Posts

Showing posts from June, 2025

ಗ್ರಾಹಕ ರಕ್ಷಣೆ ಒಂದು ಆಂದೋಲನ

1. ಪ್ರಸ್ತಾವನೆ ಇವತ್ತು ಗ್ರಾಹಕ ಎಂಬ ಪದವು ವಿಶಾಲವಾದ ಅರ್ಥವ್ಯಾಪ್ತಿಯನ್ನು ಹೊಂದಿದೆ. ನಾವೆಲ್ಲರೂ ದೈನಂದಿನ ವ್ಯವಹಾರದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರೇ ಆಗಿರುತ್ತೇವೆ. ವ್ಯಕ್ತಿಯೊಬ್ಬ ಯಾವುದಾದರೂ ಒಂದು ವಸ್ತುವನ್ನು ಖರೀದಿಸಿದಾಗ ಅಥವಾ ಒಂದು ಸೇವೆಯನ್ನು ಪಡೆದುಕೊಂಡಾಗ ಅವನು ಗ್ರಾಹಕನಾಗುತ್ತಾನೆ. ಸ್ವಯಂ ಬಳಕೆಗಾಗಿ ನಿರ್ದಿಷ್ಟ ಮೌಲ್ಯದ ಹಣಕ್ಕೆ ಸರಕುಗಳನ್ನು ಖರೀದಿಸಿದ ಯಾವುದೇ ವ್ಯಕ್ತಿ ಗ್ರಾಹಕ. ಇಲ್ಲಿ ಸ್ವಯಂ ಬಳಕೆಗೆ ಎಂಬ ಪದಗಳು ಬಳಕೆಯಾಗಿರುವುದನ್ನು ಗಮನಿಸಬೇಕು. ಮರುಮಾರಾಟದ ಉದ್ದೇಶದಿಂದ ವಸ್ತುವನ್ನು ಖರೀದಿ ಮಾಡಿದ್ದರೆ ಆತ ಗ್ರಾಹಕನಾಗಿರುವುದಿಲ್ಲ. ಆಕ್ಸ್‌ಫರ್ಡ್‌ ನಿಘಂಟುವಿನಲ್ಲಿ ಕನ್ಸೂಮರ್‌ ಎಂಬುದಕ್ಕೆ ವಸ್ತು ಅಥವಾ ಸೇವೆಯನ್ನು ಖರೀದಿಸುವವನು ಎಂಬ ಅರ್ಥವನ್ನು ಹೇಳಲಾಗಿದೆ. ಬ್ಲಾಕ್‌ ಅವರ ಕಾನೂನು ನಿಘಂಟುವಿನಲ್ಲಿ ಬಳಕೆದಾರ ಎಂಬ ಅರ್ಥವಿದೆ. ಇಂದು ವ್ಯಾಪಾರ ಕ್ಷೇತ್ರದಲ್ಲಿ ಮತ್ತು ಅರ್ಥಶಾಸ್ತ್ರದಲ್ಲಿ ಗ್ರಾಹಕರನ್ನು ರಾಜರೆಂದೇ ಪರಿಗಣಿಸಲಾಗುತ್ತಿದೆ. ಈಗ ಮಾರುಕಟ್ಟೆಯ ಜಾಲ ವ್ಯಾಪಕವೂ ವಿಸ್ತಾರವೂ ಆಗಿದೆ. ಮೊದಲು ಸ್ವತಃ ನಾವೇ ಅಂಗಡಿಗಳಿಗೆ ತೆರಳಿ ನಮ್ಮ ಅಗತ್ಯದ ವಸ್ತುಗಳನ್ನು ಖರೀದಿಸಬಹುದಾಗಿತ್ತು. ಆದರೆ ಇಂದು ಆನ್‌ಲೈನ್‌ ವ್ಯಾಪಾರದ ಭರಾಟೆಯೂ ಜೋರಾಗಿದೆ. ಮನೆಯಲ್ಲಿಯೇ ಕುಳಿತು ತಮಗೆ ಬೇಕಾದ ವಸ್ತುವಿಗೆ ಆದೇಶ ನೀಡಿ ಅದನ್ನು ಪಡೆಯಬಹುದು. ಹೇಗೆ ವ್ಯಾಪಾರದ ಜಾಲವು ವಿಸ್ತಾರವಾಗುತ್ತದೆಯೋ ಅದೇ ರೀತಿ...

ಬಸ್ಸಿನಲ್ಲಿ ತಿಗಣೆ ಕಚ್ಚಿದ್ದಕ್ಕೆ ಪರಿಹಾರ

* ಆಸ್ಪತ್ರೆ ವೆಚ್ಚ ಮತ್ತು 1 ಲಕ್ಷ ರು. ಪರಿಹಾರ ಜೀವನದಲ್ಲಿ ಒಮ್ಮೆಯಾದರೂ ಬಸ್ ಹತ್ತದವರು ಯಾರೂ ಇಲ್ಲ. ಬಸ್‌ ಪ್ರಯಾಣದಲ್ಲಿ ಇಲ್ಲದ ಅವಸ್ಥೆಪಟ್ಟು ಗೊಣಗಿಕೊಂಡು ಸುಮ್ಮನಾಗುವವರೇ ಎಲ್ಲರೂ. ಹರಿದ ಸೀಟು, ಮಳೆ ಬಂದರೆ ಕಿಟಕಿಯಿಂದ ಒಳ ಬರುವ ನೀರು, ತಿಗಣೆ ಕಾಟ, ಸ್ವಚ್ಛತೆ ಇಲ್ಲದಿರುವುದು ಇವೆಲ್ಲ ಹಲವರಿಗೆ ಮಾಮೂಲಿಯಾದರೆ ಕೆಲವರಿಗೆ ಕಿರಿಕಿರಿ. ಇದರ ಬಗ್ಗೆ ದೂರು ನೀಡಿ ಪರಿಹಾರ ಪಡೆಯಬಹುದು ಎಂದು ಯೋಚಿಸುವವರು ಇದ್ದಾರೆಯೆ? ಬಸ್ಸಲ್ಲಿ ತಿಗಣೆ ಕಡಿಯಿತು ಎಂದು ಗ್ರಾಹಕ ವೇದಿಕೆಗೆ ಹೋಗಿ ಪರಿಹಾರ ಪಡೆದವರು ಒಬ್ಬರಿದ್ದಾರೆ. ಚಿತ್ರನಟ ಶೋಭರಾಜ್‌ ಮತ್ತು ಅವರ ಪತ್ನಿ ದೀಪಿಕಾ ಸುವರ್ಣ 2022ರ ಆಗಸ್ಟ್‌ 16ರಂದು ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸಲು ಸೀಬರ್ಡ್‌ ಕಂಪನಿಯ ಸ್ಲೀಪರ್‌ ಕೋಚ್‌ ಬಸ್ಸಿನಲ್ಲಿ ಸೀಟನ್ನು ಕಾಯ್ದಿರಿಸಿದ್ದರು. ರೆಡ್ ಬಸ್‌ ಆನ್‌ ಲೈನ್‌ ಆ್ಯಪ್‌ ಮೂಲಕ ಟಿಕೆಟ್‌ ಬುಕ್‌ ಆಗಿತ್ತು. ಬಸ್‌ ಚೆನ್ನಾಗಿದೆಯೇ ಎಂದೆಲ್ಲ ಮೊದಲೇ ವಿಚಾರಿಸಿಯೇ ನಂತರ ಹಣ ಸಂದಾಯ ಮಾಡಿದ್ದರು. ಪ್ರಯಾಣ ಆರಂಭವಾಯಿತು. ಸ್ವಲ್ಪ ಹೊತ್ತಿನಲ್ಲಿಯೇ ಸೀಟಿನಲ್ಲಿ ಅಡಗಿದ್ದ ತಿಗಣೆಗಳು ರಕ್ತ ಹೀರಲು ಆರಂಭಿಸಿದವು. ಒಂದೆರಡನ್ನು ಅಲ್ಲಿಯೇ ಹೊಸಕಿ ಹಾಕಿದರು. ಆದರೆ ಅವು ಸುಮ್ಮನಾಗಲಿಲ್ಲ. ತಿಗಣೆಗೆ ಸಿಲೆಬ್ರಿಟಿಯಾದರೇನು, ಸಾಮಾನ್ಯ ಆದರೇನು? ದೀಪಿಕಾ ಬಸ್ಸಿನ ಸಿಬ್ಬಂದಿಯನ್ನು ಕೂಗಿ ಕರೆದು ವಿಷಯ ತಿಳಿಸಿದರು. ಚಲಿಸುವ ಬಸ್ಸಿನಲ್ಲಿ ಅವರೇನು ಮಾಡಬಲ್ಲರು....

ನೂರರ ರಾಖಿ ತಲುಪಿಸದ ಅಮೆಜಾನ್‌ಗೆ 40 ಸಾವಿರ ರು. ದಂಡ

* ಆನ್‌ಲೈನ್‌ ವ್ಯಾಪಾರದ ಮೋಸಕ್ಕೂ ಗ್ರಾಹಕ ವೇದಿಕೆಗೆ ಹೋಗಬಹುದು ಮಾರುಕಟ್ಟೆಯು ಇಂದು ತಿವಿಕ್ರಮ ರೂಪವನ್ನು ತಾಳಿದೆ. ಮಾರುವಾತ ಎಲ್ಲಿಯೋ ಕುಳಿತಿರುತ್ತಾನೆ. ಅವನನ್ನು ನೀವು ನೋಡಿರುವುದೇ ಇಲ್ಲ. ಆನ್‌ಲೈನ್‌ನಲ್ಲಿ ನೀವು ವಸ್ತುವೊಂದನ್ನು ಖರೀದಿಸಲು ಆದೇಶ ಮಾಡುತ್ತೀರಿ. ಅದು ನಿಮಗೆ ಬಂದು ತಲುಪುತ್ತದೆ. ನಿಮ್ಮ ವಸ್ತುವನ್ನು ನಾವು ಮಾರಾಟ ಮಾಡುತ್ತೇವೆ ಎನ್ನುವ ಹಲವು ಸಂಸ್ಥೆಗಳು ಇಂದು ಹುಟ್ಟಿಕೊಂಡಿವೆ. ಅಮೆಜಾನ್‌, ಫ್ಲಿಕ್‌ಕಾರ್ಟ್‌ ಹೀಗೆ ಹಲವಾರು ಸಂಸ್ಥೆಗಳು ಈ ಕೆಲಸವನ್ನು ಮಾಡುತ್ತಿವೆ. ಆನ್‌ಲೈನ್‌ನಲ್ಲಿ ನೀವು ಹೀಗೆ ವಸ್ತುವನ್ನು ಖರೀದಿಸಿದಾಗ ನಿಮಗೆ ಮೋಸವಾದರೆ ಅಥವಾ ಅವರ ಸೇವೆಯಲ್ಲಿ ನ್ಯೂನತೆ ಕಂಡುಬಂದರೆ ಯಾರನ್ನು ಕಟಕಟೆಗೆ ಎಳೆಯಬೇಕು ಎಂಬ ಗೊಂದಲ ಹಲವು ಗ್ರಾಹಕರಲ್ಲಿದೆ. ಅಂಥವರಿಗೆ ಮಾರ್ಗದರ್ಶಿಯಾಗಬಲ್ಲ ಒಂದು ತೀರ್ಪು ಇಲ್ಲಿದೆ. ಇದು ಮುಂಬಯಿಯಲ್ಲಿ 2019ರಲ್ಲಿ ನಡೆದದ್ದು. ಕೇವಲ ನೂರು ರುಪಾಯಿಯ ರಾಖಿಯನ್ನು ವಿಳಾಸದಾರರಿಗೆ ತಲುಪಿಸದ್ದಕ್ಕೆ ಅಮೆಜಾನ್‌‌ನಂಥ ಗಜ ಗಾತ್ರದ ಸಂಸ್ಥೆಯನ್ನು ಇರುವೆಯಂಥ ಗ್ರಾಹಕರೊಬ್ಬರು ಗ್ರಾಹಕ ವೇದಿಕೆಯ ಮೆಟ್ಟಿಲೇರುವಂತೆ ಮಾಡಿ ದಂಡವನ್ನೂ ಕಕ್ಕಿಸಿದ್ದರು. ಹಿಂದಿ ಭಾಷಿಕ ಪ್ರದೇಶಗಳಲ್ಲಿ ರಕ್ಷಾ ಬಂಧನದ ದಿನ ಸಹೋದರಿಯರು ತಮ್ಮ ಸಹೋದರರಿಗೆ ರಾಖಿಯನ್ನು ಕಟ್ಟಿ ಅವರಿಂದ ರಕ್ಷಣೆಯ ಭರವಸೆಯನ್ನು ಪಡೆದುಕೊಳ್ಳುತ್ತಾರೆ. ಮಹಿಳೆಯೊಬ್ಬರು ತಮ್ಮ ಸಹೋದರನಿಗೆ ಕಳುಹಿಸಲು 100 ರುಪಾಯಿಯ ರಾಖಿಯನ್...

ನೀರಿನ ಬಾಟಲಿಗೆ 1 ರು. ಜಿಎಸ್‌ಟಿ ಪಡೆದ ಹೊಟೇಲಿಗೆ 8 ಸಾವಿರ ದಂಡ

* ಎರಡನೆ ಬಾರಿ ಜಿಎಸ್‌ಟಿ ಪಡೆದದ್ದು ಕಾನೂನು ಬಾಹಿರ ಹೊಟೇಲಿನವರು ನೀರಿನ ಬಾಟಲಿಗೆ 1 ರುಪಾಯಿ ಜಿಎಸ್‌ಟಿ ಸೇರಿಸಿ ಬಿಲ್‌‌ ಮಾಡಿದ್ದಕ್ಕೆ ಗ್ರಾಹಕ ಆಯೋಗದಿಂದ 8 ಸಾವಿರ ರುಪಾಯಿ ದಂಡಕ್ಕೆ ಒಳಗಾದ ಘಟನೆ ಭೋಪಾಲಿನಲ್ಲಿ ನಡೆದಿದೆ. ನೀರಿನ ಬಾಟಲಿನ ಮೇಲೆ ಇರುವ ಮುದ್ರಿತ ಬೆಲೆ 20 ರುಪಾಯಿ. ಇದು ಹೊಟೇಲಿನವರಿಂದಾದ ಸೇವಾ ನ್ಯೂನತೆ ಎಂದು ಗ್ರಾಹಕ ಆಯೋಗ ಪರಿಗಣಿಸಿತು. ದೂರುದಾರ ಐಶ್ವರ್ಯ ಅವರು ತಮ್ಮ ಸ್ನೇಹಿತರೊಂದಿಗೆ 2021ರ ಅಕ್ಟೋಬರ್‌ನಲ್ಲಿ ಭೋಪಾಲದಲ್ಲಿಯ ಒಂದು ಹೊಟೇಲಿಗೆ ಊಟಕ್ಕೆ ಹೋಗಿದ್ದರು. ಸ್ನೇಹಿತರೆಲ್ಲ ಸೇರಿ ಚೆನ್ನಾಗಿಯೇ ತಿಂದು ಮಜಾ ಮಾಡಿದ್ದರು. ಊಟದ ಕೊನೆಯಲ್ಲಿ ಬಿಲ್‌ ಬಂತು. ಇವರು ಕೇಳದಿದ್ದರೂ ಅದು ಬಂದೇ ಬರುತ್ತದೆ. ಆ ಬಿಲ್‌ನಲ್ಲಿ ನೀರಿನ ಬಾಟಲಿಗೆ 29 ರುಪಾಯಿ ಎಂದು ಬರೆಯಲಾಗಿತ್ತು. ಅದರಲ್ಲಿ ಜಿಎಸ್‌ಟಿ 1 ರುಪಾಯಿ ಎಂದಿತ್ತು. ಐಶ್ವರ್ಯ ಅವರಿಗೆ ಆಶ್ಚರ್ಯವಾಯಿತು. 20 ರುಪಾಯಿಯ ನೀರಿನ ಬಾಟಲಿಗೆ 9 ರುಪಾಯಿ ಹೆಚ್ಚಿಗೆ ಪಡೆದುದಲ್ಲದೆ 1 ರುಪಾಯಿ ಜಿಎಸ್‌ಟಿ ಹೇಗೆ ಸೇರಿಸಿದ್ದೀರಿ ಎಂದು ಅವರು ಆ ಹೊಟೇಲಿನವರೊಂದಿಗೆ ವಾದಿಸಿದರು. ವಾತಾನುಕೂಲಿ ಕೋಣೆ, ಕುಳಿತುಕೊಳ್ಳಲು ಕುರ್ಚಿ. ಟೇಬಲ್‌ ಸರ್ವಿಸ್‌ ಇದೆಲ್ಲವೂ ಆ ಹೆಚ್ಚುವರಿ ಹಣದಲ್ಲಿ ಸೇರಿದೆ ಎಂಬುದು ಹೊಟೇಲಿನವರ ಸಮಜಾಯಿಸಿ. ಅವರೊಂದು ಹೇಳಿದರೆ ಇವರೊಂದು ಹೇಳುವುದು. ಕೊನೆಗೂ ಅವರು ಆ ಹಣವನ್ನು ಹಿಂದಕ್ಕೆ ಕೊಡಲೇ ಇಲ್ಲ. ಸಾಮಾನ್ಯದವರಾಗಿದ್ದರೆ ಹೋಗಲಿ ಬಿಡು ಎಂದು ಸ...