Posts

ಗ್ರಾಹಕ ರಕ್ಷಣೆ ಒಂದು ಆಂದೋಲನ

1. ಪ್ರಸ್ತಾವನೆ ಇವತ್ತು ಗ್ರಾಹಕ ಎಂಬ ಪದವು ವಿಶಾಲವಾದ ಅರ್ಥವ್ಯಾಪ್ತಿಯನ್ನು ಹೊಂದಿದೆ. ನಾವೆಲ್ಲರೂ ದೈನಂದಿನ ವ್ಯವಹಾರದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರೇ ಆಗಿರುತ್ತೇವೆ. ವ್ಯಕ್ತಿಯೊಬ್ಬ ಯಾವುದಾದರೂ ಒಂದು ವಸ್ತುವನ್ನು ಖರೀದಿಸಿದಾಗ ಅಥವಾ ಒಂದು ಸೇವೆಯನ್ನು ಪಡೆದುಕೊಂಡಾಗ ಅವನು ಗ್ರಾಹಕನಾಗುತ್ತಾನೆ. ಸ್ವಯಂ ಬಳಕೆಗಾಗಿ ನಿರ್ದಿಷ್ಟ ಮೌಲ್ಯದ ಹಣಕ್ಕೆ ಸರಕುಗಳನ್ನು ಖರೀದಿಸಿದ ಯಾವುದೇ ವ್ಯಕ್ತಿ ಗ್ರಾಹಕ. ಇಲ್ಲಿ ಸ್ವಯಂ ಬಳಕೆಗೆ ಎಂಬ ಪದಗಳು ಬಳಕೆಯಾಗಿರುವುದನ್ನು ಗಮನಿಸಬೇಕು. ಮರುಮಾರಾಟದ ಉದ್ದೇಶದಿಂದ ವಸ್ತುವನ್ನು ಖರೀದಿ ಮಾಡಿದ್ದರೆ ಆತ ಗ್ರಾಹಕನಾಗಿರುವುದಿಲ್ಲ. ಆಕ್ಸ್‌ಫರ್ಡ್‌ ನಿಘಂಟುವಿನಲ್ಲಿ ಕನ್ಸೂಮರ್‌ ಎಂಬುದಕ್ಕೆ ವಸ್ತು ಅಥವಾ ಸೇವೆಯನ್ನು ಖರೀದಿಸುವವನು ಎಂಬ ಅರ್ಥವನ್ನು ಹೇಳಲಾಗಿದೆ. ಬ್ಲಾಕ್‌ ಅವರ ಕಾನೂನು ನಿಘಂಟುವಿನಲ್ಲಿ ಬಳಕೆದಾರ ಎಂಬ ಅರ್ಥವಿದೆ. ಇಂದು ವ್ಯಾಪಾರ ಕ್ಷೇತ್ರದಲ್ಲಿ ಮತ್ತು ಅರ್ಥಶಾಸ್ತ್ರದಲ್ಲಿ ಗ್ರಾಹಕರನ್ನು ರಾಜರೆಂದೇ ಪರಿಗಣಿಸಲಾಗುತ್ತಿದೆ. ಈಗ ಮಾರುಕಟ್ಟೆಯ ಜಾಲ ವ್ಯಾಪಕವೂ ವಿಸ್ತಾರವೂ ಆಗಿದೆ. ಮೊದಲು ಸ್ವತಃ ನಾವೇ ಅಂಗಡಿಗಳಿಗೆ ತೆರಳಿ ನಮ್ಮ ಅಗತ್ಯದ ವಸ್ತುಗಳನ್ನು ಖರೀದಿಸಬಹುದಾಗಿತ್ತು. ಆದರೆ ಇಂದು ಆನ್‌ಲೈನ್‌ ವ್ಯಾಪಾರದ ಭರಾಟೆಯೂ ಜೋರಾಗಿದೆ. ಮನೆಯಲ್ಲಿಯೇ ಕುಳಿತು ತಮಗೆ ಬೇಕಾದ ವಸ್ತುವಿಗೆ ಆದೇಶ ನೀಡಿ ಅದನ್ನು ಪಡೆಯಬಹುದು. ಹೇಗೆ ವ್ಯಾಪಾರದ ಜಾಲವು ವಿಸ್ತಾರವಾಗುತ್ತದೆಯೋ ಅದೇ ರೀತಿ...

ಬಸ್ಸಿನಲ್ಲಿ ತಿಗಣೆ ಕಚ್ಚಿದ್ದಕ್ಕೆ ಪರಿಹಾರ

* ಆಸ್ಪತ್ರೆ ವೆಚ್ಚ ಮತ್ತು 1 ಲಕ್ಷ ರು. ಪರಿಹಾರ ಜೀವನದಲ್ಲಿ ಒಮ್ಮೆಯಾದರೂ ಬಸ್ ಹತ್ತದವರು ಯಾರೂ ಇಲ್ಲ. ಬಸ್‌ ಪ್ರಯಾಣದಲ್ಲಿ ಇಲ್ಲದ ಅವಸ್ಥೆಪಟ್ಟು ಗೊಣಗಿಕೊಂಡು ಸುಮ್ಮನಾಗುವವರೇ ಎಲ್ಲರೂ. ಹರಿದ ಸೀಟು, ಮಳೆ ಬಂದರೆ ಕಿಟಕಿಯಿಂದ ಒಳ ಬರುವ ನೀರು, ತಿಗಣೆ ಕಾಟ, ಸ್ವಚ್ಛತೆ ಇಲ್ಲದಿರುವುದು ಇವೆಲ್ಲ ಹಲವರಿಗೆ ಮಾಮೂಲಿಯಾದರೆ ಕೆಲವರಿಗೆ ಕಿರಿಕಿರಿ. ಇದರ ಬಗ್ಗೆ ದೂರು ನೀಡಿ ಪರಿಹಾರ ಪಡೆಯಬಹುದು ಎಂದು ಯೋಚಿಸುವವರು ಇದ್ದಾರೆಯೆ? ಬಸ್ಸಲ್ಲಿ ತಿಗಣೆ ಕಡಿಯಿತು ಎಂದು ಗ್ರಾಹಕ ವೇದಿಕೆಗೆ ಹೋಗಿ ಪರಿಹಾರ ಪಡೆದವರು ಒಬ್ಬರಿದ್ದಾರೆ. ಚಿತ್ರನಟ ಶೋಭರಾಜ್‌ ಮತ್ತು ಅವರ ಪತ್ನಿ ದೀಪಿಕಾ ಸುವರ್ಣ 2022ರ ಆಗಸ್ಟ್‌ 16ರಂದು ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸಲು ಸೀಬರ್ಡ್‌ ಕಂಪನಿಯ ಸ್ಲೀಪರ್‌ ಕೋಚ್‌ ಬಸ್ಸಿನಲ್ಲಿ ಸೀಟನ್ನು ಕಾಯ್ದಿರಿಸಿದ್ದರು. ರೆಡ್ ಬಸ್‌ ಆನ್‌ ಲೈನ್‌ ಆ್ಯಪ್‌ ಮೂಲಕ ಟಿಕೆಟ್‌ ಬುಕ್‌ ಆಗಿತ್ತು. ಬಸ್‌ ಚೆನ್ನಾಗಿದೆಯೇ ಎಂದೆಲ್ಲ ಮೊದಲೇ ವಿಚಾರಿಸಿಯೇ ನಂತರ ಹಣ ಸಂದಾಯ ಮಾಡಿದ್ದರು. ಪ್ರಯಾಣ ಆರಂಭವಾಯಿತು. ಸ್ವಲ್ಪ ಹೊತ್ತಿನಲ್ಲಿಯೇ ಸೀಟಿನಲ್ಲಿ ಅಡಗಿದ್ದ ತಿಗಣೆಗಳು ರಕ್ತ ಹೀರಲು ಆರಂಭಿಸಿದವು. ಒಂದೆರಡನ್ನು ಅಲ್ಲಿಯೇ ಹೊಸಕಿ ಹಾಕಿದರು. ಆದರೆ ಅವು ಸುಮ್ಮನಾಗಲಿಲ್ಲ. ತಿಗಣೆಗೆ ಸಿಲೆಬ್ರಿಟಿಯಾದರೇನು, ಸಾಮಾನ್ಯ ಆದರೇನು? ದೀಪಿಕಾ ಬಸ್ಸಿನ ಸಿಬ್ಬಂದಿಯನ್ನು ಕೂಗಿ ಕರೆದು ವಿಷಯ ತಿಳಿಸಿದರು. ಚಲಿಸುವ ಬಸ್ಸಿನಲ್ಲಿ ಅವರೇನು ಮಾಡಬಲ್ಲರು....

ನೂರರ ರಾಖಿ ತಲುಪಿಸದ ಅಮೆಜಾನ್‌ಗೆ 40 ಸಾವಿರ ರು. ದಂಡ

* ಆನ್‌ಲೈನ್‌ ವ್ಯಾಪಾರದ ಮೋಸಕ್ಕೂ ಗ್ರಾಹಕ ವೇದಿಕೆಗೆ ಹೋಗಬಹುದು ಮಾರುಕಟ್ಟೆಯು ಇಂದು ತಿವಿಕ್ರಮ ರೂಪವನ್ನು ತಾಳಿದೆ. ಮಾರುವಾತ ಎಲ್ಲಿಯೋ ಕುಳಿತಿರುತ್ತಾನೆ. ಅವನನ್ನು ನೀವು ನೋಡಿರುವುದೇ ಇಲ್ಲ. ಆನ್‌ಲೈನ್‌ನಲ್ಲಿ ನೀವು ವಸ್ತುವೊಂದನ್ನು ಖರೀದಿಸಲು ಆದೇಶ ಮಾಡುತ್ತೀರಿ. ಅದು ನಿಮಗೆ ಬಂದು ತಲುಪುತ್ತದೆ. ನಿಮ್ಮ ವಸ್ತುವನ್ನು ನಾವು ಮಾರಾಟ ಮಾಡುತ್ತೇವೆ ಎನ್ನುವ ಹಲವು ಸಂಸ್ಥೆಗಳು ಇಂದು ಹುಟ್ಟಿಕೊಂಡಿವೆ. ಅಮೆಜಾನ್‌, ಫ್ಲಿಕ್‌ಕಾರ್ಟ್‌ ಹೀಗೆ ಹಲವಾರು ಸಂಸ್ಥೆಗಳು ಈ ಕೆಲಸವನ್ನು ಮಾಡುತ್ತಿವೆ. ಆನ್‌ಲೈನ್‌ನಲ್ಲಿ ನೀವು ಹೀಗೆ ವಸ್ತುವನ್ನು ಖರೀದಿಸಿದಾಗ ನಿಮಗೆ ಮೋಸವಾದರೆ ಅಥವಾ ಅವರ ಸೇವೆಯಲ್ಲಿ ನ್ಯೂನತೆ ಕಂಡುಬಂದರೆ ಯಾರನ್ನು ಕಟಕಟೆಗೆ ಎಳೆಯಬೇಕು ಎಂಬ ಗೊಂದಲ ಹಲವು ಗ್ರಾಹಕರಲ್ಲಿದೆ. ಅಂಥವರಿಗೆ ಮಾರ್ಗದರ್ಶಿಯಾಗಬಲ್ಲ ಒಂದು ತೀರ್ಪು ಇಲ್ಲಿದೆ. ಇದು ಮುಂಬಯಿಯಲ್ಲಿ 2019ರಲ್ಲಿ ನಡೆದದ್ದು. ಕೇವಲ ನೂರು ರುಪಾಯಿಯ ರಾಖಿಯನ್ನು ವಿಳಾಸದಾರರಿಗೆ ತಲುಪಿಸದ್ದಕ್ಕೆ ಅಮೆಜಾನ್‌‌ನಂಥ ಗಜ ಗಾತ್ರದ ಸಂಸ್ಥೆಯನ್ನು ಇರುವೆಯಂಥ ಗ್ರಾಹಕರೊಬ್ಬರು ಗ್ರಾಹಕ ವೇದಿಕೆಯ ಮೆಟ್ಟಿಲೇರುವಂತೆ ಮಾಡಿ ದಂಡವನ್ನೂ ಕಕ್ಕಿಸಿದ್ದರು. ಹಿಂದಿ ಭಾಷಿಕ ಪ್ರದೇಶಗಳಲ್ಲಿ ರಕ್ಷಾ ಬಂಧನದ ದಿನ ಸಹೋದರಿಯರು ತಮ್ಮ ಸಹೋದರರಿಗೆ ರಾಖಿಯನ್ನು ಕಟ್ಟಿ ಅವರಿಂದ ರಕ್ಷಣೆಯ ಭರವಸೆಯನ್ನು ಪಡೆದುಕೊಳ್ಳುತ್ತಾರೆ. ಮಹಿಳೆಯೊಬ್ಬರು ತಮ್ಮ ಸಹೋದರನಿಗೆ ಕಳುಹಿಸಲು 100 ರುಪಾಯಿಯ ರಾಖಿಯನ್...

ನೀರಿನ ಬಾಟಲಿಗೆ 1 ರು. ಜಿಎಸ್‌ಟಿ ಪಡೆದ ಹೊಟೇಲಿಗೆ 8 ಸಾವಿರ ದಂಡ

* ಎರಡನೆ ಬಾರಿ ಜಿಎಸ್‌ಟಿ ಪಡೆದದ್ದು ಕಾನೂನು ಬಾಹಿರ ಹೊಟೇಲಿನವರು ನೀರಿನ ಬಾಟಲಿಗೆ 1 ರುಪಾಯಿ ಜಿಎಸ್‌ಟಿ ಸೇರಿಸಿ ಬಿಲ್‌‌ ಮಾಡಿದ್ದಕ್ಕೆ ಗ್ರಾಹಕ ಆಯೋಗದಿಂದ 8 ಸಾವಿರ ರುಪಾಯಿ ದಂಡಕ್ಕೆ ಒಳಗಾದ ಘಟನೆ ಭೋಪಾಲಿನಲ್ಲಿ ನಡೆದಿದೆ. ನೀರಿನ ಬಾಟಲಿನ ಮೇಲೆ ಇರುವ ಮುದ್ರಿತ ಬೆಲೆ 20 ರುಪಾಯಿ. ಇದು ಹೊಟೇಲಿನವರಿಂದಾದ ಸೇವಾ ನ್ಯೂನತೆ ಎಂದು ಗ್ರಾಹಕ ಆಯೋಗ ಪರಿಗಣಿಸಿತು. ದೂರುದಾರ ಐಶ್ವರ್ಯ ಅವರು ತಮ್ಮ ಸ್ನೇಹಿತರೊಂದಿಗೆ 2021ರ ಅಕ್ಟೋಬರ್‌ನಲ್ಲಿ ಭೋಪಾಲದಲ್ಲಿಯ ಒಂದು ಹೊಟೇಲಿಗೆ ಊಟಕ್ಕೆ ಹೋಗಿದ್ದರು. ಸ್ನೇಹಿತರೆಲ್ಲ ಸೇರಿ ಚೆನ್ನಾಗಿಯೇ ತಿಂದು ಮಜಾ ಮಾಡಿದ್ದರು. ಊಟದ ಕೊನೆಯಲ್ಲಿ ಬಿಲ್‌ ಬಂತು. ಇವರು ಕೇಳದಿದ್ದರೂ ಅದು ಬಂದೇ ಬರುತ್ತದೆ. ಆ ಬಿಲ್‌ನಲ್ಲಿ ನೀರಿನ ಬಾಟಲಿಗೆ 29 ರುಪಾಯಿ ಎಂದು ಬರೆಯಲಾಗಿತ್ತು. ಅದರಲ್ಲಿ ಜಿಎಸ್‌ಟಿ 1 ರುಪಾಯಿ ಎಂದಿತ್ತು. ಐಶ್ವರ್ಯ ಅವರಿಗೆ ಆಶ್ಚರ್ಯವಾಯಿತು. 20 ರುಪಾಯಿಯ ನೀರಿನ ಬಾಟಲಿಗೆ 9 ರುಪಾಯಿ ಹೆಚ್ಚಿಗೆ ಪಡೆದುದಲ್ಲದೆ 1 ರುಪಾಯಿ ಜಿಎಸ್‌ಟಿ ಹೇಗೆ ಸೇರಿಸಿದ್ದೀರಿ ಎಂದು ಅವರು ಆ ಹೊಟೇಲಿನವರೊಂದಿಗೆ ವಾದಿಸಿದರು. ವಾತಾನುಕೂಲಿ ಕೋಣೆ, ಕುಳಿತುಕೊಳ್ಳಲು ಕುರ್ಚಿ. ಟೇಬಲ್‌ ಸರ್ವಿಸ್‌ ಇದೆಲ್ಲವೂ ಆ ಹೆಚ್ಚುವರಿ ಹಣದಲ್ಲಿ ಸೇರಿದೆ ಎಂಬುದು ಹೊಟೇಲಿನವರ ಸಮಜಾಯಿಸಿ. ಅವರೊಂದು ಹೇಳಿದರೆ ಇವರೊಂದು ಹೇಳುವುದು. ಕೊನೆಗೂ ಅವರು ಆ ಹಣವನ್ನು ಹಿಂದಕ್ಕೆ ಕೊಡಲೇ ಇಲ್ಲ. ಸಾಮಾನ್ಯದವರಾಗಿದ್ದರೆ ಹೋಗಲಿ ಬಿಡು ಎಂದು ಸ...

ವಿಶ್ವವಿದ್ಯಾಲಯಗಳು ನೀಡುವ ಶಿಕ್ಷಣ ಸೇವೆಯಲ್ಲ

* ಶಿಕ್ಷಣ ಸಂಸ್ಥೆಗಳ ವ್ಯಾಜ್ಯ ಗ್ರಾಹಕ ಆಯೋಗದ ವ್ಯಾಪ್ತಿಗೆ ಬರುವುದಿಲ್ಲ ಶಿಕ್ಷಣ ಸಂಸ್ಥೆಗಳಿಂದ ನಡೆಯುವ ಸೇವಾನ್ಯೂನತೆಗೆ ಗ್ರಾಹಕ ನ್ಯಾಯಾಲಯಗಳಲ್ಲಿ ಪರಿಹಾರ ಸಿಗಬಹುದೆ ಎಂದು ಕೇಳಿದರೆ ಇಲ್ಲ ಎಂದೇ ಹೇಳಬೇಕು. ಒಂದು ಪ್ರಕರಣದಲ್ಲಿ ಜಿಲ್ಲಾ ವೇದಿಕೆ ಮತ್ತು ರಾಜ್ಯ ಆಯೋಗ ದೂರುದಾರರ ಪರವಾಗಿ ನೀಡಿದ ತೀರ್ಪನ್ನು ರಾಷ್ಟ್ರೀಯ ಆಯೋಗ ರದ್ದುಪಡಿಸಿದೆ. ಇದು ಪಶ್ಚಿಮ ಬಂಗಾಳದ ಹೌರಾದ ಶ್ರೇಯೋಸಿ ಚಟರ್ಜಿ ಮತ್ತು ರೆಜಿಸ್ಟ್ರಾರ್‌, ಮನೋನ್ಮನಿಯಮ್‌ ಸುಂದರನಾರ್ ಯುನಿವರ್ಸಿಟಿ, ಅಭಿಷೇಕಪಟ್ಟಿ, ತಿರುನೆಲ್ವೇಲಿ ನಡುವಿನ ಪ್ರಕರಣ. ಶ್ರೇಯೋಸಿ ಟರ್ಜಿಯವರು ಮೇಲೆ ಹೇಳಿದ ವಿಶ್ವವಿದ್ಯಾನಿಲಯದಿಂದ ಮಾರ್ಕೆಟಿಂಗ್‌ನಲ್ಲಿ ಎಂಬಿಎ ಮಾಡುತ್ತಿದ್ದರು. ಅವರು 2012ರ ಡಿಸೆಂಬರ್‌ನಲ್ಲಿ ಕೋರ್ಸ್‌ ಮುಗಿಸಿದರೂ ಪ್ರಮಾಣಪತ್ರ ನೀಡಿ ಪದವಿಯನ್ನು ದೃಢೀಕರಿಸಿಲ್ಲ ಎಂಬುದು ದೂರು. ಇದರಲ್ಲಿ ಸೇವಾನ್ಯೂನತೆ ತಲೆದೋರಿದೆ ಎಂದು 1.ಮನೋನ್ಮನಿಯಮ್‌ ಸುಂದರನಾರ್ ಯುನಿವರ್ಸಿಟಿ, 2.ಪಿಎಸ್‌ಎಸ್‌ ಪ್ರೊಫೆಶನಲ್‌ ಕಾಲೇಜು, ಕೋಲ್ಕತಾ ಮತ್ತು 3.ದುರ್ಗಾಪುರ ಸ್ಕೂಲ್‌ ಆಫ್‌ ಸೈನ್ಸ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌, ದುರ್ಗಾಪುರ, ಪ.ಬಂಗಾಳ ಇವರನ್ನು ಪ್ರತಿವಾದಿಗಳನ್ನಾಗಿ ಮಾಡಿ ಜಿಲ್ಲಾ ವೇದಿಕೆಯಲ್ಲಿ ದೂರನ್ನು ದಾಖಲಿಸಲಾಯಿತು. ತಮಗೆ ತಕ್ಷಣ ಮಾರ್ಕ್ಸ್‌ಕಾರ್ಡ್‌ ಹಾಗೂ ತಾತ್ಕಾಲಿಕ ಪ್ರಮಾಣಪತ್ರ ನೀಡುವಂತೆ ಆದೇಶಿಸಬೇಕು. ಜೊತೆಗೆ ತಮಗೆ ಪರಿಹಾರ ಮತ್ತು ವ್ಯಾಜ್ಯದ ವೆಚ್ಚವನ್ನು ಕೊಡ...

ಬ್ಯಾಂಕ್‌ ಸಿಬ್ಬಂದಿ ತಪ್ಪೆಸಗಿದರೆ ನಷ್ಟವನ್ನು ಅವರಿಂದಲೇ ವಸೂಲು ಮಾಡಬೇಕು

* ಒಂದೇ ದಿನ ಒಬ್ಬರೇ ಒಂದೇ ಮೊತ್ತದ ಎರಡು ಎಫ್‌ಡಿ ಮಾಡಿದ್ದರಿಂದ ಆದ ಗೊಂದಲ ಇದು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಮತ್ತು ಕೋಲ್ಕತಾದ ಸಮರ್‌ ರಾಯ್‌ ಚೌಧರಿ ನಡುವಿನ ಪ್ರಕರಣ. ದೂರುದಾರ ಸಮರ್‌ ರಾಯ್‌ ಚೌಧರಿ ಮತ್ತು ಅವರ ಪತ್ನಿ ಎಸ್‌ಬಿಐನಲ್ಲಿ ಎರಡು ನಿಶ್ಚಿತ ಠೇವಣಿಗಳನ್ನು ಮಾಡಿದ್ದರು. ಅವು TDcs0495619 ಮತ್ತು TDcs0495621. ಇವರೆಡನ್ನೂ ಠೇವಣಿ ಮಾಡಿದ ದಿನಾಂಕ 17-03-2007 ಹಾಗೂ ಅವುಗಳ ಮುಕ್ತಾಯದ ದಿನಾಂಕ 17-03-2011 ಆಗಿತ್ತು. ಠೇವಣಿ ಮೊತ್ತ ಕ್ರಮವಾಗಿ 54,425 ರು. ಮತ್ತು 5,59,668 ರು. ಹಾಗೂ ಅವುಗಳ ಪಕ್ವತೆಯ ಮೊತ್ತ 81,480 ರು. ಮತ್ತು 8,,22,762 ರು. ಆಗಿದ್ದವು. ಈ ಎರಡು ನಿಶ್ಚಿತ ಠೇವಣಿ ಮತ್ತು ಇನ್ನೊಂದು ನಿಶ್ಚಿತ ಠೇವಣಿಯ ಸರ್ಟಿಫಿಕೇಟುಗಳನ್ನು ಅಡವು ಮಾಡಿ ಚೌಧರಿಯವರು 2009ರ ಜನವರಿಯಲ್ಲಿ ಅದೇ ಬ್ಯಾಂಕಿನಲ್ಲಿ ಡಿಮಾಂಡ್‌ ಲೋನ್‌ ಪಡೆದುಕೊಳ್ಳುತ್ತಾರೆ. ಅವರು ಸಾಲ ತೀರಿಸಿದ ಬಳಿಕ ಆ ಸರ್ಟಿಫಿಕೇಟುಗಳನ್ನು ಅವರಿಗೆ ಮರಳಿಸಲಾಗುತ್ತದೆ. 17-03-2011ರಂದು ಈ ನಿಶ್ಚಿತ ಠೇವಣಿಗಳು ಪಕ್ವಗೊಂಡಾಗ ಅವುಗಳನ್ನು ಮತ್ತೊಂದು ಅವಧಿಗೆ ನವೀಕರಿಸಲು ಚೌಧರಿಯವರು ಬ್ಯಾಂಕಿಗೆ ಹೋಗುತ್ತಾರೆ. ಆದರೆ ಬ್ಯಾಂಕು, ಇವರ ಹೆಸರಿನಲ್ಲಿದ್ದ ಠೇವಣಿ ಖಾತೆಗಳು ನಿರ್ವಹಣೆಯಲ್ಲಿ ಇಲ್ಲ ಎಂದು ಹೇಳಿ ನವೀಕರಿಸುವುದಿಲ್ಲ. ಇದಕ್ಕೆ ಯಾವುದೇ ವಿವರಣೆಯನ್ನೂ ನೀಡುವುದಿಲ್ಲ. ಬಳಿಕ ಚೌಧರಿಯವರು ಬ್ಯಾಂಕಿನ ಮೆನೇಜರ್‌ಗೆ 23-05-2011 ರಂದು ಒಂದ...

ಚಾಲಕನೇ ವಾಹನ ಕದ್ದರೂ ವಿಮೆ ಕಂಪನಿ ಪರಿಹಾರ ನೀಡಬೇಕು

* ಕರಾರಿನ ಭಾಗವಲ್ಲದ, ಹೊರಗಿನ ನಿಯಮಗಳ ಲಾಭ ವಿಮೆ ಕಂಪನಿಗಿಲ್ಲ. ಪರಿಹಾರ ನೀಡಬೇಕಾಗಿ ಬಂದಾಗ ವಿಮೆ ಕಂಪನಿಗಳು ವಿಮೆಯ ಮೂಲ ಉದ್ದೇಶವನ್ನೇ ಮರೆತು ಪರಿಹಾರ ನೀಡುವುದನ್ನು ತಪ್ಪಿಸಲು ಇಲ್ಲದ ಕಾರಣಗಳನ್ನು ಹುಡುಕುತ್ತವೆ. ಕರಾರಿನ ಭಾಗವಲ್ಲದ ಮತ್ತು ಪಾಲಿಸಿದಾರರಿಗೆ ತಿಳಿಸದೇ ಇರುವ ನಿಯಮಗಳನ್ನು ಉುಲ್ಲೇಖಿಸುವುದನ್ನು ಪರಿಪಾಠ ಮಾಡಿಕೊಂಡಿವೆ. ಇವುಗಳ ಬಗ್ಗೆ ಗ್ರಾಹಕ ಆಯೋಗವಷ್ಟೇ ಅಲ್ಲ ಸುಪ್ರೀಂ ಕೋರ್ಟ್‌ ಕೂಡ ಮಾರ್ಗದರ್ಶಿಯಾಗುವಂಥ ತೀರ್ಪುಗಳನ್ನು ನೀಡಿದೆ. ಇದು ನ್ಯೂ ಇಂಡಿಯಾ ಅಶ್ಯುಅರನ್ಸ್‌ ಕಂ.ಲಿ. ಮತ್ತು ಮಹಾರಾಷ್ಟ್ರದ ಗೊಂಡಿಯಾದ ರಾಜಗೋಪಾಲಾಚಾರಿ ವಾರ್ಡ್‌ನ ತೀರ್ಥಸಿಂಗ್‌ ಅವತಾರಸಿಂಗ್‌ ಭಾಟಿಯಾ ನಡುವಿನ ಪ್ರಕರಣ. ತೀರ್ಥಸಿಂಗ್‌ ಅವರು ತಮ್ಮ ಅಶೋಕ್‌ ಲೇಲ್ಯಾಂಡ್‌ ಟ್ರಕ್‌ಗೆ ನ್ಯೂ ಇಂಡಿಯಾ ಅಶ್ಯುಅರನ್ಸ್‌ ಕಂಪನಿಯಿಂದ 03-05-2011 ರಿಂದ 02-05-2012ರ ಅವಧಿಗೆ ಕಮರ್ಷಿಯಲ್‌ ಪ್ಯಾಕೇಜ್‌ ವಿಮೆಯನ್ನು ಪಡೆದುಕೊಂಡಿದ್ದರು. ಪಾಲಿಸಿಯಲ್ಲಿ ಘೋಷಿಸಲಾದ ಮೌಲ್ಯ 21,66,000.00 ರುಪಾಯಿಗಳು. 28-06-2011ರಂದು ತೀರ್ಥಸಿಂಗ್‌ ಅವರ ಚಾಲಕ ಜುನೈದ್‌ ಇದ್ರಿಶ್ ಶೇಕ್‌ ಎನ್ನುವವ ರಸಗೊಬ್ಬರ ತುಂಬಿದ ಈ ಟ್ರಕ್‌ಅನ್ನು ಗೊಂಡಿಯಾದಿಂದ ಮಶಾಲ್‌ಗೆ ಒಯ್ದಿದ್ದ. ಅಲ್ಲಿ ರಾತ್ರಿ 7-30ರ ಸುಮಾರಿಗೆ ಮಾಲನ್ನು ಕೆಳಗಿಸಿ ಗಡ್ಚಿರೋಲಿಯ ದೇಸಾಯಿಗಂಜ್‌ಗೆ ಬರುತ್ತಾನೆ. ಅಲ್ಲಿ ಮೆ.ಸಾಯಿಬಾಬಾ ರೋಡ್‌ಲೈನ್ಸ್‌ನಲ್ಲಿ ಟ್ರಕ್‌ ನಿಲ್ಲಿಸಿ ನಿದ್ರೆಹೋಗುತ್ತಾನ...

ಸರ್ವೆ ವರದಿ ಬಂದ 30 ದಿನದೊಳಗೆ ವಿಮೆ ಪರಿಹಾರ ನೀಡುವುದು ಕಡ್ಡಾಯ

* ಸರ್ವೆಯರ್‌ ತನ್ನ ವರದಿಯನ್ನು 30ರಿಂದ45 ದಿನಗಳೊಳಗೆ ನೀಡಲೇಬೇಕು ವಿಮೆ ಕಂಪನಿಗಳು ಅಥವಾ ವಿಮೆ ಪಡೆದವರು ಹಾನಿಯ ಅಂದಾಜಿಗೆ ಸರ್ವೆಯರನ್ನು ನೇಮಿಸಿದಾಗ ಅವರು ಮನಬಂದಂತೆ ವಿಳಂಬ ಮಾಡಲು ಬರುವುದಿಲ್ಲ. ನೇಮಕ ಪತ್ರ ಸಿಕ್ಕ ಬಳಿಕ 30 ದಿನಗಳೊಳಗೆ ಹೆಚ್ಚೆಂದರೆ 45 ದಿನಗಳೊಳಗೆ ವರದಿ ಸಲ್ಲಿಸಬೇಕು. ಹೀಗೆ ವರದಿ ಸಲ್ಲಿಕೆಯಾದ 30 ದಿನಗಳೊಳಗೆ ವಿಮೆ ಕಂಪನಿ ಪರಿಹಾರ ಸಂದಾಯ ಮಾಡಬೇಕು. ಇದನ್ನು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌‌ಡಿಎ)ದ ನಿಯಮ 9 ಹೇಳುತ್ತದೆ. ಹಾಗೆಯೇ ಪರಿಹಾರ ನೀಡುವುದು ಆರು ತಿಂಗಳಿಗೂ ವಿಳಂಬವಾದರೆ ಬ್ಯಾಂಕ್‌ ಬಡ್ಡಿ ದರಕ್ಕಿಂತ ಶೇ.2ರಷ್ಟು ಹೆಚ್ಚಿಗೆ ನೀಡಬೇಕಾಗುತ್ತದೆ. ಈ ಪ್ರಕರಣ ಹೈದ್ರಾಬಾದದ ಮೆ.ಲೋಕೇಶ್‌ ಮೆಷಿನ್ಸ್‌ ಲಿ. ಮತ್ತು ನ್ಯೂ ಇಂಡಿಯಾ ಅಶ್ಯುಅರನ್ಸ್‌ ಕಂ.ಲಿ. ನಡುವಿನದು. ಮೆ.ಲೋಕೇಶ್‌ ಮೆಷಿನ್ಸ್‌ ಲಿ. ಇದು ಒಂದು ಪಬ್ಲಿಕ್‌ ಲಿ. ಕಂಪನಿ. ಇದು ಯಂತ್ರೋಪಕರಣಗಳು ಮತ್ತು ಬಿಡಿಭಾಗಗಳನ್ನು ತಯಾರಿಸುವ ಕಂಪನಿಯಾಗಿತ್ತು. ಟೆಲ್ಕೋ, ಅಶೋಕ್‌ ಲೇಲ್ಯಾಂಡ್‌, ಎಲ್‌ ಆ್ಯಂಡ್‌ ಟಿ, ಜಾಂಡೀರ್‌, ಮಹೀಂದ್ರಾ ಮತ್ತು ಮಹೀಂದ್ರಾ, ಎಸ್ಕಾರ್ಟ್‌, ಬಜಾಜ್‌ ಆಟೋ ಮತ್ತು ಹೊಂಡಾ ಮೋಟಾರ್ಸ್‌ನಂಥ ಪ್ರಮುಖ ಕಂಪನಿಗಳಿಗೆ ತನ್ನ ಉತ್ಪನ್ನವನ್ನು ಮಾರಾಟ ಮಾಡುತ್ತಿತ್ತು. ಇವರ ಹೆಚ್ಚಿದ ಬೇಡಿಕೆಗಳನ್ನು ಪೂರೈಸಲು ಮತ್ತು ತನ್ನ ವ್ಯವಹಾರವನ್ನು ವಿಸ್ತರಿಸಲು ಕಂಪನಿಯು ಜರ್ಮನಿಯಿಂದ ಕೆಲವು ಯಂತ್ರಗಳನ್ನು ತರಿಸಲ...

ಆಡಳಿತಾತ್ಮಕ ಲೋಪಗಳು ವಿಳಂಬ ಮನ್ನಾ ಕೋರಿಕೆಗೆ ಸಾಕಾಗದು

* ಮೇಲ್ಮನವಿ ವಿಳಂಬವಾಗಿ ಸಲ್ಲಿಸಿದ್ದಕ್ಕೆ ಕಾರಣಗಳು ಬಲವಾಗಿರಬೇಕು ಗ್ರಾಹಕ ವೇದಿಕೆಗಳಲ್ಲಿ ದೂರು ಸಲ್ಲಿಸಲು ಮತ್ತು ಮೇಲ್ಮನವಿ ಸಲ್ಲಿಸಲು ಕಾಲಮಿತಿ ಇರುತ್ತದೆ. ಆ ಕಾಲಮಿತಿಯನ್ನು ಮೀರಿ ದೂರು ಸಲ್ಲಿಸುವುದು ಮತ್ತು ಮೇಲ್ಮನವಿ ಸಲ್ಲಿಸುವುದನ್ನು ಮಾಡಿದರೆ ದೂರನ್ನು ಅಥವಾ ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸದೆಯೂ ಇರಬಹುದಾಗಿದೆ. ಸಾಮಾನ್ಯವಾಗಿ ಘಟನೆ ನಡೆದ ಎರಡು ವರ್ಷಗಳ ಒಳಗಾಗಿ ದೂರನ್ನು ಸಲ್ಲಿಸಬಹುದು. ಹಾಗೆಯೇ ಜಿಲ್ಲಾ ವೇದಿಕೆಯ ತೀರ್ಪಿನ ವಿರುದ್ಧ ರಾಜ್ಯ ಆಯೋಗದಲ್ಲಿ ತೀರ್ಪು ಬಂದ 45 ದಿನಗಳ ಒಳಗಾಗಿ ಮೇಲ್ಮನವಿ ಸಲ್ಲಿಸಬಹುದಾಗಿದೆ. ಅದೇ ರೀತಿ ರಾಜ್ಯ ಆಯೋಗದ ತೀರ್ಪಿನ ವಿರುದ್ಧ ರಾಷ್ಟ್ರೀಯ ಆಯೋಗದಲ್ಲಿ ತೀರ್ಪು ಬಂದ 45 ದಿನಗಳ ಒಳಗಾಗಿ ಮೇಲ್ಮನವಿ ಸಲ್ಲಿಸಬಹುದು. ರಾಷ್ಟ್ರೀಯ ಆಯೋಗದ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ 30 ದಿನಗಳ ಒಳಗಾಗಿ ಮೇಲ್ಮನವಿ ಸಲ್ಲಿಸಬಹುದಾಗಿದೆ. ಈ ಕಾಲಮಿತಿಯಿಂದಾಗಿ ಅನಗತ್ಯ ವಿಳಂಬವನ್ನು ತಪ್ಪಿಸಬಹುದಾಗಿದೆ. ಅತಿ ವಿಳಂಬವಾಗಿ ಸಲ್ಲಿಸಿದ ಮೇಲ್ಮನವಿಯೊಂದನ್ನು ರಾಜ್ಯ ಆಯೋಗ ವಜಾ ಮಾಡಿದ ಪ್ರಕರಣವೊಂದು ಇಲ್ಲಿದೆ. ಇದು ಮೆ.ವಿಹಾನ್‌ ಡೈರೆಕ್ಟ್‌ ಸೆಲ್ಲಿಂಗ್‌ (ಇಂಡಿಯಾ) ಪ್ರೈವೇಟ್‌ ಲಿ. ವಿರುದ್ಧ ಮಂಗಳೂರಿನ ಲೋಹಿತ್‌ ಶೆಟ್ಟಿ ಎಂಬವರ ದೂರು. ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ವೇದಿಕೆಯ ತೀರ್ಪಿನ ವಿರುದ್ಧ ವಿಹಾನ್‌ ಕಂಪನಿಯು ಸಲ್ಲಿಸಿದ ಮೇಲ್ಮನವಿಯಾಗಿತ್ತು. ಮೆ.ವಿಹಾನ್‌ ಡೈರೆಕ್ಟ್‌ ಸೆಲ್ಲ...

ಕಳುವಾದ ವಾಹನಕ್ಕೆ ಪರಿಹಾರ ನಿರಾಕರಿಸುವ ವಿಮೆ ಕಂಪನಿಯ ಯತ್ನ ವಿಫಲ

* ಕಳುವಾದ ನಂತರ ವಿಮೆ ಪಡೆಯಲಾಯಿತೆಂಬ ಅದರ ವಾದ ನಿಲ್ಲಲಿಲ್ಲ. ವಾಹನ ಕಳುವಾದ ಮಾರನೆ ದಿನ ವಿಮೆ ಪಡೆದು ಪರಿಹಾರ ಕೇಳಲಾಗುತ್ತಿದೆ ಎಂದು ವಿಮೆ ಕಂಪನಿಯು ವಾದಿಸಿ ಪರಿಹಾರವನ್ನು ನಿರಾಕರಿಸುವುದಕ್ಕೆ ಯತ್ನಿಸಿ ಜಿಲ್ಲಾ ವೇದಿಕೆಯ ತೀರ್ಪಿನ ವಿರುದ್ಧ ರಾಷ್ಟ್ರೀಯ ವೇದಿಕೆಯ ವರೆಗೂ ಹೋಗಿದ್ದು ತ್ವರಿತ ನ್ಯಾಯದಾನದ ಆಶಯಕ್ಕೆ ವಿರುದ್ಧವಾದದ್ದು ಮತ್ತು ಉದ್ದೇಶಪೂರ್ವಕ ವಿಳಂಬ ನೀತಿ ಅನುಸರಿಸಿದ್ದಕ್ಕೆ ಒಂದು ಉದಾಹರಣೆಯಾಗಿದೆ. ಈ ಪ್ರಕರಣ ಓರಿಯಂಟಲ್‌ ಇನ್ಸುರನ್ಸ್‌ ಕಂಪನಿ ಲಿ. ಮತ್ತು ಬಿಹಾರದ ಬೋಧಗಯಾದ ನೃಪೇಂದ್ರಕುಮಾರ ಇಂದ್ರಜಿತ್‌ ಸಿಂಗ್‌ ನಡುವಿನದು. ರಾಷ್ಟ್ರೀಯ ಆಯೋಗದಲ್ಲಿ ಮೇಲ್ಮನವಿಯನ್ನು 64 ದಿನ ವಿಳಂಬವಾಗಿ ಸಲ್ಲಿಸಲಾಗಿತ್ತು. ಆದರೆ ಪ್ರತಿವಾದಿ ವಕೀಲರಿಂದ ಯಾವುದೇ ಆಕ್ಷೇಪ ಇರದ ಕಾರಣ, ಅರ್ಹತೆಯ ಆಧಾರದಲ್ಲಿ ನ್ಯಾಯ ಸಿಗಲಿ ಎಂಬ ಉದ್ದೇಶದಿಂದ ವಿಳಂಬವನ್ನು ಮನ್ನಾ ಮಾಡಿ ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸಲಾಗಿತ್ತು. ಜಿಲ್ಲಾ ಗ್ರಾಹಕ ವೇದಿಕೆಯು 12-02-2008ರಂದು ನೀಡಿದ ತೀರ್ಪಿನಲ್ಲಿ ದೂರುದಾರರು ಸೂಕ್ತ ಸಿವಿಲ್‌ ನ್ಯಾಯಾಲಯದಲ್ಲಿ ಪರಿಹಾರ ಕಂಡುಕೊಳ್ಳಲು ಆದೇಶಿಸಿತ್ತು. ಇದರ ವಿರುದ್ಧ ಬಿಹಾರ ರಾಜ್ಯ ಗ್ರಾಹಕ ಆಯೋಗದಲ್ಲಿ ನೃಪೇಂದ್ರಕುಮಾರ ಅವರು ಮೇಲ್ಮನವಿಯನ್ನು ಸಲ್ಲಿಸುತ್ತಾರೆ. ರಾಜ್ಯ ಆಯೋಗವು ದೂರನ್ನು ಅಂಗೀಕರಿಸುತ್ತದೆ. 04-02-2016ರಂದು ನೀಡಿದ ತೀರ್ಪಿನಲ್ಲಿ ವಿಮೆ ಕಂಪನಿಗೆ ಕಳುವಾಗಿರುವ ವಾಹನಕ್ಕೆ ವಿಮೆ ಮೊತ್ತವ...

ವಿಮೆ ಕಂಪನಿಯ ನಿಯಮ ಮೀರಿಯೂ ಮೆಡಿಕ್ಲೇಮ್‌ ಪರಿಹಾರ

* ರಾಷ್ಟ್ರೀಯ ಆಯೋಗ ಕೂಡ ಜಿಲ್ಲಾ ವೇದಿಕೆಯ ತೀರ್ಪನ್ನು ಸಮ್ಮತಿಸಿತು ಗ್ರಾಹಕ ನ್ಯಾಯಾಲಯ ಕೆಲವೊಮ್ಮೆ ನಿಯಮಗಳ ಆಚೆಗೂ ಸಾಧ್ಯತೆಗಳ ಹುಡುಕಾಟ ನಡೆಸುತ್ತದೆ. ಗ್ರಾಹಕರಿಗೆ ನ್ಯಾಯ ಒದಗಿಸುವ ಕಟ್ಟಕಡೆಯ ಸಾಧ್ಯತೆಯನ್ನೂ ಅದು ಪರಿಶೀಲಿಸುತ್ತದೆ. ಮೆಡಿಕ್ಲೇಮ್‌ ಪಾಲಿಸಿಯಲ್ಲಿ ರೋಗಿ ಆಸ್ಪತ್ರೆಗೆ ಸೇರಿದಾಗ ಅದರ ವೆಚ್ಚ, ಔಷಧ ಎಲ್ಲದಕ್ಕೂ ವಿಮೆ ಸಿಗುತ್ತದೆ. ಆದರೆ ರೋಗಿ ಆಸ್ಪತ್ರೆಯಿಂದ ಮನೆಗೆ ಮರಳಿದಾಗ ರೋಗಕ್ಕೆ ಸಂಬಂಧಿಸಿ ಬಳಸುವ ಉಪಕರಣ ಖರೀದಿಸಿದರೆ ಅದಕ್ಕೆ ಪರಿಹಾರ ಸಿಗಬಹುದೆ? ಉದಾಹರಣೆಗೆ ಸರಾಗವಾಗಿ ಉಸಿರಾಡಲು ಮನೆಯಲ್ಲಿ ಬಳಸುವ ಸಿಪಿಎಪಿ ಯಂತ್ರ. ರೋಗಕ್ಕೆ ಸಂಬಂಧಿಸಿ ವೈದ್ಯರೇ ಖರೀದಿಗೆ ಸೂಚಿಸಿದ್ದು. ಇದಕ್ಕೆ ವಿಮೆ ಪರಿಹಾರ ಕೋರಿದಾಗ ಆದದ್ದು ಏನು? ಈ ಪ್ರಕರಣ ನ್ಯೂ ಇಂಡಿಯಾ ಅಶ್ಯೂಅರೆನ್ಸ್‌ ಕಂಪನಿ ಮತ್ತು ಹರ್ಯಾಣದ ಸೋನಾಲಿ ಸರೀನ್‌ ಅವರ ನಡುವಿನದು. ಇದು ಮೆಡಿಕ್ಲೇಮ್‌ಗೆ ಸಂಬಂಧಿಸಿದ್ದು. ಈ ಪ್ರಕರಣದಲ್ಲಿ ಜಿಲ್ಲಾ ವೇದಿಕೆ 08-03-2010ರಂದು ತೀರ್ಪು ನೀಡಿತ್ತು. ಮೇಲ್ಮನವಿಯಲ್ಲಿ ರಾಜ್ಯ ಆಯೋಗವು 09-12-2014ರಂದು ಜಿಲ್ಲಾ ವೇದಿಕೆಯ ತೀರ್ಪನ್ನು ಎತ್ತಿಹಿಡಿದಿತ್ತು. ಅದರ ವಿರುದ್ಧ ವಿಮೆ ಕಂಪನಿಯು ರಾಷ್ಟ್ರೀಯ ಆಯೋಗದಲ್ಲಿ ಮೇಲ್ಮನವಿಯನ್ನು ಸಲ್ಲಿಸಿತ್ತು. ಈ ಮೇಲ್ಮನವಿಯನ್ನು 40 ದಿನ ವಿಳಂಬವಾಗಿ ಸಲ್ಲಿಸಿತ್ತು. ಆದರೆ ಅದನ್ನು ಮನ್ನಿಸುವಂತೆ ಮನವಿ ಮಾಡಿಕೊಂಡಿತ್ತು. ವಿಳಂಬವಾಗಿದೆ ಎಂಬ ಏಕೈಕ ಕಾರಣಕ್ಕೆ ಅದನ್ನು ವಜಾ ...

ಹಾನಿ ಅಂದಾಜಿಗೆ ವಿಮೆ ಪಡೆದವರೂ ಸರ್ವೇಯರ್ ನೇಮಿಸಬಹುದು

* ಈ ಸಂಬಂಧ 2015ರಲ್ಲಿ ಐಆರ್‌‌ಡಿಎ ಸುತ್ತೋಲೆ ಹೊರಡಿಸಿದೆ ವಿಮೆ ಪರಿಹಾರ ನೀಡುವುದನ್ನು ತಪ್ಪಿಸಿಕೊಳ್ಳಲು ವಿಮೆ ಕಂಪನಿಗಳು ನಾನಾ ರೀತಿಯ ನೆಪಗಳನ್ನು ಮುಂದೊಡ್ಡುತ್ತವೆ. ಸರ್ವೇಯರ್‌ ನೇಮಕ ಮಾಡುವುದನ್ನು ವಿಳಂಬ ಮಾಡುತ್ತವೆ. ಆಗ ವಿಮೆ ಪಡೆದವರು ತಾವೇ ಸರ್ವೇಯರನನ್ನು ನೇಮಿಸಬಹುದೆ? ವಿಮೆ ಕಾನೂನು ಈ ಕುರಿತು ಏನು ಹೇಳುತ್ತದೆ? ರಾಷ್ಟ್ರೀಯ ಆಯೋಗದ ವರೆಗೂ ಮೇಲ್ಮನವಿ ಸಲ್ಲಿಸಿ ಮುಖಭಂಗ ಅನುಭವಿಸಿದ ನ್ಯೂ ಇಂಡಿಯಾ ಅಶ್ಯೂ್ರೆನ್ಸ್‌ ಕಂಪನಿಯ ಪ್ರಕರಣ ಇಲ್ಲಿದೆ. ಇದು ನ್ಯೂ ಇಂಡಿಯಾ ಅಶ್ಯೂ್ರೆನ್ಸ್‌ ಕಂಪನಿ ಮತ್ತು ದೆಹಲಿಯ ಮೆ.ಡೆಮ್ಮ್‌ ಅಟೋ ಇಂಜಿನಿಯರಿಂಗ್‌ ವರ್ಕ್ಸ್‌ ನಡುವಿನ ವ್ಯಾಜ್ಯ. ಮೆ.ಡೆಮ್ಮ್‌ ಅಟೋ ಇಂಜಿನಿಯರಿಂಗ್‌ ವರ್ಕ್ಸ್‌ ಇವರು 12-10-2006ರಿಂದ 11-10-2007ರ ಅವಧಿಗೆ ಬೆಂಕಿ ಮತ್ತು ಇತರ ಅನಾಹುತಗಳಿಂದ ಆಗುವ ಹಾನಿಯಿಂದ ರಕ್ಷಿಸಿಕೊಳ್ಳಲು 70 ಲಕ್ಷ ರುಪಾಯಿಗೆ ವಿಮೆಯನ್ನು ಪಡೆದುಕೊಂಡಿದ್ದರು. ಇದರ ವ್ಯಾಪ್ತಿಗೆ ಅವರ ಅಂಗಡಿಯಲ್ಲಿಯ ಎಲ್ಲ ಅಟೋ ಸಾಮಗ್ರಿಗಳ ಸಂಗ್ರಹ ಸೇರಿತ್ತು. ಅಂಗಡಿಯ ಸಾಮಾನುಗಳು ಪಂಜಾಬ್‌ ನ್ಯಾಶನಲ್‌ ಬ್ಯಾಂಕಿನ ಅಡಮಾನಕ್ಕೆ ಒಳಪಟ್ಟಿತ್ತು. 13-05-2007ರಂದು ರಾತ್ರಿ 9 ಗಂಟೆಗೆ ಈ ವಿಮೆಗೆ ಒಳಪಟ್ಟ ಅಂಗಡಿ ಇದ್ದ ಗುರುನಾನಕ ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ ಬೆಂಕಿ ಅನಾಹುತ ಸಂಭವಿಸಿತು. ಅಗ್ನಿಶಾಮಕ ದಳದವರು ಆಗಮಿಸಿ ಹಲವು ಗಂಟೆಗಳ ಕಾಲ ಶ್ರಮಿಸಿ ಬೆಂಕಿಯನ್ನು ನಂದಿಸಿದರು. ಪೊಲೀಸರಿಗೂ ಸುದ್ದಿ ತಿಳಿಸಲ...

ಷರತ್ತು ಉಲ್ಲಂಘಿಸಿದ ವಾಹನ ಅಪಘಾತಕ್ಕೀಡಾದರೆ ವಿಮೆ ಸಿಗುವುದೆ?

* ಅಂದಾಜಿಸಿದ ಹಾನಿಯ ಶೇ.75ರಷ್ಟು ಪರಿಹಾರ ನೀಡಬೇಕೆಂದು ಸುಪ್ರೀಂ ಕೋರ್ಟ್‌ ಆದೇಶವೇ ಇದೆ. ಪ್ರತಿಯೊಂದು ವಾಹನಕ್ಕೂ ವಿಮೆಯನ್ನು ಮಾಡಿಸುವುದು ಕಡ್ಡಾಯ. ಅದು ಸ್ವಂತ ಬಳಕೆಗಿರಬಹುದು ಅಥವಾ ಬಾಡಿಗೆಗೆ ಬಳಸುವ ಉದ್ದೇಶದ್ದು ಇರಬಹುದು. ನೀವು ಪಡೆದುಕೊಳ್ಳುವ ಸೌಲಭ್ಯಗಳ ಆಧಾರದ ಮೇಲೆ ವಿಮೆಯ ಕಂತು ನಿರ್ಧಾರವಾಗುತ್ತದೆ. ವಿಮೆಯ ಪಾಲಿಸಿಯಲ್ಲಿ ಹಲವು ಷರತ್ತುಗಳು ಇರುತ್ತದೆ. ಖಾಸಗಿ ನೊಂದಣಿ ವಾಹನವನ್ನು ಬಾಡಿಗೆಗೆ ಬಳಸುವಂತಿಲ್ಲ. ಚಾಲಕನು ಸರಿಯಾಗಿರುವ ಚಾಲನೆ ಪರವಾನಿಗೆಯನ್ನು ಹೊಂದಿರಬೇಕು, ಅಪ್ರಾಪ್ತರು ವಾಹನ ಚಲಾಯಿಸಬಾರದು, ಪರವಾನಿಗೆ ಇರುವುದಕ್ಕಿಂತ ಹೆಚ್ಚಿನ ಜನರನ್ನು ತುಂಬಬಾರದು ಇತ್ಯಾದಿ ಇತ್ಯಾದಿ. ಈ ಷರತ್ತಿನ ಉಲ್ಲಂಘನೆಯಾದರೆ ವಿಮೆ ಸಿಗುವುದಿಲ್ಲವೆ? ಸಿಗುವುದಾದರೆ ಎಷ್ಟು ಸಿಗುತ್ತದೆ? ಖಾಸಗಿ ನೊಂದಣಿ ವಾಹನವನ್ನು ಬಾಡಿಗೆಗೆ ಬಳಸಿದಾಗ ಅಪಘಾತವಾದ ಒಂದು ಪ್ರಕರಣ ಇಲ್ಲಿದೆ. ಮಧ್ಯಪ್ರದೇಶದ ಇಂದೋರದ ಅನಿಲ್‌ ರಾಮ ಸ್ವರೂಪ್‌ ಅವರು ವಾಹನವೊಂದನ್ನು ಖಾಸಗಿ ಬಳಕೆಗೆಂದು ನೊಂದಾಯಿಕೊಂಡು ಅದಕ್ಕೆ ಐಎಫ್‌ಎಫ್‌ಸಿಐ ಟೋಕಿಯೋ ಜಿಐಸಿ ಲಿ.ನಿಂದ ವಿಮೆ ಪಡೆದುಕೊಂಡಿದ್ದರು. ಆದರೆ ಅವರು ಆ ವಾಹನವನ್ನು ದೂರದರ್ಶನದ ಸಿಬ್ಬಂದಿಯ ಸಾಗಾಟಕ್ಕೆ ಬಳಸುತ್ತಿದ್ದರು. ಆ ವಾಹನ ಅಪಘಾತಕ್ಕೆ ಈಡಾಗುತ್ತದೆ. ಅವರು ವಿಮೆ ಪರಿಹಾರವನ್ನು ಕೋರುತ್ತಾರೆ. ವಿಮೆ ಕಂಪನಿಯು ಸರ್ವೇಯರ್‌ ಒಬ್ಬರನ್ನು ನೇಮಿಸುತ್ತದೆ. ಅವರು ಹಾನಿಯನ್ನು 1,96,850 ರು. ಎಂದು ವರದಿ ನೀಡ...

ಅತಿರಂಜಿತ ಹಾನಿ ತೋರಿಸಿ ಪರಿಹಾರ ಕೇಳಿದರೆ ವಿಮೆ ಸಿಗಲಾರದು

* ಸರ್ವೇಯರ್‌ ವರದಿ ನೀಡಿದ್ದೇ ಅಂತಿಮವಲ್ಲ, ವಿಮೆ ಕಂಪನಿ ಮತ್ತೊಮ್ಮೆ ಸರ್ವೆ ಮಾಡಿಸಬಹುದು ದೊಡ್ಡ ದೊಡ್ಡ ಉದ್ಯಮಗಳು ಆಕಸ್ಮಿಕಗಳಿಂದ ಆಗುವ ನಷ್ಟವನ್ನು ತಪ್ಪಿಸಿಕೊಳ್ಳಲು ವಿಮೆಯನ್ನು ಮಾಡಿಸುತ್ತವೆ. ಹಾಗೆ ಮಾಡಿಸಿದ ವಿಮೆಯ ಪರಿಹಾರ ಕೋರುವಾಗ ಎಷ್ಟು ಪ್ರಾಮಾಣಿಕರಾಗಿರುತ್ತೇವೋ ಅಷ್ಟು ಸುರಕ್ಷಿತ. ಹೇಗೂ ವಿಮೆ ಮಾಡಿಸಿದ್ದೇವಲ್ಲ, ಪರಿಹಾರ ಸ್ವಲ್ಪ ಹೆಚ್ಚಿಗೆಯೇ ಕೋರಬಹುದು ಎಂದು ದುರಾಸೆಗೆ ಒಳಗಾಗಿ ಸುಳ್ಳು ಲೆಕ್ಕ ತೋರಿಸಿದರೆ ಏನೂ ಸಿಗದೆ ಬರಿಗೈಯಲ್ಲಿ ಮರಳಬೇಕಾಗಬಹುದು. ಇಲ್ಲಿ ಅಂಥ ಒಂದು ಪ್ರಕರಣ ಇದೆ. ಪಶ್ಚಿಮ ಬಂಗಾಳದ ಹೂಗ್ಲಿಯ ಮೆ.ಫೆನಾಸಿಯಾ ಲಿ. ಕಂಪನಿಯು ಯುನೈಟೆಡ್‌‌ ಇಂಡಿಯಾ ಇನ್ಸುರೆನ್ಸ್‌ ಕಂಪನಿಯಿಂದ ಬೆಂಕಿ ಇತ್ಯಾದಿ ಅಪಘಾತಗಳಿಂದ ರಕ್ಷಣೆ ಪಡೆಯಲು ವಿಮೆಯನ್ನು ಪಡೆದಿತ್ತು. ಈ ಫೆನಾಸಿಯಾ ಕಂಪನಿಯು ವಿವಿಧ ರೀತಿಯ ರಾಸಾಯನಿಕಗಳನ್ನು ಉತ್ಪಾದಿಸುತ್ತಿತ್ತು. ಇದರಲ್ಲಿ ರಫ್ತು ಮಾಡುವ ಗುಣಮಟ್ಟದ್ದು ಮತ್ತು ರಫ್ತು ಮಾಡದೆ ಇರುವ ಗುಣಮಟ್ಟದ್ದು ಎಂಬ ವೈವಿಧ್ಯವಿತ್ತು. ಇದನ್ನು ಫೆನಾಸಿಯಾ ಬ್ರಾಂಡ್‌ ಹೆಸರಿನಲ್ಲಿ ಮಾರುತ್ತಿತ್ತು. ಈ ಉತ್ಪನ್ನ ದೇಶ ಮತ್ತು ವಿದೇಶದಲ್ಲಿ ಚರ್ಮದ ಉುತ್ಪನ್ನಗಳನ್ನು ತಯಾರು ಮಾಡುವ ಕಂಪನಿಗಳು ಖರೀದಿಸುತ್ತಿದ್ದವು. ಫೆನಾಸಿಯಾ ಲಿ. ಕಂಪನಿಯು 30-04-2008ರಂದು ಯುನೈಟೆಡ್‌‌ ಇಂಡಿಯಾ ಇನ್ಸುರೆನ್ಸ್‌ ಕಂಪನಿಯಿಂದ 7 ಕೋಟಿ ರುಪಾಯಿಗೆ ಸ್ಟ್ಯಾಂಡರ್ಡ್‌‌ ಫೈರ್‌ ಮತ್ತು ಸ್ಪೆಶಿಯಲ್‌ ಪೆರಿಲ್‌ ಪಾಲಿ...

ಫೋರ್ಜರಿ ವಿಷಯ ಇತ್ಯರ್ಥ ಮಾಡುವುದು ಗ್ರಾಹಕ ವೇದಿಕೆಯಲ್ಲ

* ಅದರ ಇತ್ಯರ್ಥದ ಬಳಿಕ ಬ್ಯಾಂಕಿನ ಸೇವಾನ್ಯೂನತೆ ವಿಚಾರಣೆ ಎಂದ ಆಯೋಗ ಗ್ರಾಹಕ ನ್ಯಾಯಾಲಯಗಳ ಸ್ಥಾಪನೆ ತ್ವರಿತ ನ್ಯಾಯದಾನ ಮತ್ತು ಕಡಿಮೆ ವೆಚ್ಚದಲ್ಲಿ ದೂರುದಾರರಿಗೆ ಪರಿಹಾರ ಒದಗಿಸಬೇಕು ಎಂಬ ಉದ್ದೇಶವನ್ನು ಹೊಂದಿದೆ. ಹಾಗಂತ ಎಲ್ಲ ಪ್ರಕರಣಗಳನ್ನೂ ಗ್ರಾಹಕ ನ್ಯಾಯಾಲಯಗಳಿಗೆ ಒಯ್ಯುವಂತಿಲ್ಲ. ಅದಕ್ಕೂ ಗಡಿಗಳಿವೆ. ಈ ಗಡಿಯ ಅರಿವಿಲ್ಲದೆ ಗ್ರಾಹಕ ವೇದಿಕೆಯ ಮೊರೆಹೋದ ಒಂದು ಪ್ರಕರಣ ಇಲ್ಲಿದೆ. ದೆಹಲಿಯ ಮನಿಶಾ ಸೋಹಿಲ್‌ಕುಮಾರ ಚೋವಾಟಿಯಾ ಎನ್ನುವವರು ಎಚ್‌ಡಿಎಫ್‌ಸಿ ಬ್ಯಾಂಕು ಮತ್ತು ಗುಜರಾತಿನ ಜುನಾಗಡ ತಾಲೂಕಿನ ಪರೇಶ್‌ಭಾಯಿ ಮೋಹನಲಾಲ್‌ ಮನ್ಪಾರ ಎಂಬವರ ವಿರುದ್ಧ ಹೂಡಿದ್ದ ಮೊಕದ್ದಮೆ ಇದು. ಮನಿಶಾ ಅವರ ಪರವಾಗಿ ಅವರ ಪವರ್‌ ಆಫ್‌ ಅಟಾರ್ನಿ ಸುನಿಲ್‌ಕುಮಾರ ಗರ್ಗ್‌ ಅವರು ದೂರು ಸಲ್ಲಿಸಿದ್ದರು. ದೂರಿನಲ್ಲಿ, ಪ್ರತಿವಾದಿಗಳು ತಮಗೆ 1.71 ಕೋಟಿ ರುಪಾಯಿಗಳಷ್ಟು ಮೋಸ ಮಾಡಿದ್ದಾರೆ. ತಮಗೆ ಈ ಮೊತ್ತವನ್ನು ಮರಳಿ ಕೊಡಿಸಬೇಕು ಮತ್ತು 11-01-11ರಿಂದ ದೂರು ದಾಖಲಾದ ದಿನಾಂಕದ ವರೆಗೆ ಶೇ.10ರಂತೆ ಬಡ್ಡಿಯನ್ನೂ ಕೊಡಿಸಬೇಕು ಎಂದು ಕೋರಲಾಗಿತ್ತು. ದೂರುದಾರರು ಒಬ್ಬ ಅನಿವಾಸಿ ಭಾರತೀಯರಾಗಿದ್ದು ಈಕ್ವೆಡಾರ್‌ನಲ್ಲಿ ವಾಸಿಸುತ್ತಿದ್ದರು. ಅವರು ಗುಜರಾತಿನ ಜೇತ್ಪುರದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕಿನ ಶಾಖೆಯಲ್ಲಿ ಮೂರನೆ ಪ್ರತಿವಾದಿ ಪರೇಶ‌ಭಾಯಿ ಮುನ್ಪಾರ ಅವರ ಸಲಹೆಯ ಮೇರೆಗೆ 24.06.2009ರಂದು ಖಾತೆಯನ್ನು ತೆರೆಯುತ್ತಾರೆ. ಎಚ್ಚರಿಕೆಯ ಸಂದೇಶ ಸ್ವೀಕ...

ನ್ಯಾಯಾಧೀಶರು ಸಾಧ್ಯತೆ ಕಲ್ಪಿಸಿಕೊಂಡು ತೀರ್ಪು ನೀಡಬಾರದು

* ತನ್ನ ನಿರೀಕ್ಷಣೆಯನ್ನು ಸಮರ್ಥಿಸುವಂಥ ಪುರಾವೆಗಳನ್ನು ಕಂಡುಕೊಳ್ಳಬೇಕಾಗುತ್ತದೆ ವೈದ್ಯರ ನಿರ್ಲಕ್ಷ್ಯ ಆರೋಪಿಸಿದ ಎಲ್ಲ ಪ್ರಕರಣಗಳೂ ಗ್ರಾಹಕ ನ್ಯಾಯಾಲಗಳಲ್ಲಿ ಸಿಂಧುವಾಗಲಾರವು. ಚಿಕಿತ್ಸೆಯ ಬಳಿಕ ರೋಗಿಯೂ ಪಾಲಿಸಬೇಕಾದ ಹಲವು ಸಂಗತಿಗಳು ಇರುತ್ತವೆ. ಅವು ಪಾಲನೆಯಾಗಿದೆಯೋ ಇಲ್ಲವೋ ಎಂಬುದನ್ನೂ ಗ್ರಾಹಕ ನ್ಯಾಯಾಲಯಗಳು ಗಮನಿಸುತ್ತವೆ. ಇಲ್ಲಿ ಅಂಥ ಒಂದು ಪ್ರಕರಣ ಇದೆ. ಉತ್ತರ ಪ್ರದೇಶದ ಪರಗಣದ ಗಾಯತ್ರಿ ಮೊಹಲ್ಲಾದ ರಾಜಕುಮಾರ ಎಂಬಾತ 10-04-2010ರಂದು ರಸ್ತೆ ಅಪಘಾತದಲ್ಲಿ ಗಾಯಗೊಳ್ಳುತ್ತಾನೆ. ಆತನ ಎಡಗಾಲು ತೀವ್ರ ಜಖಂಗೊಂಡಿರುತ್ತದೆ. ಆತನನ್ನು ಬೀರೌತ್‌ನ ಡಾ.ನರೇಂದರ್‌ ಮೆಮೋರಿಯಲ್‌ ಮೂರ್ತಿ ನರ್ಸಿಂಗ್‌ ಹೋಂನಲ್ಲಿ ಮೂಳೆ ತಜ್ಞ ಡಾ. ರಾಜೀವ ಜೈನ್‌ ಎಂಬವರು ತಪಾಸಣೆ ನಡೆಸುತ್ತಾರೆ. 17-04-2010ರಂದು ಅವರು ಶಸ್ತ್ರಚಕಿತ್ಸೆ ನಡೆಸುತ್ತಾರೆ. ಆದರೆ ರಾಜಕುಮಾರ ಸರಿಹೋಗುವುದಿಲ್ಲ. ಒಳಗೆ ಅಳವಡಿಸಿದ್ದ ಪ್ಲೇಟ್‌ ಸರಿಯಾಗಿರಲಿಲ್ಲ. ಈ ಕಾರಣಕ್ಕೆ 9-11-20110ರಂದು ಮತ್ತೊಮ್ಮೆ ಶಸ್ತ್ರಚಿಕಿತ್ಸೆಯನ್ನು ನಡೆಸುತ್ತಾರೆ. ಆದರೂ ಅಪೇಕ್ಷಿತ ಫಲ ದೊರೆಯಲಿಲ್ಲ. ಅದಾದ ಬಳಿಕ ಡಾ.ಜೈನ್‌ ಅವರು ರಾಜಕುಮಾರನಿಗೆ ಚಿಕಿತ್ಸೆ ಮುಂದುವರಿಸಲು ನಿರಾಕರಿಸುತ್ತಾರೆ. ಬಳಿಕ ಆತ ಬಾಗಪತ್‌ನ ರಕ್ಷಾ ಆಸ್ಪತ್ರೆಯಲ್ಲಿ ಡಾ.ತೋಮರ್‌ ಎಂಬವರನ್ನು ಸಂಪರ್ಕಿಸುತ್ತಾನೆ. ಅಲ್ಲಿ ಅವರು 3ನೆ ಶಸ್ತ್ರಚಿಕಿತ್ಸೆಯನ್ನು ನಡೆಸುತ್ತಾರೆ. ಅದಕ್ಕಾಗಿ ರಾಜಕುಮಾರ ಒಂದು ಲಕ್ಷ ರ...

ವಾಣಿಜ್ಯ ವ್ಯವಹಾರ ಗ್ರಾಹಕ ರಕ್ಷಣೆ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ

* ಮರು ಮಾರಾಟ ಉದ್ದೇಶದ ನಿವೇಶನ ಖರೀದಿ ವಿವಾದದ ದೂರು ವಜಾ ಗ್ರಾಹಕ ನ್ಯಾಯಾಲಯಗಳಲ್ಲಿ ದೂರನ್ನು ದಾಖಲಿಸುವ ಮೊದಲು ಗ್ರಾಹಕ ರಕ್ಷಣೆ ಕಾಯ್ದೆಯ ಪ್ರಕಾರ ತಾವು ಗ್ರಾಹಕರೇ ಎಂಬುದನ್ನು ಪ್ರತಿಯೊಬ್ಬರೂ ಗಮನಿಸತಕ್ಕದ್ದು. ವಾಣಿಜ್ಯದ ವ್ಯವಹಾರಗಳು ಗ್ರಾಹಕ ರಕ್ಷಣೆ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ. ಅಂದರೆ ನೀವೊಂದು ವಸ್ತುವನ್ನು ಖರೀದಿಸಿ ಅದನ್ನು ಮತ್ತೆ ಮಾರಾಟ ಮಾಡುವವರಿದ್ದರೆ ಈ ಖರೀದಿಯಲ್ಲಿ ನೀವು ಗ್ರಾಹಕರಾಗಿರುವುದಿಲ್ಲ. ಅದು ಲಾಭದ ಉದ್ದೇಶದ ಖರೀದಿಯಾಗಿರುತ್ತದೆ. ಈ ಸೂಕ್ಷ್ಮವನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇಲ್ಲಿ ಅಂಥದ್ದೊಂದು ಪ್ರಕರಣವಿದೆ. ಹೈದ್ರಾಬಾದದ ಸಂಜಯ ಧೀರ್‌ ಎನ್ನುವವರು ಬಹ್ರೇನ್‌ ಮೂಲದ, ಆದರೆ ಬೆಂಗಳೂರಿನಲ್ಲಿ ಕಚೇರಿಯನ್ನು ಹೊಂದಿರುವ ಮೆ.ಎಕ್ಸ್‌ಪಾಟ್‌ ಪ್ರಾಜೆಕ್ಟ್ಸ್‌ ಆ್ಯಂಡ್‌ ಡೆವಲಪರ್ಸ್‌ ಪ್ರೈ.ಲಿ. ಇವರಿಂದ ನಾಲ್ಕು ನಿವೇಶನಗಳನ್ನು (ಪ್ರತಿಯೊಂದೂ 1011.71.ಚ.ಮೀ.) 20,68,000 ರುಪಾಯಿಗಳಿಗೆ ಖರೀದಿಸುವುದಕ್ಕಾಗಿ 9,67,000 ರುಪಾಯಿಗಳನ್ನು ಮುಂಗಡವಾಗಿ ನೀಡಿ ಒಪ್ಪಂದಪತ್ರವನ್ನು ಮಾಡಿಕೊಳ್ಳುತ್ತಾರೆ. ಆದರೆ ಮೆ.ಎಕ್ಸ್‌ಪಾಟ್‌ ಪ್ರಾಜೆಕ್ಟ್ಸ್‌ ಆ್ಯಂಡ್‌ ಡೆವಲಪರ್ಸ್‌ ಪ್ರೈ.ಲಿ. ಇವರು ಸಂಜಯ ಧೀರ್‌ ಅವರಿಗೆ ನಿವೇಶನಗಳನ್ನು ಹಸ್ತಾಂತರಿಸಲೂ ಇಲ್ಲ, ಅವರ ಹೆಸರಿಗೆ ಕ್ರಯಪತ್ರವನ್ನು ಮಾಡಿಸಿ ಕೊಡಲೂ ಇಲ್ಲ. ಇದರಿಂದ ಅಸಮಾಧಾನಗೊಂಡ ಅವರು ಬೆಂಗಳೂರು 2ನೆ ಹಚ್ಚುವರಿ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ವೇದಿ...

ಐಸಿಐಸಿಐ ಬ್ಯಾಂಕ್‌ ವಿಳಂಬವಾಗಿ ಸಲ್ಲಿಸಿದ ಮೇಲ್ಮನವಿ ವಜಾ

* ಜಿಲ್ಲಾ ವೇದಿಕೆ ತೀರ್ಪಿನ ವಿರುದ್ಧ 45 ದಿನಗಳ ಒಳಗಾಗಿ ಮೇಲ್ಮನವಿ ಸಲ್ಲಿಸಬಹುದು ಗ್ರಾಹಕ ನ್ಯಾಯಾಲಯಗಳ ಸ್ಥಾಪನೆಯ ಉದ್ದೇಶ ತ್ವರಿತವಾಗಿ, ಸರಳವಾಗಿ ಜನಸಾಮಾನ್ಯರಿಗೆ ನ್ಯಾಯವನ್ನು ಒದಗಿಸಬೇಕು ಎಂಬುದು. ಕೆಲವೊಮ್ಮೆ ಸಣ್ಣ ಸಣ್ಣ ಮೊತ್ತಗಳಿಗೂ ದೊಡ್ಡ ದೊಡ್ಡ ಸಂಸ್ಥೆಗಳು ಮೇಲ್ಮನವಿಯನ್ನು ಸಲ್ಲಿಸಿ ವ್ಯರ್ಥವಾಗಿ ಕಾಲ ವಿಳಂಬಕ್ಕೆ ಕಾರಣವಾಗುತ್ತವೆ. ಇದರ ಬಗ್ಗೆ ಗ್ರಾಹಕ ನ್ಯಾಯಾಲಯಗಳು ಕಟುವಾಗಿ ಟಿಪ್ಪಣಿಯನ್ನು ಮಾಡುತ್ತ ಬಂದಿವೆ. ಹೀಗಿದ್ದೂ ವಿಳಂಬವಾಗಿ ಮೇಲ್ಮನವಿಯನ್ನು ಸಲ್ಲಿಸಿ ವಿನಾಯ್ತಿಯನ್ನು ಬೇಡುವ ಪರಿಪಾಠವನ್ನು ಸಂಸ್ಥೆಗಳು ರೂಢಿಸಿಕೊಂಡಿವೆ. ಇಲ್ಲಿ ಅಂಥ ಒಂದು ಪ್ರಕರಣವಿದೆ. ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಅರುಣ ಮಾನದೇವರಾವ್‌ ಗಾವಂಡೆ ಎಂಬವರು ಐಸಿಐಸಿಐ ಬ್ಯಾಂಕಿನಿಂದ 3.60 ಲಕ್ಷ ರುಪಾಯಿ ಗೃಹಸಾಲವನ್ನು ಪಡೆದಿದ್ದರು. ಬ್ಯಾಂಕು ತಮ್ಮಿಂದ ಅಧಿಕ ಬಡ್ಡಿಯನ್ನು ವಸೂಲು ಮಾಡಿದೆ ಎಂಬ ತಕರಾರನ್ನು ಗಾವಂಡೆಯವರು ಅಮರಾವತಿ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ಸಲ್ಲಿಸಿದ್ದರು. ಜಿಲ್ಲಾ ವೇದಿಕೆಯು 03-10-2015ರಂದು ನೀಡಿದ ತೀರ್ಪಿನಲ್ಲಿ ದೂರನ್ನು ಭಾಗಶಃ ಪುರಸ್ಕರಿಸಿತು. ಮತ್ತು ಹೆಚ್ಚುವರಿಯಾಗಿ ವಸೂಲು ಮಾಡಿರುವ 78,123 ರುಪಾಯಿಗಳನ್ನು ಸಾಲದ ಉಳಿದಿರುವ ಮೊತ್ತದಲ್ಲಿ ಮರುಹೊಂದಾಣಿಕೆ ಮಾಡಬೇಕು ಮತ್ತು 01-01-2013ರಿಂದ ಅನ್ವಯವಾಗುವಂತೆ ಈ ಹಣಕ್ಕೆ ಶೇ.8ರಂತೆ ಬಡ್ಡಿಯನ್ನು ನೀಡಬೇಕು. ಪರಿಹಾರವೆಂದು 10 ಸಾವಿರ ರುಪಾಯಿಗಳನ್ನು ಮ...

ದೂರುದಾರರ ಪರವಾಗಿ ಗ್ರಾಹಕ ಆಯೋಗ ತಾನೇ ಊಹಿಸಿಕೊಳ್ಳುವುದು ಕಾನೂನು ಸಮ್ಮತವಲ್ಲ

* ಜಂಟಿ ಖಾತೆಗೆ ಅನಕ್ಷರಸ್ಥೆಯ ಹೆಸರು ಸೇರಿಸಿದ ಪ್ರಕರಣದಲ್ಲಿ ರಾಷ್ಟ್ರೀಯ ಆಯೋಗದ ತೀರ್ಪು ಆಧುನಿಕ ಯುಗದಲ್ಲಿ ಬ್ಯಾಂಕು ಪ್ರತಿಯೊಬ್ಬರ ಜೀವನದಲ್ಲೂ ಹಾಸುಹೊಕ್ಕಾಗಿದೆ. ದೇಶದ ಪ್ರತಿ ಕುಟುಂಬವೂ ಒಂದು ಬ್ಯಾಂಕ್‌ ಅಕೌಂಟನ್ನು ಹೊಂದಿರುತ್ತದೆ. ಅಕೌಂಟ್‌ ಹೊಂದಿರುವ ವ್ಯಕ್ತಿ ಅಕ್ಷರಸ್ಥನೋ ಅನಕ್ಷರಸ್ಥನೋ ಎಂಬುದು ಇಲ್ಲಿ ಪರಿಗಣನೆಗೆ ಬರುವುದಿಲ್ಲ. ತಮ್ಮ ಅನಕ್ಷರತೆಯ ಕಾರಣದಿಂದಾಗಿ ಬ್ಯಾಂಕ್‌ ವ್ಯವಹಾರದಲ್ಲಿ ಮೋಸ ಹೋದರೆ ಗ್ರಾಹಕ ವೇದಿಕೆಗಳು ನೆರವಿಗೆ ಬರುತ್ತವೆಯೆ ಎಂಬುದು ಪ್ರಶ್ನೆ. ಇಲ್ಲಿ ಅಂಥ ಒಂದು ಪ್ರಕರಣ ಇದೆ. ಮುಂಬಯಿಯ ಶಂಭುನಾಥ ಅಮೃತ್ ಚೌಹಾಣ ಎಂಬವರು ಸಿಂಗಾಪುರದ ಪಾನ್‌ ಯುನೈಟೆಡ್‌ ಶಿಪ್ಪಿಂಗ್‌ ಪ್ರೈ.ಲಿ.ನ ಪಿ.ವಿ.ಹಾರ್ಮನಿ ಎಂಬ ಹಡಗಿನಲ್ಲಿ ವೆಲ್ಡರ್‌ ಆಗಿ ಕೆಲಸ ಮಾಡುತ್ತಿದ್ದರು. ಅವರು ಕರ್ತವ್ಯದ ಮೇಲೆ ಇದ್ದಾಗ ಚೀನಾದ ಟಿಯಾನ್ಜಿನ್‌‌ ಬಂದರಿನಲ್ಲಿ ಅಪಘಾತದಲ್ಲಿ ಸಾವನ್ನಪ್ಪುತ್ತಾರೆ. ಭಾರತದ ರಾಯಭಾರ ಕಚೇರಿಯ ಮೂಲಕ ಪರಿಹಾರಕ್ಕೆ ಅರ್ಜಿ ಸಲ್ಲಿಕೆಯಾಗುತ್ತದೆ. ಪರಿಹಾರವೆಂದು 93,115.76 ಸಿಂಗಾಪುರ ಡಾಲರ್‌‌ ಬರುತ್ತದೆ. ಕಂಪನಿಯು ಇದಕ್ಕೆ ಸಮನಾದ 55,000 ಅಮೆರಿಕದ ಡಾಲರಿನ ಚೆಕ್‌ ಅನ್ನು ಅವರ ವಾರಸುದಾರರಾದ ಪತ್ನಿ ಬುನಿಯಾದೇವಿ ಚೌಹಾಣ, ಮಕ್ಕಳಾದ ಧರ್ಮೇಂದ್ರ ಚೌಹಾಣ, ರವೀಂದ್ರ ಚೌಹಾಣ, ಸ್ನೇಹಾ ಚೌಹಾಣ ಅವರಿಗೆ ಕಂಪನಿಯ ಮುಂಬಯಿ ಕಚೇರಿಯಲ್ಲಿ 30.08.2004 ರಂದು ನೀಡುತ್ತದೆ. ಈ ಸಂದರ್ಭದಲ್ಲಿ ಮೃತನ ಸಹೋದರ ...