Posts

ಚಿಟ್ ಕಂಪನಿ ಚೀಟ್ ಮಾಡಿದರೆ ಗ್ರಾಹಕ ವೇದಿಕೆಯಲ್ಲಿ ಪರಿಹಾರ ಕೋರಬಹುದು

-- ನಾಯಿಕೊಡೆಗಳಂತೆ ಹುಟ್ಟಿಕೊಳ್ಳುವ ಚಿಟ್‌ಫಂಡ್ ಕಂಪನಿಗಳು ತನ್ನ ಗ್ರಾಹಕರಿಗೆ ಮೋಸಮಾಡುತ್ತವೆ ಎಂಬ ದೂರುಗಳು ಸಾಮಾನ್ಯ. ಹೀಗೆ ಮೋಸ ಹೋದ ವ್ಯಕ್ತಿಯೊಬ್ಬರು ಗ್ರಾಹಕ ವೇದಿಕೆಯಲ್ಲಿ ದೂರನ್ನು ದಾಖಲಿಸಿ ನ್ಯಾಯ ಪಡೆದಿದ್ದಾರೆ. -- ಬೆಂಗಳೂರಿನ ಎನ್.ಮಧುಸೂದನ ಎಂಬವರು ಮತ್ತಿಕೆರೆಯಲ್ಲಿರುವ ಮೆ.ಲೆನಾಕ್ಷಿಸ್ ಚಿಟ್ಸ್ ಪ್ರೈ.ಲಿ. ಇಲ್ಲಿ ೧೦ ಲಕ್ಷ ರುಪಾಯಿಗಳ ಒಂದು ಮತ್ತು ೧ ಲಕ್ಷ ರುಪಾಯಿಯ ಇನ್ನೊಂದು ಚಿಟ್‌ಗೆ ಸದಸ್ಯರಾಗಿದ್ದರು. ಅವರು ೧ ಲಕ್ಷ ರು. ಚಿಟ್‌ಗೆ ಬಿಡ್ ಮಾಡಿ ಯಶಸ್ವಿಯಾದರು. ಚಿಟ್ ಕಂಪನಿಯು ೧೫ ದಿನಗಳೊಳಗೆ ಹಣ ನೀಡುವುದಾಗಿ ಭರವಸೆ ನೀಡಿತು. ಆದರೆ ಹಣ ನೀಡಲಿಲ್ಲ. ಇಂದು ಕೊಡುತ್ತೇನೆ ನಾಳೆ ಕೊಡುತ್ತೇನೆ ಎಂದು ದಿನ ತಳ್ಳುತ್ತ ಬಂತು. ನಂತರ ಅಕ್ಟೋಬರ್ ೨೦೧೫ರಲ್ಲಿ ಆ ಮೊತ್ತವನ್ನು ನೀಡಿತು. ಇದೊಂದು ಸೇವಾನ್ಯೂನತೆ ಎಂದು ಮಧುಸೂದನ ಅವರು ಭಾವಿಸಿದರು. ಚಿಟ್ ಕಂಪನಿಯವರ ಕೆಟ್ಟ ಧೋರಣೆಯಿಂದ ಬೇಸರವೂ ಆಯಿತು. ಕಾರಣ ತಮ್ಮ ೧೦ ಲಕ್ಷ ರುಪಾಯಿಯ ಚಿಟ್ ಸದಸ್ಯತ್ವವನ್ನು ರದ್ದುಗೊಳಿಸಲು ಅವರು ನಿರ್ಧರಿಸಿದರು. ಈ ಸಂಬಂಧ ಅವರು ೦೭-೦೫-೨೦೧೬ರಂದು ಚಿಟ್ ಕಂಪನಿಗೆ ಒಂದು ಪತ್ರ ಬರೆದು ತಮ್ಮ ಸದಸ್ಯತ್ವ ರದ್ದುಗೊಳಿಸಲು ಕೋರಿದರು. ಮತ್ತು ತಾವು ಈಗಾಗಲೆ ಸಂದಾಯ ಮಾಡಿರುವ ಹಣವನ್ನು ತಮಗೆ ಮರಳಿಸುವಂತೆಯೂ ಬೇಡಿಕೆ ಇಟ್ಟರು. ಚಿಟ್ ಕಂಪನಿಯು ಇವರಿಂದ ಪಾಸ್‌ಪುಸ್ತಕವನ್ನು ಮರಳಿ ಪಡೆದುಕೊಂಡು ಹಣ ವಾಪಸ್ ನೀಡುವುದಾಗಿ ತಿಳಿಸಿತು. ಈ ಖಾತೆಗಾಗಿ ಅವರು ಅ...

ಕಟ್ಟಡ ಹಸ್ತಾಂತರ ದಿನಾಂಕ ಕರಾರಿನಲ್ಲಿ ಬಿಲ್ಡರ್ ನಮೂದಿಸುವುದು ಕಡ್ಡಾಯ

ಬಿಲ್ಡರುಗಳು ತಾವು ಯೋಜನೆಯನ್ನು ಮುಗಿಸಿ ಹಸ್ತಾಂತರಿಸುವ ದಿನಾಂಕವನ್ನು ಗ್ರಾಹಕರಿಗೆ ತಿಳಿಸಬೇಕಾದದ್ದು ಅವರ ಕರ್ತವ್ಯ. ಈ ಸಂಬಂಧದಲ್ಲಿ ರಿಯಲ್ ಎಸ್ಟೇಟ್ (ರೆಗ್ಯುಲೇಶನ್ ಆ್ಯಂಡ್ ಡೆವಲಪ್‌ಮೆಂಟ್) ಆ್ಯಕ್ಟ್ ೨೦೧೬ರ ಸೆಕ್ಷನ್ ೧೩(೨) ಹಸ್ತಾಂತರದ ದಿನಾಂಕವನ್ನು ತಿಳಿಸಬೇಕಾದುದನ್ನು ಕಡ್ಡಾಯ ಮಾಡುತ್ತದೆ. ---- ದೆಹಲಿಯ ಶೋಭಾ ಅರೋರಾ ಮತ್ತು ಅವರ ಪುತ್ರ ವರುಣ್ ಅರೋರಾ ಅಜಯ್ ಎಂಟರ್‌ಪ್ರೈಸಸ್ ಪ್ರೈ.ಲಿ.ನಿಂದ ದೆಹಲಿಯಲ್ಲಿಯೇ ವಾಣಿಜ್ಯ ಬಳಕೆ ಉದ್ದೇಶದ ಒಂದು ಸ್ಥಳವನ್ನು ಬುಕ್ ಮಾಡುತ್ತಾರೆ. ನಿವೇಶನ ಖರೀದಿದಾರರ ಒಪ್ಪಂದವು ಉಭಯತರ ನಡುವೆ ೨೦-೧೧-೨೦೦೬ರಂದು ಏರ್ಪಡುತ್ತದೆ. ಖರೀದಿಗೆ ಉದ್ದೇಶಿಸಿದ್ದ ಸ್ಥಳವು ೮೭೬ ಚದರ ಅಡಿ ಇತ್ತು. ಪ್ರತಿ ಚದರ ಅಡಿಗೆ ೫೪೩೫ ರು.ನಂತೆ ನೀಡುವುದಕ್ಕೆ ಒಪ್ಪಿಕೊಳ್ಳಲಾಗಿತ್ತು. ಯೋಜನೆಯ ಸ್ಥಳದಲ್ಲಿ ೫ನೆ ಮಹಡಿಯಲ್ಲಿ ಇದನ್ನು ನೀಡುವುದು ಎಂದು ನಿರ್ಧಾರವಾಗುತ್ತದೆ. ಇದರ ಮೌಲ್ಯ ೪೭,೬೧,೦೬೦ ರು. ಅಲ್ಲದೆ ಕಾರ್ ಪಾರ್ಕಿಂಗಿಗೆ ಎಂದು ೨,೨೫,೦೦೦ ರು. ಶುಲ್ಕ ವಿಧಿಸುತ್ತಾರೆ. ೦೩-೧೦-೨೦೦೬ರಂದು ಶೋಭಾ ಅರೋರಾ ಅವರು ಬಿಲ್ಡರ್‌ಗೆ ಆರಂಭಿಕ ಪಾವತಿಯಾಗಿ ೭,೧೪,೧೬೦ ರು.ಗಳನ್ನು ಸಂದಾಯ ಮಾಡುತ್ತಾರೆ. ೦೮-೦೯-೨೦೦೮ರೊಳಗೆ ಒಟ್ಟಾರೆಯಾಗಿ ೨೭,೧೨,೪೬೨ ರು.ಗಳನ್ನು ಸಂದಾಯ ಮಾಡಿರುತ್ತಾರೆ. ಒಪ್ಪಂದಕ್ಕೆ ಸಹಿಯಾಗುವ ವೇಳೆಗೆ ಬಿಲ್ಡರ್‌ಗಳು ತಮ್ಮ ಯೋಜನೆಯು ಹರ್ಯಾಣ ಅರ್ಬನ್ ಡೆವಲಪ್‌ಮೆಂಟ್ ಅಥಾರಿಟಿಯಿಂದ ಮಂಜೂರಾತಿಯನ್ನು ಪಡೆದಿದ...

ಬಸ್‌ನಲ್ಲಿ ೨ ರು.ಹೆಚ್ಚಿಗೆ ಪಡೆದ ಕಂಡಕ್ಟರ್ ೫ ಸಾವಿರ ರು. ಪರಿಹಾರ ಪಡೆದ ಗ್ರಾಹಕ

೬೮ ರು. ಬದಲಿಗೆ ೭೦ ರು. ಪಡೆದು ಚಿಲ್ಲರೆ ವಾಪಸ್ ನೀಡಿರಲಿಲ್ಲ. ಪ್ರಯಾಣಿಕ ರಾಷ್ಟ್ರೀಯ ಗ್ರಾಹಕ ಆಯೋಗದವರೆಗೂ ದೂರನ್ನು ಒಯ್ದರು. ಜೊತೆಗೆ ಚಾಲಕ ಧೂಮ್ರಪಾನ ಮಾಡಿದ್ದನ್ನೂ ಅವರು ಪ್ರಶ್ನಿಸಿದರು. ---- ಹರ್ಯಾಣದ ಹಿಸಾರ್ ಜಿಲ್ಲೆಯ ಅಶೋಕ ಕುಮಾರ್ ಪರ್ಜಾಪತ್ ಎಂಬವರು ಹರ್ಯಾಣ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಬಸ್ ಡ್ರೈವರ್ ಸಿಗರೇಟು ಸೇವನೆ ಮಾಡಿದನೆಂದೂ ಮತ್ತು ಅದನ್ನು ನಿಲ್ಲಿಸುವಂತೆ ಮೂರು ಬಾರಿ ಮನವಿ ಮಾಡಿದರೂ ಆತ ಪ್ರತಿ ಬಾರಿಯೂ ತಮ್ಮನ್ನು ನಿರ್ಲಕ್ಷಿಸಿ ಧೂಮ್ರಪಾನ ಮುಂದುವರಿಸಿದನೆಂದೂ ಹಾಗೂ ಬಸ್‌ನ ನಿರ್ವಾಹಕ ನಿಗದಿಗಿಂತ ೨ ರುಪಾಯಿ ಹೆಚ್ಚಿಗೆ ಪಡೆದನೆಂದು ಗ್ರಾಹಕ ವೇದಿಕೆಗೆ ದೂರು ಒಯ್ದಿದ್ದರು. ಇದರಲ್ಲಿ ಅವರು ಹರ್ಯಾಣ ಸಾರಿಗೆ ಇಲಾಖೆ ಮತ್ತು ಹರ್ಯಾಣ ಆರೋಗ್ಯ ಇಲಾಖೆಗಳನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದರು. ದೂರುದಾರ ಅಶೋಕಕುಮಾರ್ ಅವರು ೬-೩-೨೦೧೭ರಂದು ಕೈಥಾಲದಿಂದ ಅಂಬಾಲಾಕ್ಕೆ ಹರ್ಯಾಣ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಪ್ರಯಾಣ ಹೊರಟಿದ್ದರು. ಈ ಪ್ರಯಾಣದ ಅವಧಿಯಲ್ಲಿ ಬಸ್ ಚಾಲಕನು ಮೂರು ಬಾರಿ ಧ್ರೂಮ್ರಪಾನ ಮಾಡಿದನು. ಪ್ರತಿ ಬಾರಿಯೂ ಇವರು ಹಾಗೆ ಮಾಡಬೇಡವೆಂದು ಮನವಿ ಮಾಡಿದರೂ ಆತನು ಅದನ್ನು ಧಿಕ್ಕರಿಸಿ ಧೂಮ್ರಪಾನ ಮುಂದುವರಿಸಿದನು. ಇದರಿಂದ ದೂರುದಾರರಿಗೆ ಬಸ್‌ನಲ್ಲಿ ಉಸಿರುಕಟ್ಟಿದಹಾಗೆ ಆಯಿತು. ಈ ಸಂಬಂಧ ಅವರು ಹರ್ಯಾಣ ರೋಡ್ ವೇಸ್‌ನ ಜನರಲ್ ಮ್ಯಾನೇಜರ್‌ಗೆ ದೂರು ಸಲ್ಲಿಸಿದರು. ಆದರೆ ಚಾಲಕನ ವ...

ಷರತ್ತು ಉಲ್ಲಂಘಿಸಿದ ಹಾಲಿಡೇ ರೆಸಾರ್ಟ್‌ಗೆ ದಂಡ

ಆಂಧ್ರಪ್ರದೇಶದ ಸಿಕಂದರಾಬಾದ್‌ನ ಸಿಖ್ ಎಂಬ ಗ್ರಾಮದ ನಿವಾಸಿ, ನಿವೃತ್ತ ಕರ್ನಲ್ ಎಸ್.ಪಿ.ಪುಟ್ಚಾಲ ಅವರು ಸಿಕಂದರಾಬಾದ್‌ನ ಮಹಿಂದ್ರಾ ಹಾಲಿಡೇ ಆ್ಯಂಡ್ ರೆಸಾರ್ಟ್ಸ್ ಇಂಡಿಯಾ ಲಿ. ಮತ್ತು ಬೆಂಗಳೂರಿನ ರೆಸಾರ್ಟ್ ಕಂಡೋಮಿನಿಮಮ್ ಇಂಟರ್‌ನ್ಯಾಶನಲ್ ಲಿ. (ಆರ್‌ಸಿಐ) ವಿರುದ್ಧ ಹೂಡಿದ್ದ ಮೊಕದ್ದಮೆ ಇದು. ದೂರುದಾರ ಎಸ್.ಪಿ.ಪುಟ್ಚಾಲ ಅವರು ೪-೨-೨೦೦೬ರಂದು ಹಾಲಿಡೇ ರೆಸಾರ್ಟ್ಸ್‌ನ ಸದಸ್ಯರಾಗುತ್ತಾರೆ. ಆರಂಭದಲ್ಲಿ ಇವರು ಇದಕ್ಕಾಗಿ ೧,೪೯,೭೩೦ ರು.ನ ಚೆಕ್ ನೀಡುತ್ತಾರೆ. ಹಾಲಿಡೇ ರೆಸಾರ್ಟ್‌ನ ಪ್ರತಿನಿಧಿ ಆ ಚೆಕ್ ಕಳೆದುಹಾಕಿದ್ದರಿಂದ ಅವರು ೧,೮೯,೨೪೦ ರು.ನ ಹೊಸ ಚೆಕ್ ನೀಡುತ್ತಾರೆ. ದೇಶ ವಿದೇಶಗಳಲ್ಲಿ ರೆಸಾರ್ಟ್‌ನಲ್ಲಿ ವಾಸ ಮಾಡುವ ಹಲವು ಆಫರ್‌ಗಳನ್ನು ಕಂಡೋಮಿನಿಮಮ್ ಇಂಟರ್‌ನ್ಯಾಶನಲ್ ಲಿ. ಪುಟ್ಚಾಲ ಅವರಿಗೆ ೩೧-೧೨-೨೦೦೭ರ ಅವಧಿಯ ವರೆಗೆ ನೀಡಿರುತ್ತದೆ. ಎರಡು ರಾತ್ರಿಗಳ ಕಾಂಪ್ಲಿಮೆಂಟರಿ ಹಾಲಿಡೇಯನ್ನು ಹಾಲಿಡೇ ಕ್ಲಬ್‌ನ ಆಯ್ದ ರೆಸಾರ್ಟ್‌ಗಳಲ್ಲಿ ಕಳೆಯುವುದು, ಡೆಕ್ಕನ್ ಏರ್ ವೇಸ್‌ನಲ್ಲಿ ಒಮ್ಮುಖ ಪ್ರಯಾಣದ ೪ ಟಿಕೆಟ್‌ಗಳು, ಆರ್‌ಸಿಐನಲ್ಲಿ ೯ ಬೋನಸ್ ವಾರಗಳು ಇದರಲ್ಲಿ ಸೇರಿದ್ದವು. ಆರ್‌ಸಿಐ ೨೦-೦೨-೨೦೦೬ರಂದು ಒಂದು ಪತ್ರ ಬರೆದು ಅವರ ಸದಸ್ಯತ್ವವನ್ನು ೨೦೧೯ರ ಫೆಬ್ರವರಿ ವರೆಗೂ ದೃಢೀಕರಿಸಿದನ್ನು ತಿಳಿಸುತ್ತದೆ. ಹಾಲಿಡೇ ರೆಸಾರ್ಟ್ ಹೊಸ ಆಫರ್ ನೀಡಿದ ಪತ್ರವನ್ನು ಬರೆದು ಸದಸ್ಯತ್ವದ ಶುಲ್ಕವನ್ನು ೧,೮೯,೨೪೦ ರು.ನಿಂದ ೧,೪೯,೭೩೦ ರು.ಗ...

ತಪ್ಪಾಗಿ ಖಾತೆ ತರೆದು ನಂತರ ಬಡ್ಡಿಗೆ ಕೈಎತ್ತಿದ ಅಂಚೆ ಇಲಾಖೆಗೆ ಮುಖಭಂಗ

ಅಧಿಕಾರಿಗಳು ಮತ್ತು ಕಾನೂನು ಮಾಡುವವರು ಸ್ವಲ್ಪ ವಿವೇಚನೆ ಬಳಸಿದರೆ ಸಾರ್ವಜನಿಕರ ಬದುಕು ಅದೆಷ್ಟೋ ಸರಳವಾಗಿರುತ್ತಿತ್ತು. ಅನಗತ್ಯವಾಗಿ ಕೋರ್ಟ್ ಕಚೇರಿ ತಿರುಗುವುದು ತಪ್ಪುತ್ತಿತ್ತು. ಅಂಚೆ ಇಲಾಖೆಯ ಅಧಿಕಾರಿಗಳ ಅನಗತ್ಯ ಕಿರಿಕಿರಿಯೊಂದು ರಾಷ್ಟ್ರೀಯ ಗ್ರಾಹಕ ಆಯೋಗದವರೆಗೂ ಹೋಗಿತ್ತು. ಅಲ್ಲಿ ಅದಕ್ಕೆ ಮುಖಭಂಗವಾಯಿತು. ಗುಜರಾತ ರಾಜ್ಯದ ಭಾವನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ರಸೇಂದುಭಾಯಿ ಶಾಂತಿಲಾಲ್ ಪಾರೇಖ್ ಎನ್ನುವವರು ತಮ್ಮ ನಿವೃತ್ತಿಯ ಬಳಿಕ ಹಿರಿಯ ನಾಗರಿಕರ ಸೇವಾ ಯೋಜನೆಯ ಖಾತೆಯೊಂದನ್ನು ತೆರೆದಿದ್ದರು. ಅದನ್ನು ಅಂಚೆ ಇಲಾಖೆಯ ಏಜೆಂಟ್ ಒಬ್ಬನ ಮೂಲಕ ತೆರೆದದ್ದು. ಈ ಖಾತೆಯನ್ನು ಅಂಚೆ ಇಲಾಖೆಯು ಅಂಗೀಕರಿಸಿತ್ತು. ಆದರೆ ಈ ಖಾತೆಗೆ ಆಡಿಟ್ ಆಕ್ಷೇಪಣೆ ಬಂತು. ಆಗ ಅಂಚೆ ಕಚೇರಿಯು ಈ ಖಾತೆಯನ್ನು ಸ್ಥಗಿತಗೊಳಿಸಿತು. ಇದನ್ನು ಖಾತೆದಾರರಿಗೆ ತಿಳಿಸಿತು. ನಿಮಗೆ ಈಗಾಗಲೇ ಕೊಟ್ಟಿರುವ ಬಡ್ಡಿಯನ್ನು ವಜಾ ಮಾಡಿಕೊಂಡು ಖಾತೆಯಲ್ಲಿರುವ ಉಳಿದ ಹಣವನ್ನು ವಾಸಪ್ ನೀಡುವುದಾಗಿ ಹೇಳಿತು. ಆದರೆ ಇದಕ್ಕೆ ಅರ್ಜಿದಾರರು ಒಪ್ಪಲಿಲ್ಲ. ಭಾವನಗರ ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ದೂರು ದಾಖಲಿಸಿದರು. ಜಿಲ್ಲಾ ವೇದಿಕೆಯು ದೂರನ್ನು ಪುರಸ್ಕರಿಸಿತು. ದೂರುದಾರರು ಖಾತೆ ತೆರೆಯುವುದಕ್ಕೆ ಅರ್ಹರಲ್ಲ ಎಂದಿದ್ದರೆ ಅವರಿಗೆ ಖಾತೆ ತೆರೆಯುವುದಕ್ಕೆ ಅವಕಾಶ ನೀಡಬಾರದಿತ್ತು. ಅದು ಅಂಚೆ ಕಚೇರಿಯ ಕರ್ತವ್ಯ ಮತ್ತು ಜವಾಬ್ದಾರಿ ಎಂದು ಅದು ಹೇಳಿತು. ಇದರ ವಿರುದ್ಧ ಅಂಚೆ ಕಚ...

ವಿಮೆ ಕಾಯ್ದೆಯ ತಿದ್ದುಪಡಿ ಹಿಂದಿನ ಪಾಲಿಸಿಗಳಿಗೆ ಅನ್ವಯಿಸದು

೧೯೩೮ರ ವಿಮೆ ಕಾಯ್ದೆಯ ಸೆಕ್ಷನ್ ೪೫ರ ಪ್ರಕಾರ ಪಾಲಿಸಿಯ ೨ ವರ್ಷ ಮುಗಿದ ಬಳಿಕ ಪಾಲಿಸಿಯ ಲೋಪದೋಷಗಳನ್ನು ಪರಿಗಣಿಸುವಂತಿಲ್ಲ. ಆದರೆ ಇದಕ್ಕೆ ೨೬-೧೨-೨೦೧೪ರಂದು ತಿದ್ದುಪಡಿ ತರಲಾಗಿದೆ. ಇದು ನಂತರದ ಪಾಲಿಸಿಗಳಿಗೆ ಅನ್ವಯವೇ ಹೊರತು ಪೂರ್ವಾನ್ವಯವಾಗುವುದಿಲ್ಲ. ------------ ಜಿಂದಗಿ ಕೆ ಸಾಥ್ ಭಿ ಜಿಂದಗಿ ಕೆ ಬಾದ್ ಭಿ ಎಂಬ ಘೋಷಣೆಯೊಂದಿಗೆ ನಿಮಗೆ ವಿಮೆಯನ್ನು ನೀಡುವುದಕ್ಕೆ ಮುಂದೆ ಬರುವ ಭಾರತೀಯ ಜೀವ ವಿಮಾ ನಿಗಮವು ಈ ಘೋಷಣೆಗೆ ಅನುಗುಣವಾಗಿ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆಯೇ ಎಂಬ ಕುರಿತು ಅನುಮಾನ ವ್ಯಕ್ತಪಡಿಸುವಂಥ ಪ್ರಕರಣವೊಂದು ಇಲ್ಲಿದೆ. ವಿಮೆ ಪಡೆದ ವ್ಯಕ್ತಿಯ ವಾರಸುದಾರರಿಗೆ ವಿಮೆಯ ಮೊತ್ತ ಸಿಗದ ಹಾಗೆ ಮಾಡಲು ಏನಾದರೂ ಒಳಸುಳಿಗಳನ್ನು ಅದು ಹುಡುಕುತ್ತಲೇ ಇರುತ್ತದೆ. ಹೀಗೆ ತಕ್ಷಣಕ್ಕೆ ವಿಮೆಯ ಹಣ ವಾರಸುದಾರರಿಗೆ ಸಿಗದೆ ಹೋದಾಗ ವಿಮೆ ಮಾಡಿಸುವುದರ ಮೂಲ ಉದ್ದೇಶವೇ ವಿಫಲವಾಗುತ್ತದೆ. ಹಾಗೆಯೇ ವಿಮೆ ಮಾಡಿಸುವ ಧಾವಂತದಲ್ಲಿ ವಿಮೆಯ ಏಜೆಂಟರು ಏನೇನೋ ಬಣ್ಣದ ಕನಸುಗಳನ್ನು ಬಿತ್ತುತ್ತಾರೆ. ಫಾರ್ಮ್‌ಗೆ ಸಹಿ ಮಾಡಿಸಿಕೊಳ್ಳುತ್ತಾರೆ. ಉಳಿದುದನ್ನು ತಾವೇ ತುಂಬಿಕೊಳ್ಳುತ್ತಾರೆ. ಹೀಗೆ ಏಜೆಂಟ್ ತುಂಬಿದ ಫಾರ್ಮ್‌ನ ವಿವರಗಳಿಗೆ ಪಾಲಿಸಿದಾರ ಹೊಣೆಯಾಗುತ್ತಾನೆಯೇ? ಇಲ್ಲ ಎಂದು ಗ್ರಾಹಕ ನ್ಯಾಯಾಲಯಗಳ ತೀರ್ಪುಗಳು ಹೇಳುತ್ತವೆ. ಏನಿದು ಪ್ರಕರಣ?: ಪ್ರಕರಣದ ದೂರುದಾರರಾದ ಚಂಡೀಗಡದ ಜಸ್ವಿಂದರ ಕೌರ್ ಅವರ ಪತಿ ಗುರುಬೀರ್ ಸಿಂಗ್ ರಿಯಾರ್ ಅವರ...

ಕರಾರಿನಂತೆ ಸಾಲದ ಹಣ ಬಿಡುಗಡೆ ಮಾಡದ ಹಣಕಾಸು ಸಂಸ್ಥೆಗೆ ದಂಡ

ಬ್ಯಾಂಕು ಅಥವಾ ಹಣಕಾಸು ಸಂಸ್ಥೆಯೊಂದು ಸಾಲ ಕೊಡುವುದಾಗಿ ಒಪ್ಪಂದ ಮಾಡಿಕೊಂಡು ನಡುವೆಯೇ ನಿಲ್ಲಿಸಿಬಿಟ್ಟರೆ ನೀವು ಏನು ಮಾಡಬಲ್ಲಿರಿ? ಇಂಥ ಅಡನಾಡಿ ಹಣಕಾಸು ಸಂಸ್ಥೆಯ ಕಿಮಿ ಹಿಂಡುವವರು ಇಲ್ಲವೆ? ಇಂಥ ಸಂಸ್ಥೆಗಳ ವಿರುದ್ಧ ನೀವು ನ್ಯಾಯ ಕೇಳಿ ಗ್ರಾಹಕ ವೇದಿಕೆಯ ಮೊರೆಹೋಗಬಹುದು. ಹೀಗೆ ಗ್ರಾಹಕ ವೇದಿಕೆಯ ಮೊರೆಹೋಗಿ ನ್ಯಾಯ ಪಡೆದ ಒಂದು ಪ್ರಕರಣ ಇಲ್ಲಿದೆ. ಮಹಾರಾಷ್ಟ್ರದ ವರ್ಧಾ ಜಿಲ್ಲೆಯ ಸಮುದ್ರಪುರ ತಾಲೂಕಿ ಗಿರದ್‌ನ ನಿವಾಸಿ ನಿರ್ಭಯ ವಿನೋದ ಪಾಂಡೆ ಎಂಬವರು ತಮ್ಮ ಮನೆ ನಿರ್ಮಾಣಕ್ಕಾಗಿ ಮಹಿಂದ್ರಾ ಹೌಸಿಂಗ್ ರೂರಲ್ ಫೈನಾನ್ಸ್ ಲಿ.ನಿಂದ ಸಾಲ ಪಡೆಯಲು ಯೋಚಿಸಿದರು. ಇದಕ್ಕಾಗಿ ಅವರು ಈ ಫೈನಾನ್ಸ್‌ನ ಕಚೇರಿಗೆ ತೆರಳಿ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿದ್ಧಪಡಿಸುವ ಶುಲ್ಕವೆಂದು ೬,೫೦೦ ರು.ಗಳನ್ನು ೨೦೧೦ರ ಡಿಸೆಂಬರ್ ೧೦ರಂದು ತುಂಬಿದರು. ಇದಾದ ಬಳಿಕ ೨೦೧೧ರ ಫೆಬ್ರವರಿಯಲ್ಲಿ ಫೈನಾನ್ಸ್ ಸಂಸ್ಥೆ ಇವರಿಗೆ ೧ ಲಕ್ಷ ರು. ಸಾಲವನ್ನು ಮಂಜೂರು ಮಾಡಿತು. ಈ ಸಾಲಕ್ಕೆ ಸುರಕ್ಷತೆ ಉದ್ದೇಶದಿಂದ ೭-೩-೨೦೧೧ರಂದು ನಿರ್ಭಯ ಅವರ ತಂದೆಯ ಹೆಸರಿನಲ್ಲಿದ್ದ ಮನೆಯನ್ನು ಫೈನಾನ್ಸ್ ಸಂಸ್ಥೆಯು ಒತ್ತೆ ಮಾಡಿಕೊಂಡಿತು. ೧೬-೦೪-೨೦೧೧ರಂದು ಸಾಲದ ಮೊದಲ ಕಂತು ೨೭,೫೦೦ ರು.ಗಳನ್ನು ಬಿಡುಗಡೆ ಮಾಡಿತು. ಅಷ್ಟೊತ್ತಿಗೆ ನಿರ್ಭಯ ಪಾಂಡೆ ೫೦ ಸಾವಿರ ರು. ವೆಚ್ಚಮಾಡಿ ಮನೆಯ ಅಡಿಪಾಯದ ಕೆಲಸವನ್ನು ಮುಗಿಸಿದ್ದರು. ಬಳಿಕ ಇವರು ೩-೧೦-೨೦೧೧ರಂದು ೧,೨೦೦ ರು. ಬಡ್ಡಿಯನ್ನು ತುಂಬಿ...