ ತೋರಿಸಿದರೆ ಏನೂ ಸಿಗದೆ ಬರಿಗೈಯಲ್ಲಿ ಮರಳಬೇಕಾಗಬಹುದು. ಇಲ್ಲಿ ಅಂಥ ಒಂದು ಪ್ರಕರಣ ಇದೆ. ಪಶ್ಚಿಮ ಬಂಗಾಳದ ಹೂಗ್ಲಿಯ ಮೆ.ಫೆನಾಸಿಯಾ ಲಿ. ಕಂಪನಿಯು ಯುನೈಟೆಡ್‌‌ ಇಂಡಿಯಾ ಇನ್ಸುರೆನ್ಸ್‌ ಕಂಪನಿಯಿಂದ ಬೆಂಕಿ ಇತ್ಯಾದಿ ಅಪಘಾತಗಳಿಂದ ರಕ್ಷಣೆ ಪಡೆಯಲು ವಿಮೆಯನ್ನು ಪಡೆದಿತ್ತು. ಈ ಫೆನಾಸಿಯಾ ಕಂಪನಿಯು ವಿವಿಧ ರೀತಿಯ ರಾಸಾಯನಿಕಗಳನ್ನು ಉತ್ಪಾದಿಸುತ್ತಿತ್ತು. ಇದರಲ್ಲಿ ರಫ್ತು ಮಾಡುವ ಗುಣಮಟ್ಟದ್ದು ಮತ್ತು ರಫ್ತು ಮಾಡದೆ ಇರುವ ಗುಣಮಟ್ಟದ್ದು ಎಂಬ ವೈವಿಧ್ಯವಿತ್ತು. ಇದನ್ನು ಫೆನಾಸಿಯಾ ಬ್ರಾಂಡ್‌ ಹೆಸರಿನಲ್ಲಿ ಮಾರುತ್ತಿತ್ತು. ಈ ಉತ್ಪನ್ನ ದೇಶ ಮತ್ತು ವಿದೇಶದಲ್ಲಿ ಚರ್ಮದ ಉುತ್ಪನ್ನಗಳನ್ನು ತಯಾರು ಮಾಡುವ ಕಂಪನಿಗಳು ಖರೀದಿಸುತ್ತಿದ್ದವು. ಫೆನಾಸಿಯಾ ಲಿ. ಕಂಪನಿಯು 30-04-2008ರಂದು ಯುನೈಟೆಡ್‌‌ ಇಂಡಿಯಾ ಇನ್ಸುರೆನ್ಸ್‌ ಕಂಪನಿಯಿಂದ 7 ಕೋಟಿ ರುಪಾಯಿಗೆ ಸ್ಟ್ಯಾಂಡರ್ಡ್‌‌ ಫೈರ್‌ ಮತ್ತು ಸ್ಪೆಶಿಯಲ್‌ ಪೆರಿಲ್‌ ಪಾಲಿ...