Posts

ಕೈಬೆರಳಿಗೆ ಗ್ಯಾಂಗ್ರಿನ್ ಬರಲು ಕಾರಣನಾದ ವೈದ್ಯನಿಗೆ ೧ ಲಕ್ಷ ರು. ದಂಡ

ಉತ್ತರ ಪ್ರದೇಶದ ಶಹರಾನ್‌ಪುರ ಜಿಲ್ಲೆಯ ನಾಗಲ್ ಗ್ರಾಮದ ವಿಜೇಂದ್ರ ಕುಮಾರ್ ಸಾಹಲ್ ಎನ್ನುವವರಿಗೆ ವೃಷಣದಲ್ಲಿ ನೋವು ಕಾಣಿಸಿಕೊಂಡು ಕಿಶೋರ್‌ಭಾಗ್‌ದಲ್ಲಿಯ ಕೆ.ಕೆ. ಆಸ್ಪತ್ರೆಗೆ ತೋರಿಸಿಕೊಳ್ಳಲು ತೆರಳಿದರು. ಅವರು ಡಾ.ಕೆ.ಎಸ್. ವರ್ಮಾ ಅವರನ್ನು ೧೨-೧-೨೦೦೨ರಂದು ಭೆಟ್ಟಿಯಾದರು. ೫೦ ರು. ನೀಡಿ ರಸೀದಿಯನ್ನೂ ಪಡೆದರು. ವೃಷಣದಲ್ಲಿ ನೀರು ತುಂಬಿಕೊಂಡಿದೆ. ಅದಕ್ಕೆ ಶಸ್ತ್ರಚಿಕಿತ್ಸೆ ನಡೆಸಬೇಕು ಎಂದು ಡಾ.ವರ್ಮಾ ಹೇಳಿದರು. ಇದಕ್ಕಾಗಿ ಅವರು ೧೬-೧-೨೦೦೨ರಂದು ಆಸ್ಪತ್ರೆಗೆ ದಾಖಲಾದರು. ಅದೇ ದಿನ ಶಸ್ತ್ರಚಿಕಿತ್ಸೆ ನಡೆಯಿತು. ಚಿಕಿತ್ಸೆಯ ಸಮಯದಲ್ಲಿ ವೈದ್ಯರು ನೋವುನಿವಾರಕ ಚುಚ್ಚುಮದ್ದು ಮತ್ತು ಗ್ಲುಕೋಸ್‌ಅನ್ನು ಸೂಜಿ ಮೂಲಕ ಎಡಗೈಗೆ ನೀಡದರು. ಅವರ ಕೈ ಊದಿಕೊಂಡಿತು. ಕೈಬೆರಳುಗಳು ನೀಲಿ ಬಣ್ಣಕ್ಕೆ ತಿರುಗಿದವು. ಶಸ್ತ್ರಚಿಕಿತ್ಸೆಯ ಬಳಿಕವೂ ವಿಜೇಂದ್ರಕುಮಾರ್‌ಗೆ ನೋವು ನಿಲ್ಲಲಿಲ್ಲ. ಇದಕ್ಕಾಗಿ ಅವರಿಗೆ ನೋವುನಿವಾರಕಗಳನ್ನು ನೀಡಲಾಯಿತು. ೨೦-೧-೨೦೦೨ರ ವರೆಗೂ ಅಲ್ಲಿಯೇ ಅವರಿಗೆ ಚಿಕಿತ್ಸೆ ಮುಂದುವರಿಯಿತು. ೨೩-೧-೨೦೦೨ರಂದು ವಿಜೇಂದ್ರಕುಮಾರ್ ಡಾ.ಪ್ರವೀಣ್ ಜೈನ್ ಎಂಬ ಸರ್ಜನ್‌ರನ್ನು ಭೆಟ್ಟಿಮಾಡಿದರು. ಪರಿಶೀಲನೆ ಬಳಿಕ ರೋಗಿಯ ಕೈ ಬೆರಳುಗಳಿಗೆ ಗ್ಯಾಂಗ್ರಿನ್ ಆಗಿದ್ದು, ಪ್ರಾರಂಭಿಕ ಹಂತದಲ್ಲಿದೆ ಎಂದು ಗೊತ್ತಾಯಿತು. ೨೯-೧-೨೦೦೨ರ ವರೆಗೂ ಅಲ್ಲಿಯೇ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗೆ ದೊಡ್ಡ ಆಸ್ಪತ್ರೆಗೆ ತೆರಳಲು ಅವರಿಗೆ ಸೂಚಿಸಲ...

ತಪ್ಪು ವಯಸ್ಸು ನಮೂದಿಸಿದ್ದಾರೆ ಎಂಬ ವಿಮೆ ಕಂಪನಿಯ ತಕರಾರು ನಿಲ್ಲಲಿಲ್ಲ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕೆಂಪಟ್ಟಿಯ ಸದಾಶಿವ ಉಪ್ಪಾರ ಎನ್ನುವವರು ರಿಲಯನ್ಸ್ ಲೈಫ್ ಇನ್ಸುರೆನ್ಸ್‌ನಿಂದ ೧೫ ವರ್ಷ ಅವಧಿಯ ಎಂಟು ಲಕ್ಷದ ಜೀವವಿಮೆ ಪಾಲಿಸಿಯನ್ನು ಪಡೆದುಕೊಂಡಿದ್ದರು. ಪಾಲಿಸಿ ಪಡೆದುಕೊಂಡ ದಿನಾಂಕ ೧೪-೦೨-೨೦೧೩. ಇದರ ವಾರ್ಷಿಕ ಕಂತು ೮೦ ಸಾವಿರ ರುಪಾಯಿಗಳನ್ನು ಅವರು ತುಂಬಿದ್ದರು. ದುರ್ದೈವವಶಾತ್ ಸದಾಶಿವ ಅವರು ೦೪-೦೬-೨೦೧೩ರಂದು ಸಾವಿಗೀಡಾಗುತ್ತಾರೆ. ಸಾವಿನ ಬಳಿಕ ಅವರ ಪತ್ನಿ ಸಾವಿತ್ರಿ ಮತ್ತು ಮೂವರು ಮಕ್ಕಳು ಪಾಲಿಸಿ ಹಣಕ್ಕೆ ಬೇಡಿಕೆ ಸಲ್ಲಿಸುತ್ತಾರೆ. ವಿಮೆ ಕಂಪನಿಯು ಅವರು ತುಂಬಿದ್ದ ೮೦ ಸಾವಿರ ರು. ಮಾತ್ರ ಮರಳಿ ಕೊಟ್ಟು ಉಳಿದ ೭.೨೦ ಲಕ್ಷ ರು. ನೀಡುವುದಕ್ಕೆ ನಿರಾಕರಿಸುತ್ತದೆ. ಅದಕ್ಕೆ ಅವರು ನೀಡಿದ ಕಾರಣ, ಪಾಲಿಸಿದಾರರು ಪಾಲಿಸಿ ಮಾಡುವಾಗ ತಪ್ಪು ವಯಸ್ಸನ್ನು ನೀಡಿದ್ದರು. ಅವರಿಗೆ ೬೦ ವರ್ಷ ವಯಸ್ಸಾಗಿತ್ತು. ಆದರೆ ೪೩ ವರ್ಷ ಎಂದು ಹೇಳಿದ್ದರು. ಈ ಕಾರಣಕ್ಕೆ ವಿಮೆ ಮೊತ್ತ ನೀಡುವುದಿಲ್ಲ ಎಂದು ಹೇಳಿತು. ಪಾಲಿಸಿ ಮಾಡಿಸಿದ ಎರಡು ವರ್ಷಗಳೊಳಗೇ ಸಾವಿಗೀಡಾದ ಕಾರಣ ನಿಯಮದಂತೆ ವಿಮೆ ಕಂಪನಿಯು ತನಿಖೆಯನ್ನು ನಡೆಸಿತು. ತನಿಖೆಯ ವೇಳೆ ಸದಾಶಿವ ಉಪ್ಪಾರ ತನ್ನ ವಯಸ್ಸನ್ನು ೪೩ ಎಂದು ಬರೆಸಿದ್ದರು. ಆದರೆ ಅವರಿಗೆ ೬೦ ವರ್ಷ ವಯಸ್ಸಾಗಿತ್ತು. ಅವರು ತಮ್ಮ ನಿಜವಾದ ವಯಸ್ಸನ್ನು ಹೇಳಿದ್ದರೆ ಅವರಿಗೆ ಪಾಲಿಸಿಯನ್ನೇ ನೀಡುತ್ತಿರಲಿಲ್ಲ. ಇದು ವಿಮೆ ಪಾಲಿಸಿಯ ಷರತ್ತುಗಳಿಗೆ ವಿರುದ್ಧವಾದದ್ದು ಎಂದು ವಿಮೆ ಕಂಪನಿ ಹೇಳ...

ಬ್ಯಾಂಕ್ ಖಾತೆಯಿಂದ ನಿಮ್ಮ ಹಣ ಯಾರೋ ಎಗರಿಸಿದ್ದರೆ ಅದನ್ನು ಬ್ಯಾಂಕ್ ನೀಡಬೇಕು

ಬ್ಯಾಂಕಿನಲ್ಲಿ ನಿಮ್ಮ ಉಳಿತಾಯ ಖಾತೆ ಇರುತ್ತದೆ. ಆ ಖಾತೆಗೆ ನೀವು ಎಟಿಎಂ ಕಾರ್ಡ್ ಕೂಡ ಹೊಂದಿರುತ್ತೀರಿ. ಒಂದು ದಿನ ನಿಮಗೆ ಗೊತ್ತಿಲ್ಲದಂತೆ ನಿಮ್ಮ ಖಾತೆಯಿಂದ ಯಾರೋ ಹಣವನ್ನು ತೆಗುದುಕೊಂಡು ಬಿಡುತ್ತಾರೆ. ನಿಮ್ಮ ಮೊಬೈಲಿಗೆ ಸಂದೇಶ ಬಂದ ಬಳಿಕವೇ ನಿಮಗೆ ವಂಚನೆಯಾಗಿರುವುದು ಗೊತ್ತಾಗುತ್ತದೆ. ಆಗ ನೀವು ಬ್ಯಾಂಕ್‌ಗೆ ಓಡುತ್ತೀರಿ. ದೂರು ನೀಡುತ್ತೀರಿ. ನೀವು ಕಳೆದುಕೊಂಡ ಹಣ ನಿಮಗೆ ಮರಳಿ ಸಿಗುತ್ತದೆಯೆ? ಬ್ಯಾಂಕ್‌ನವರು ಸುಲಭಕ್ಕೆ ನಿಮಗೆ ಹಣ ಕೊಡುತ್ತಾರೆಯೆ? ಕೊಡದಿದ್ದರೆ ನೀವು ಗ್ರಾಹಕ ವೇದಿಕೆಯಲ್ಲಿ ಪರಿಹಾರ ಕೋರಬಹುದು. ಇಲ್ಲಿ ಅಂಥದ್ದೊಂದು ಪ್ರಕರಣ ಇದೆ. ------ ಬೆಂಗಳೂರು ವಿವಿಯ ಕೋಲಾರದ ಕನ್ನಡ ಸ್ಟಡಿ ಸೆಂಟರ್‌ನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಡಾ.ಡಿ.ಡಾಮಿನಿಕ್ ಎನ್ನುವವರು ಅಲ್ಲಿಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ೨೦೦೮ರಲ್ಲಿಯೇ ಉಳಿತಾಯ ಖಾತೆಯನ್ನು ತೆರೆದಿದ್ದರು. ಅವರ ಬಳಿ ಡೆಬಿಟ್ ಕಾರ್ಡ್ ಕೂಡ ಇತ್ತು. ಈ ಖಾತೆಯಲ್ಲಿಯೇ ಅವರ ಸಂಬಳದ ಹಣ ಜಮಾ ಆಗುತ್ತಿತ್ತು. ಇವರು ವಾಸ್ತವ್ಯ ಮಾಡುವುದು ಬೆಂಗಳೂರಿನಲ್ಲಿ. ಅವರು ಬೆಂಗಳೂರು ನಗರದಲ್ಲಿರುವ ಗ್ರಾಹಕ ವೇದಿಕೆಯಲ್ಲಿ ಗ್ರಾಹಕ ರಕ್ಷಣೆ ಕಾಯ್ದೆ ಸೆಕ್ಷನ್ ೧೨ರ ಅಡಿಯಲ್ಲಿ ಎಸ್‌ಬಿಎಂ ವಿರುದ್ಧ ದೂರೊಂದನ್ನು ದಾಖಲಿಸುತ್ತಾರೆ. ತಮಗೆ ಅರಿವಿಲ್ಲದೆ ತಮ್ಮ ಖಾತೆಯಿಂದ ತೆಗೆದಿರುವ ೮೦,೦೮೦ ರುಪಾಯಿಗಳನ್ನು ತಮಗೆ ಬಡ್ಡಿ ಸಹಿತ ಕೊಡಿಸಬೇಕು. ಬ್ಯಾಂಕಿನಿಂದ ಸೇವಾ ನ್ಯೂನತೆ ಆಗಿದ...

ಗೃಹ ನಿರ್ಮಾಣ ಸಹಕಾರ ಸಂಘಗಳು ಮೋಸ ಮಾಡಿದರೆ ಗ್ರಾಹಕ ಕೋರ್ಟಲ್ಲಿ ಪ್ರಶ್ನಿಸಬಹುದು

ಕರ್ನಾಟಕದಲ್ಲಿ ಗೃಹನಿರ್ಮಾಣ ಸಹಕಾರ ಸಂಘಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ. ಆದರೆ ಇವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವವರು ಯಾರು? ಸಾಮಾನ್ಯ ಸದಸ್ಯನಿಗೆ ಈ ಸೊಸೈಟಿಯಿಂದ ಮೋಸವಾದರೆ ಆತ ಎಲ್ಲಿಗೆ ಹೋಗಬೇಕು? ನಿವೇಶನವನ್ನು ಫ್ಲ್ಯಾಟನ್ನೋ ನೀಡುತ್ತೇನೆ ಎಂದು ಭರವಸೆ ನೀಡಿ ಕೊನೆಗೆ ಕೈ ಎತ್ತಿದರೆ ಆ ಸದಸ್ಯ ಇಂಥ ಗೃಹನಿರ್ಮಾಣ ಸಹಕಾರ ಸಂಘದ ವಿರುದ್ಧ ಗ್ರಾಹಕ ನ್ಯಾಯಾಲಯದ ಕಟ್ಟೆ ಏರಬಹುದು. ಅಂಥದ್ದೊಂದು ಪ್ರಕರಣ ಇಲ್ಲಿದೆ. ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ನೌಕರರ ಸಹಕಾರ ಸಂಘವು ತನ್ನ ಸದಸ್ಯರಿಗಾಗಿ ಬೆಂಗಳೂರಿನಲ್ಲಿ ನಿವೇಶನಗಳನ್ನು ಅಭಿವೃದ್ಧಿ ಪಡಿಸಿತ್ತು. ಈ ಸಂಘದ ಸದಸ್ಯರಾದ ಎಸ್.ಬಿ.ಈಶ್ವರಪ್ಪ ಎಂಬವರಿಗೆ ನಿವೇಶನ ಸಿಕ್ಕಿತ್ತು. ನಿವೇಶನದ ಮೌಲ್ಯ ೯೯,೫೦೦ ರುಪಾಯಿ. ಇದರಲ್ಲಿ ಅವರು ಸಂಘಕ್ಕೆ ೬೪,೦೦೦ ರು. ತುಂಬಿದರು. ಆದರೆ ಸಂಘ ಕೊನೆಗೂ ಇವರಿಗೆ ನಿವೇಶನದ ಕ್ರಯಪತ್ರ ಮಾಡಿ ಕೊಡಲೇ ಇಲ್ಲ. ಇದನ್ನು ಪ್ರಶ್ನಿಸಿ ಅವರು ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ದೂರನ್ನು ದಾಖಲಿಸಿದರು. ಸೊಸೈಟಿಯ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಅಧ್ಯಕ್ಷರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು. ಇವರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿತ್ತು. ಆದರೂ ಯಾರೊಬ್ಬರೂ ಹಾಜರಾಗಲಿಲ್ಲ. ಅವರ ಗೈರು ಹಾಜರಿಯಲ್ಲೇ ಜಿಲ್ಲಾ ಗ್ರಾಹಕ ವೇದಿಯುೆ ಅರ್ಜಿದಾರರಿಗೆ ಸೊಸೈಟಿಯು ನಿವೇಶನವನ್ನು ನೀಡಬೇಕು. ಅವರಿಂದ ಉಳಿ...

ಫ್ಲ್ಯಾಟ್ ಕೊಡದ ಯುನಿಟೆಕ್‌ಗೆ ಹಣ ಮರಳಿಸಲು ಆದೇಶ

ಒಂದು ಕಾಲದಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ಯುನಿಟೆಕ್ ಕಂಪನಿಯದು ದೊಡ್ಡ ಹೆಸರಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅದು ತನ್ನ ಗ್ರಾಹಕರಿಗೆ ನಿಗದಿತ ಅವಧಿಯಲ್ಲಿ ಫ್ಲ್ಯಾಟ್‌ಗಳನ್ನು ಕೊಡುವಲ್ಲಿ ವಿಫಲವಾಗಿದೆ. ಇದರ ವಿರುದ್ಧ ನೂರಾರು ಗ್ರಾಹಕರು ಕೋರ್ಟ್‌ಕಟ್ಟೆ ಏರಿದ್ದಾರೆ. ಹಲವು ಪ್ರಕರಣಗಳು ಗ್ರಾಹಕ ವೇದಿಕೆಯ ಎದುರೂ ಇವೆ. ಇಲ್ಲಿ ಅಂಥದ್ದೊಂದು ಪ್ರಕರಣ ಇದೆ. ಯುನಿಟೆಕ್ ವಿರುದ್ಧ ಅನಿಲ್ ಮೆಹ್ರೋತ್ರಾ ಎಂಬವರು ರಾಷ್ಟ್ರೀಯ ಗ್ರಾಹಕ ಆಯೋಗದಲ್ಲಿ ಹೂಡಿದ್ದ ಪ್ರಕರಣ ಇದು. ಇದೇ ಪ್ರಕರಣದ ಜೊತೆಯಲ್ಲಿ ಯುನಿಟೆಕ್ ವಿರುದ್ಧ ರಾಕೇಶ್ ಕುಮಾರ್ ಎಂಬವರು ದಾಖಲಿಸಿದ ಪ್ರಕರಣವನ್ನೂ ರಾ.ಗ್ರಾ.ಆಯೋಗ ಜೊತೆಯಾಗಿಯೇ ವಿಚಾರಣೆ ನಡೆಸಿ ತೀರ್ಪು ನೀಡಿದೆ. ಅನಿಲ್ ಹಾಗೂ ರಾಕೇಶ್‌ಕುಮಾರ್ ಅವರು ಉತ್ತರ ಪ್ರದೇಶದ ನೊಯ್ಡಾದಲ್ಲಿ ಯುನಿಟೆಕ್ ನಿರ್ಮಸಿದ ‘ರೆಸಿಡೆನ್ಸೀಸ್’ನಲ್ಲಿ ಫ್ಲ್ಯಾಟ್ ಖರೀದಿಸಿದ್ದರು. ಇವರಲ್ಲದೆ ಇನ್ನೂ ಹಲವರು ಇಲ್ಲಿ ಫ್ಲ್ಯಾಟ್ ಖರೀದಿಸಿದ್ದರು. ಹೀಗೆ ಫ್ಲ್ಯಾಟ್ ಖರೀದಿಸಿದವರು ‘ರೆಸಿಡೆನ್ಸೀಸ್ ಫ್ಲ್ಯಾಟ್ ಬೈಯರ್ಸ್ ಅಸೋಸಿಯೇಶನ್’ ಸ್ಥಾಪಿಸಿಕೊಂಡಿದ್ದರು. ಈ ಅಸೋಸಿಯೇಶನ್ನಿನ ಯಾರಿಗೂ ಫ್ಲ್ಯಾಟ್ ಹಸ್ತಾಂತರವಾಗಿರಲಿಲ್ಲ. ಅವರೆಲ್ಲ ಈ ಸಂಘದ ಮೂಲಕ ರಾಷ್ಟ್ರೀಯ ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು. ಅವರೆಲ್ಲರಿಗೂ ಅವರು ತುಂಬಿದ್ದ ಹಣವನ್ನು ವಾಪಸ್ ನೀಡಬೇಕು ಮತ್ತು ಅದಕ್ಕೆ ಅವರು ಹಣ ನೀಡಿದ ದಿನದಿಂದ ಶೇ.೧೦ರಂತೆ ಬಡ್ಡಿ ನೀಡಬೇಕು ಎಂದು ಆಯೋಗ...

ವಿಮೆಯಲ್ಲಿ ರಿಸ್ಕ್ ಘೋಷಣೆಯಾದ ದಿನಕ್ಕೆ ಬೆಲೆ ಇಲ್ಲ, ಪಾಲಿಸಿ ನೀಡಿದ ದಿನವೇ ಲೆಕ್ಕಕ್ಕೆ

ಮಧ್ಯಪ್ರದೇಶದ ಸಾಗರ ಜಿಲ್ಲೆಯ ಮರಾನಿ ಗ್ರಾಮದ ಜಸ್ವಂತ್ ಸಿಂಗ್ ಮತ್ತು ಬಬಿತಾ ಅವರದು ಅನ್ಯೋನ್ಯ ದಾಂಪತ್ಯ. ಬಬಿತಾ ಅವರು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ದಿಂದ ೧ ಲಕ್ಷ ರುಪಾಯಿಯ ವಿಮೆಯನ್ನು ಇಳಿಸಿದ್ದರು. ದುರ್ದೈವವಶಾತ್ ಅವರು ೨೦೦೨ರ ಅಕ್ಟೋಬರ್ ೯ರಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ವಿಮೆ ಪಾಲಿಸಿಯನ್ನು ನೀಡಿದ ದಿನಾಂಕ ೨೮-೧೧-೧೯೯೯. ಆದರೆ ರಿಸ್ಕ್ ಘೋಷಣೆಯಾದ ದಿನಾಂಕ ೨೮-೦೯-೧೯೯೯ ಎಂದಿತ್ತು. ಜಸ್ವಂತ್ ಸಿಂಗ್ ಅವರು ವಿಮೆ ಪರಿಹಾರ ನೀಡುವಂತೆ ಎಲ್‌ಐಸಿಯನ್ನು ಕೋರುತ್ತಾರೆ. ವಿಮೆ ಮೊತ್ತವನ್ನು ನೀಡುವುದಕ್ಕೆ ಎಲ್‌ಐಸಿ ತಕರಾರು ಎತ್ತುತ್ತದೆ. ವಿಮೆ ಪಾಲಿಸಿಯ ಷರತ್ತುಗಳು ಮತ್ತು ನಿಬಂಧನೆಗಳ ನಿಯಮ ೪(ಬಿ) ಪ್ರಕಾರ ಪಾಲಿಸಿ ನೀಡಿದ ಮೂರು ವರ್ಷಗಳ ಒಳಗೆ ವಿಮೆ ಹೊಂದಿದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೆ ವಿಮೆಯನ್ನು ನೀಡಲು ಬರುವುದಿಲ್ಲ. ಬಬಿತಾ ಅವರು ಮೂರು ವರ್ಷ ತುಂಬುವ ಮೊದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಾರಣ ನೀಡಿತು. ಆದರೆ ಪಾಲಿಸಿಗೆ ಅದುವರೆಗೆ ತುಂಬಿದ್ದ ೨೪,೪೪೦ ರು.ಗಳನ್ನು ಮಾತ್ರ ನೀಡಿತು. ಇದರ ವಿರುದ್ಧ ಜಸ್ವಂತ್ ಸಿಂಗ್ ಅವರು ಸಾಗರ ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ದೂರನ್ನು ಸಲ್ಲಿಸಿದರು. ದೂರನ್ನು ಜಿಲ್ಲಾ ವೇದಿಕೆ ಪುರಸ್ಕರಿಸಿತು. ವಿಮೆ ಕಂಪನಿಯು ಈಗಾಗಲೆ ನೀಡಿರುವ ಮೊತ್ತವನ್ನು ಕಳೆದು ಉಳಿದ ೭೫,೫೬೦ ರು.ಗಳನ್ನು ಮತ್ತು ಅದಕ್ಕೆ ಸಿಗಬೇಕಾದ ಬೋನಸ್ ಸಹಿತ ಒಂದು ತಿಂಗಳೊಳಗೆ ನೀಡಬೇಕು. ಸೇವಾ ನ್ಯೂನತ...

ಹರಾಜು ಖರೀದಿದಾರ ಗ್ರಾಹಕನಲ್ಲ; ಹರಾಜು ಪ್ರಕ್ರಿಯೆಯನ್ನು ಗೃಹಮಂಡಳಿ ರದ್ದುಮಾಡಬಹುದು

ಹರಾಜಿನಲ್ಲಿ ಹೆಚ್ಚು ಮೊತ್ತವನ್ನು ನಮೂದಿಸಿದ ಮಾತ್ರಕ್ಕೇ ಗೃಹಮಂಡಳಿ ನಿವೇಶನವನ್ನು ನೊಂದಾಯಿಸಿಕೊಡಬೇಕಾಗಿಲ್ಲ. ಅದನ್ನು ರದ್ದುಗೊಳಿಸುವ ಅಧಿಕಾರ ಗೃಹಮಂಡಳಿಗೆ ಇದೆ. ---------------- ಗೃಹಮಂಡಳಿಯ ಮನೆಯೇ ಇರಬಹುದು ಅಥವಾ ಇನ್ನಾವುದೇ ವಸ್ತು ಇರಬಹುದು ನೀವು ಅದನ್ನು ಹರಾಜಿನಲ್ಲಿ ಖರೀದಿಸಿದಾಗ ನೀವು ಗ್ರಾಹಕ ಅನ್ನಿಸಿಕೊಳ್ಳುತ್ತೀರಾ? ಅಲ್ಲಿ ನಿಮಗೆ ಅನ್ಯಾಯವಾದರೆ ಗ್ರಾಹಕ ವೇದಿಕೆಯಲ್ಲಿ ದೂರನ್ನು ದಾಖಲಿಸಬಹುದೆ? ಗೃಹಮಂಡಳಿ ಹರಾಜಿನಲ್ಲಿ ನಿಮಗೆ ಮಂಜೂರಾಗಿದ್ದ ನಿವೇಶನವನ್ನು ರದ್ದುಮಾಡಿದರೆ ಅದು ಗ್ರಾಹಕ ಕಾಯ್ದೆಯಲ್ಲಿ ಹೇಳಿರುವ ಹಾಗೆ ಸೇವಾನ್ಯೂನತೆಯ ವ್ಯಾಪ್ತಿಯಲ್ಲಿ ಬರುತ್ತದೆಯೆ? ಹರಾಜಿನಲ್ಲಿ ಭಾಗವಹಿಸಿದ ವ್ಯಕ್ತಿ ಗ್ರಾಹಕ ಅನ್ನಿಸಿಕೊಳ್ಳುತ್ತಾನೆಯೆ? ಇಂಥದ್ದೊಂದು ಸ್ವಾರಸ್ಯಕರ ಪ್ರಕರಣ ರಾಷ್ಟ್ರೀಯ ಗ್ರಾಹಕ ಆಯೋಗದ ವರೆಗೂ ಹೋಗಿತ್ತು. ರಾಜಸ್ಥಾನದ ಚಿತ್ತೋರಗಡದ ಅಂಬಾವಾಡಿಯ ನಿವಾಸಿ ಭರ್ನ್ವ ಲಾಲ್ ಅಲ್ಲಿಯ ಗೃಹಮಂಡಳಿಯ ನಿವೇಶನ ಹರಾಜಿನಲ್ಲಿ ಪಡೆದುಕೊಳ್ಳುತ್ತಾರೆ. ನಂತರ ಗೃಹಮಂಡಳಿಯು ಆ ನಿವೇಶನವನ್ನು ಅವರಿಗೆ ನೊಂದಣಿ ಮಾಡಿಸಿಕೊಡದೆ ಹರಾಜನ್ನೇ ರದ್ದುಪಡಿಸುತ್ತದೆ. ಹೀಗೆ ನಿವೇಶನ ಕೈತಪ್ಪಿದಾಗ ಅವರು ಗ್ರಾಹಕ ವೇದಿಕೆಯ ಮೆಟ್ಟಿಲು ಏರಿದ್ದರು. ಭನ್ವರ್‌ಲಾಲ್ ವೃತ್ತಿಯಿಂದ ಪತ್ರಕರ್ತರು. ರಾಜಸ್ಥಾನ ಗೃಹಮಂಡಳಿಯ ಉದಯಪುರ ವಿಭಾಗವು ಚಿತೋರಗಡದಲ್ಲಿ ತನ್ನ ಸೆಂತಿ ವಿಸ್ತರಣೆ ಯೋಜನೆಯಲ್ಲಿ ಕೆಲವು ನಿವೇಶನಗಳನ್ನು ಹರಾಜು ಮೂಲಕ ಮಾರಾಟ...