Posts

Showing posts from May, 2017

ಐನಾಕ್ಸ್‌ಗೆ ನೀರಿಳಿಸಿದ ಗ್ರಾಹಕ

ಕುಡಿಯುವ ನೀರಿನ ಸೀಲ್ ಮಾಡಿದ ಬಾಟಲ್‌ಗಳನ್ನು ಅದರ ಮೇಲೆ ಮುದ್ರಿಸಿರುವ ಬೆಲೆಗಿಂತ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿರುವುದು ನಿಮ್ಮ ಗಮನಕ್ಕೂ ಬಂದಿರಬಹುದು. ಕೆಲವು ಸಲ ನೀವೇ ಅಧಿಕ ಹಣ ಪಾವತಿಸಿ ಖರೀದಿಸಿರಲೂ ಬಹುದು. ಹೈದ್ರಾಬಾದ್‌ನ ವ್ಯಕ್ತಿಯೊಬ್ಬರು ಇದರ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ದೂರು ನೀಡಿ ಪರಿಹಾರ ಪಡೆದಿದ್ದಾರೆ. ಇಂಥದ್ದೇ ಎರಡು ಮೂರು ಪ್ರಕರಣಗಳಲ್ಲಿ ಗ್ರಾಹಕರು ವಿಜಯಿಯಾಗಿದ್ದಾರೆ. ------- ಹೈದ್ರಾಬಾದ್‌ನ ವಿಜಯ ಗೋಪಾಲ ಎನ್ನುವವರು ಅಲ್ಲಿಯ ಜಿವಿಕೆ ಮಾಲ್‌ನಲ್ಲಿರುವ ಐನಾಕ್ಸ್ ಚಿತ್ರಮಂದಿರಕ್ಕೆ ಹೋಗಿದ್ದರು. ತಮ್ಮೊಂದಿಗೆ ಅವರು ನೀರಿನ ಬಾಟಲನ್ನು ಒಯ್ದಿದ್ದರು. ಆದರೆ ಚಿತ್ರಮಂದಿರದವರು, ನೀರಿನ ಬಾಟಲನ್ನು ಥಿಯೇಟರ್ ಒಳಗೆ ಒಯ್ಯುವುದಕ್ಕೆ ನಿಷೇಧವಿದೆ ಎಂದು ಅವರನ್ನು ತಡೆದರು. ನೀರಿನ ಬಾಟಲನ್ನು ತಮ್ಮ ಬಳಿ ಇರಿಸಿಕೊಂಡು ಅವರನ್ನು ಒಳಗೆ ಬಿಟ್ಟರು. ಹೀಗೇಕೆ ನೀವು ಮಾಡುತ್ತಿದ್ದೀರಿ ಎಂದು ಕೇಳಿದಾಗ, ನೀರನ್ನು ಸ್ಫೋಟಕ ತಯಾರಿಕೆಗೆ ಬಳಸುತ್ತಾರೆ. ಅದಕ್ಕಾಗಿ ಒಳಗೆ ಬಿಡುತ್ತಿಲ್ಲ ಎಂಬ ಕಾರಣ ನೀಡಿದರು. ಇನ್ನೊಂದು ದಿನ ಅವರು ಮಹೇಶ್ವರಿ ಪರಮೇಶ್ವರಿ ಮಾಲ್‌ನಲ್ಲಿರುವ ಐನಾಕ್ಸ್ ಚಿತ್ರಮಂದಿರಕ್ಕೆ ಹೋದರು. ಅಲ್ಲಿಯೂ ಅದೇ ಅನುಭವ. ಅಲ್ಲಿ ೨೦ ರುಪಾಯಿಯ ನೀರಿನ ಬಾಟಲಿಗೆ ೫೦ ರುಪಾಯಿ ಅವರಿಂದ ವಸೂಲಿ ಮಾಡಿದರು. ಹೊರಗಿನಿಂದ ನೀರಿನ ಬಾಟಲಿಯನ್ನು ಒಯ್ಯುವುದಕ್ಕೆ ಬಿಡದಿರುವ ಮೂಲಕ ಐನಾಕ್ಸ್ ತಮ್ಮದೇ ನೀರಿನ ಬಾಟಲಿಯನ್ನು ಹೆಚ್ಚ

ಸುಟ್ಟುಹೋದ ಸೀರೆಗೆ ಪರಿಹಾರ

ಸುಟ್ಟುಹೋದ ಸೀರೆಗಳನ್ನು ಪೂರೈಸಿದ ಏಳು ಸಂಸ್ಥೆಗಳಲ್ಲಿ ಒಂದು ಸಂಸ್ಥೆ ನೀಡಿದ ಬಿಲ್ ನಕಲಿಯಾಗಿತ್ತು. ಆ ಒಂದು ನಕಲಿ ಬಿಲ್‌ಗಾಗಿ ಜಾಬ್‌ವರ್ಕ್ ಮಾಡಿಕೊಟ್ಟ ಸಂಸ್ಥೆಗೆ ವಿಮೆ ಪರಿಹಾರ ನಿರಾಕರಿಸುವಂತಿಲ್ಲ ಎಂದು ರಾಷ್ಟ್ರೀಯ ಗ್ರಾಹಕ ಆಯೋಗ ತೀರ್ಪು ನೀಡಿತು. ------------ ಗುಜರಾತಿನ ರಾಜಕೋಟದ ಮೆ.ಜಯ್‌ಗುರುದೇವ್ ಫಿನಿಶಿಂಗ್ ವರ್ಕ್ಸ್ ಕಚ್ಚಾ ಸೀರೆಗಳ ಫಿನಿಶಿಂಗ್ ವರ್ಕ್ ಮಾಡಿಕೊಡುವ ಒಂದು ಸಂಸ್ಥೆ. ಇದು ಒರಿಯಂಟಲ್ ಇನ್ಸುರೆನ್ಸ್ ಕಂಪನಿಯಿಂದ ಬೆಂಕಿಯಿಂದಾಗುವ ಅನಾಹುತಗಳಿಗಾಗಿ ೧೫ ಲಕ್ಷ ರುಪಾಯಿಯ ವಿಮೆಯನ್ನು ಪಡೆದುಕೊಂಡಿತ್ತು. ವಿಮೆಯ ಅವಧಿಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿ ಜಯ್‌ಗುರುದೇವ ಸಂಸ್ಥೆಗೆ ತುಂಬಾ ಹಾನಿಯಾಗುತ್ತದೆ. ಮೆ. ಪುರುಷೋತ್ತಮ್ ಪ್ರಿಂಟ್ ಸೇರಿದಂತೆ ಏಳು ಸಂಸ್ಥೆಗಳು ತಮ್ಮ ಸೀರೆಗಳ ಫಿನಿಶಿಂಗ್ ವರ್ಕ್‌ಗಾಗಿ ಗುರುದೇವ ಸಂಸ್ಥೆಗೆ ಸೀರೆಗಳನ್ನು ಕಳುಹಿಸಿದ್ದವು. ಆ ಸಂಸ್ಥೆಗಳೆಲ್ಲ ತಾವು ಎಷ್ಟೆಷ್ಟು ಸೀರೆಗಳನ್ನು ಕೊಟ್ಟಿದ್ದೆವು ಎಂಬ ಕುರಿತು ದಾಖಲೆಗಳನ್ನು ಒದಗಿಸಿದ್ದವು. ಬೆಂಕಿ ಅನಾಹುತ ಸಂಭವಿಸಿದಾಗ ೧೪,೦೩೬ ಸೀರೆಗಳು ಅಲ್ಲಿದ್ದವು. ಅವುಗಳ ಮೌಲ್ಯ ೯.೬೩ ಲಕ್ಷ ರು. ಈ ಮೊತ್ತವನ್ನು ತಮಗೆ ನೀಡುವಂತೆ ಜಯ್‌ಗುರುದೇವ್ ಸಂಸ್ಥೆ ವಿಮೆ ಕಂಪನಿಯನ್ನು ಕೋರಿದಾಗ ಅದು ತಕರಾರು ಎತ್ತಿತು. ಅದು ಹಾನಿಯ ಸರ್ವೆ ಮಾಡುವುದಕ್ಕೆ ಹಿತಾರ್ಥ ದೇಸಾಯಿ ಮತ್ತು ತನಿಖೆಗಾಗಿ ಕೇತನ್ ಠಕ್ಕರ್ ಎಂಬವನ್ನು ನೇಮಿಸಿತ್ತು. ಅವರು ನೀಡಿದ ವರದಿಯಲ್ಲ

ಸರ್ವಿಸ್‌ಸೆಂಟರ್‌ನವನಿಗೆ ಬಿಸಿ ಮುಟ್ಟಿಸಿದ ಮೈಕ್ರೋವೇವ್ ಓವನ್ ವ್ಯಾಜ್ಯ

ಮೈಕ್ರೋವೇವ್ ಓವನ್ ಕೆಟ್ಟುಹೋದಾಗ ಅದನ್ನು ಸರ್ವಿಸ್ ಸೆಂಟರ್‌ನವರು ದುರಸ್ತಿಮಾಡಿಕೊಡಲಿಲ್ಲವೆಂದು ಗ್ರಾಹಕರೊಬ್ಬರು ನ್ಯಾಯ ಕೇಳಿ ರಾಷ್ಟ್ರೀಯ ಗ್ರಾಹಕ ಆಯೋಗದ ಮೆಟ್ಟಿಲು ಏರಿದ್ದರು. ಆದರೆ ಪರಿಹಾರ ಹೆಚ್ಚಿಸಬೇಕೆಂಬ ಬೇಡಿಕೆಗೆ ಮನ್ನಣೆ ಸಿಗಲಿಲ್ಲ. ---------------- ಇದು ಗುಜರಾತ ರಾಜ್ಯದ ರಾಜಕೋಟದ ರಮೇಶ ಡಿ ಮೋಟ್ವಾನಿಯವರು ಐಎಫ್‌ಬಿ ಗ್ಲೋಬಲ್ ಇಂಡಿಯಾ ಲಿ. ಕೋಲ್ಕತಾ ಮತ್ತು ಅದರ ರಾಜಕೋಟದ ಮಾರಾಟಗಾರ ಹಾಗೂ ಅದರ ಸರ್ವಿಸ್ ಸೆಂಟರ್ ವಿರುದ್ಧ ಹೂಡಿರುವ ಮೊಕದ್ದಮೆ. ಇವರು ಕ್ರಮವಾಗಿ ಪ್ರತಿವಾದಿ ನಂ.೧, ನಂ.೨ ಮತ್ತು ನಂ.೩. ಅಹ್ಮದಾಬಾದ್‌ನ ಗುಜರಾತ ರಾಜ್ಯ ಗ್ರಾಹಕ ಆಯೋಗವು ೨೦೧೫ರಲ್ಲಿ ನೀಡಿದ ತೀರ್ಪಿನ ವಿರುದ್ಧ ರಾಷ್ಟ್ರೀಯ ಗ್ರಾಹಕ ಆಯೋಗದಲ್ಲಿ ಸಲ್ಲಿಸಿರುವ ಮೇಲ್ಮನವಿ. ಅರ್ಜಿದಾರರ ಪರವಾಗಿ ಯಾರೂ ಹಾಜರಾಗಿರಲಿಲ್ಲ. ಆದರೆ ಅವರು ಲಿಖಿತ ವಾದವನ್ನು ಸಲ್ಲಿಸಿದ್ದರು. ಅದರ ಆಧಾರದ ಮೇಲೆಯೇ ಪ್ರಕರಣವನ್ನು ಇತ್ಯರ್ಥಪಡಿಸಲು ಕೋರಿದ್ದರು. ಪ್ರತಿವಾದಿಗಳು ತಯಾರಿಸಿದ ಮೈಕ್ರೋವೇವ್ ಓವನ್ ಒಂದನ್ನು ಅರ್ಜಿದಾರರು ಖರೀದಿಸಿದ್ದರು. ಈ ಖರೀದಿ ನಡೆದದ್ದು ೨೦-೧೦-೨೦೦೮ರಂದು. ಅದರ ಬೆಲೆ ೭೪೦೦ ರುಪಾಯಿ. ಇದರಲ್ಲಿ ಕೆಲವು ದೋಷಗಳು ಕಂಡುಬಂದಿದ್ದರಿಂದ ಮಾರಾಟಗಾರರ ಪರವಾಗಿ ಪ್ರತಿವಾದಿ ನಂ.೩ ಸರ್ವಿಸ್ ಸೆಂಟರ್‌ನವರು ದುರಸ್ತಿಗೆಂದು ಒಯ್ದರು. ಅದನ್ನು ತಮ್ಮ ಬಳಿ ದೂರ್ಘ ಕಾಲ ಇರಿಸಿಕೊಂಡರು. ಆದರೆ ಯಾವುದೇ ದುರಸ್ತಿಯನ್ನೂ ಮಾಡಲಿಲ್ಲ ಮತ್ತು ಅದನ್ನು ಹಿಂದಕ

ಚೆಕ್ ದಿನಾಂಕ ತಿದ್ದಿ ದಂಡ ತೆತ್ತ ಎಸ್‌ಬಿಐ

ಬ್ಯಾಂಕುಗಳ ದೊಡ್ಡಣ್ಣ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಂಡ ತೆತ್ತ ಪ್ರಕರಣ ಇದು. ಪಶ್ಚಿಮ ಬಂಗಾಳ ರಾಜ್ಯ ಗ್ರಾಹಕ ಆಯೋಗ ನೀಡಿದ ತೀರ್ಪಿನ ವಿರುದ್ಧ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರಾಷ್ಟ್ರೀಯ ಆಯೋಗದ ಮೆಟ್ಟಿಲು ತುಳಿದಿತ್ತು. ಚೆಕ್ ನೊಂದಣಿ ಮಾಡಿಕೊಳ್ಳುವ ಪುಸ್ತಕವನ್ನು ಆಯೋಗದೆದುರು ಹಾಜರುಪಡಿಸಲು ಅದು ವಿಫಲವಾಯಿತು. ------------ ಸತ್ಯರಂಜನ್ ದಾಸ್ ಕೋಲ್ಕತ್ತಾದ ಶಾನ್ ಕ್ಲಾಸಿಕ್ಸ್ ಎಂಎಫ್‌ಜಿ ಕಂಪನಿಯ ಏಕೈಕ ಮಾಲೀಕರು. ತಮ್ಮ ವ್ಯವಹಾರದಲ್ಲಿ ಅವರು ಮಧ್ಯಪ್ರದೇಶದ ಮೆ.ಅಲೈಡ್ ಮಿನರಲ್ಸ್ ಆ್ಯಂಡ್ ಇಂಡಸ್ಟ್ರೀಸ್‌ಗೆ ಅನಿಲ ಉತ್ಪಾದನೆಯ ಘಟಕವನ್ನು ಪೂರೈಸುವ ಆರ್ಡರ್ ಪಡೆದುಕೊಂಡರು. ಈ ವ್ಯವಹಾರದ ಆಂಶಿಕ ಪಾವತಿಯಾಗಿ ಎಸ್‌ಬಿಐನ ಕತ್ನಿ ಶಾಖೆಯಲ್ಲಿ ಪಾವತಿಯಾಗುವಂತೆ ೧೦ ಲಕ್ಷ ರುಪಾಯಿಯ ಒಂದು ಚೆಕ್ ಸಿಗುತ್ತದೆ. ಚೆಕ್ ನಂ.೧೪೫೬೧೮, ದಿನಾಂಕ ೩೦-೦೭-೨೦೧೫ ಎಂದಿತ್ತು. ಸತ್ಯರಂಜನ್ ದಾಸ್ ಅವರು ಈ ಚೆಕ್‌ಅನ್ನು ಕೋಲ್ಕತ್ತಾದ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯಲ್ಲಿ ಜಮಾ ಮಾಡುತ್ತಾರೆ. ಅಲ್ಲಿ ಅವರ ಕರಂಟ್ ಅಕೌಂಟ್ ಖಾತೆ ಇತ್ತು. ಬ್ಯಾಂಕ್ ಆಫ್ ಇಂಡಿಯಾ ಆ ಚೆಕ್‌ಅನ್ನು ಎಸ್‌ಬಿಐನ ಕತ್ನಿ ಶಾಖೆಗೆ ಕಳುಹಿಸುತ್ತದೆ. ಎಸ್‌ಬಿಐ ಆ ಚೆಕ್‌ಅನ್ನು ಅವಧಿ ಮೀರಿದೆ ಎಂಬ ಷರಾದೊಂದಿಗೆ ೧೮-೧೦-೨೦೦೦೫ರಂದು ವಾಪಸ್ ಕಳುಹಿಸುತ್ತದೆ. ಅದು ಬಂದ ಬಳಿಕ ದೂರುದಾರ ಸತ್ಯರಂಜನ್ ಅವರು ಚೆಕ್ ಗಮನಿಸುತ್ತಾರೆ. ೩೦-೦೭-೨೦೦೫ ಎಂಬುದನ್ನು ೩೦-೦೭-೨೦೦೪ಎಂದು ತಿದ್ದಿರುವುದು