Posts

Showing posts from May, 2019

ಚಿಟ್ ಕಂಪನಿ ಚೀಟ್ ಮಾಡಿದರೆ ಗ್ರಾಹಕ ವೇದಿಕೆಯಲ್ಲಿ ಪರಿಹಾರ ಕೋರಬಹುದು

-- ನಾಯಿಕೊಡೆಗಳಂತೆ ಹುಟ್ಟಿಕೊಳ್ಳುವ ಚಿಟ್‌ಫಂಡ್ ಕಂಪನಿಗಳು ತನ್ನ ಗ್ರಾಹಕರಿಗೆ ಮೋಸಮಾಡುತ್ತವೆ ಎಂಬ ದೂರುಗಳು ಸಾಮಾನ್ಯ. ಹೀಗೆ ಮೋಸ ಹೋದ ವ್ಯಕ್ತಿಯೊಬ್ಬರು ಗ್ರಾಹಕ ವೇದಿಕೆಯಲ್ಲಿ ದೂರನ್ನು ದಾಖಲಿಸಿ ನ್ಯಾಯ ಪಡೆದಿದ್ದಾರೆ. -- ಬೆಂಗಳೂರಿನ ಎನ್.ಮಧುಸೂದನ ಎಂಬವರು ಮತ್ತಿಕೆರೆಯಲ್ಲಿರುವ ಮೆ.ಲೆನಾಕ್ಷಿಸ್ ಚಿಟ್ಸ್ ಪ್ರೈ.ಲಿ. ಇಲ್ಲಿ ೧೦ ಲಕ್ಷ ರುಪಾಯಿಗಳ ಒಂದು ಮತ್ತು ೧ ಲಕ್ಷ ರುಪಾಯಿಯ ಇನ್ನೊಂದು ಚಿಟ್‌ಗೆ ಸದಸ್ಯರಾಗಿದ್ದರು. ಅವರು ೧ ಲಕ್ಷ ರು. ಚಿಟ್‌ಗೆ ಬಿಡ್ ಮಾಡಿ ಯಶಸ್ವಿಯಾದರು. ಚಿಟ್ ಕಂಪನಿಯು ೧೫ ದಿನಗಳೊಳಗೆ ಹಣ ನೀಡುವುದಾಗಿ ಭರವಸೆ ನೀಡಿತು. ಆದರೆ ಹಣ ನೀಡಲಿಲ್ಲ. ಇಂದು ಕೊಡುತ್ತೇನೆ ನಾಳೆ ಕೊಡುತ್ತೇನೆ ಎಂದು ದಿನ ತಳ್ಳುತ್ತ ಬಂತು. ನಂತರ ಅಕ್ಟೋಬರ್ ೨೦೧೫ರಲ್ಲಿ ಆ ಮೊತ್ತವನ್ನು ನೀಡಿತು. ಇದೊಂದು ಸೇವಾನ್ಯೂನತೆ ಎಂದು ಮಧುಸೂದನ ಅವರು ಭಾವಿಸಿದರು. ಚಿಟ್ ಕಂಪನಿಯವರ ಕೆಟ್ಟ ಧೋರಣೆಯಿಂದ ಬೇಸರವೂ ಆಯಿತು. ಕಾರಣ ತಮ್ಮ ೧೦ ಲಕ್ಷ ರುಪಾಯಿಯ ಚಿಟ್ ಸದಸ್ಯತ್ವವನ್ನು ರದ್ದುಗೊಳಿಸಲು ಅವರು ನಿರ್ಧರಿಸಿದರು. ಈ ಸಂಬಂಧ ಅವರು ೦೭-೦೫-೨೦೧೬ರಂದು ಚಿಟ್ ಕಂಪನಿಗೆ ಒಂದು ಪತ್ರ ಬರೆದು ತಮ್ಮ ಸದಸ್ಯತ್ವ ರದ್ದುಗೊಳಿಸಲು ಕೋರಿದರು. ಮತ್ತು ತಾವು ಈಗಾಗಲೆ ಸಂದಾಯ ಮಾಡಿರುವ ಹಣವನ್ನು ತಮಗೆ ಮರಳಿಸುವಂತೆಯೂ ಬೇಡಿಕೆ ಇಟ್ಟರು. ಚಿಟ್ ಕಂಪನಿಯು ಇವರಿಂದ ಪಾಸ್‌ಪುಸ್ತಕವನ್ನು ಮರಳಿ ಪಡೆದುಕೊಂಡು ಹಣ ವಾಪಸ್ ನೀಡುವುದಾಗಿ ತಿಳಿಸಿತು. ಈ ಖಾತೆಗಾಗಿ ಅವರು ಅ

ಕಟ್ಟಡ ಹಸ್ತಾಂತರ ದಿನಾಂಕ ಕರಾರಿನಲ್ಲಿ ಬಿಲ್ಡರ್ ನಮೂದಿಸುವುದು ಕಡ್ಡಾಯ

ಬಿಲ್ಡರುಗಳು ತಾವು ಯೋಜನೆಯನ್ನು ಮುಗಿಸಿ ಹಸ್ತಾಂತರಿಸುವ ದಿನಾಂಕವನ್ನು ಗ್ರಾಹಕರಿಗೆ ತಿಳಿಸಬೇಕಾದದ್ದು ಅವರ ಕರ್ತವ್ಯ. ಈ ಸಂಬಂಧದಲ್ಲಿ ರಿಯಲ್ ಎಸ್ಟೇಟ್ (ರೆಗ್ಯುಲೇಶನ್ ಆ್ಯಂಡ್ ಡೆವಲಪ್‌ಮೆಂಟ್) ಆ್ಯಕ್ಟ್ ೨೦೧೬ರ ಸೆಕ್ಷನ್ ೧೩(೨) ಹಸ್ತಾಂತರದ ದಿನಾಂಕವನ್ನು ತಿಳಿಸಬೇಕಾದುದನ್ನು ಕಡ್ಡಾಯ ಮಾಡುತ್ತದೆ. ---- ದೆಹಲಿಯ ಶೋಭಾ ಅರೋರಾ ಮತ್ತು ಅವರ ಪುತ್ರ ವರುಣ್ ಅರೋರಾ ಅಜಯ್ ಎಂಟರ್‌ಪ್ರೈಸಸ್ ಪ್ರೈ.ಲಿ.ನಿಂದ ದೆಹಲಿಯಲ್ಲಿಯೇ ವಾಣಿಜ್ಯ ಬಳಕೆ ಉದ್ದೇಶದ ಒಂದು ಸ್ಥಳವನ್ನು ಬುಕ್ ಮಾಡುತ್ತಾರೆ. ನಿವೇಶನ ಖರೀದಿದಾರರ ಒಪ್ಪಂದವು ಉಭಯತರ ನಡುವೆ ೨೦-೧೧-೨೦೦೬ರಂದು ಏರ್ಪಡುತ್ತದೆ. ಖರೀದಿಗೆ ಉದ್ದೇಶಿಸಿದ್ದ ಸ್ಥಳವು ೮೭೬ ಚದರ ಅಡಿ ಇತ್ತು. ಪ್ರತಿ ಚದರ ಅಡಿಗೆ ೫೪೩೫ ರು.ನಂತೆ ನೀಡುವುದಕ್ಕೆ ಒಪ್ಪಿಕೊಳ್ಳಲಾಗಿತ್ತು. ಯೋಜನೆಯ ಸ್ಥಳದಲ್ಲಿ ೫ನೆ ಮಹಡಿಯಲ್ಲಿ ಇದನ್ನು ನೀಡುವುದು ಎಂದು ನಿರ್ಧಾರವಾಗುತ್ತದೆ. ಇದರ ಮೌಲ್ಯ ೪೭,೬೧,೦೬೦ ರು. ಅಲ್ಲದೆ ಕಾರ್ ಪಾರ್ಕಿಂಗಿಗೆ ಎಂದು ೨,೨೫,೦೦೦ ರು. ಶುಲ್ಕ ವಿಧಿಸುತ್ತಾರೆ. ೦೩-೧೦-೨೦೦೬ರಂದು ಶೋಭಾ ಅರೋರಾ ಅವರು ಬಿಲ್ಡರ್‌ಗೆ ಆರಂಭಿಕ ಪಾವತಿಯಾಗಿ ೭,೧೪,೧೬೦ ರು.ಗಳನ್ನು ಸಂದಾಯ ಮಾಡುತ್ತಾರೆ. ೦೮-೦೯-೨೦೦೮ರೊಳಗೆ ಒಟ್ಟಾರೆಯಾಗಿ ೨೭,೧೨,೪೬೨ ರು.ಗಳನ್ನು ಸಂದಾಯ ಮಾಡಿರುತ್ತಾರೆ. ಒಪ್ಪಂದಕ್ಕೆ ಸಹಿಯಾಗುವ ವೇಳೆಗೆ ಬಿಲ್ಡರ್‌ಗಳು ತಮ್ಮ ಯೋಜನೆಯು ಹರ್ಯಾಣ ಅರ್ಬನ್ ಡೆವಲಪ್‌ಮೆಂಟ್ ಅಥಾರಿಟಿಯಿಂದ ಮಂಜೂರಾತಿಯನ್ನು ಪಡೆದಿದ

ಬಸ್‌ನಲ್ಲಿ ೨ ರು.ಹೆಚ್ಚಿಗೆ ಪಡೆದ ಕಂಡಕ್ಟರ್ ೫ ಸಾವಿರ ರು. ಪರಿಹಾರ ಪಡೆದ ಗ್ರಾಹಕ

೬೮ ರು. ಬದಲಿಗೆ ೭೦ ರು. ಪಡೆದು ಚಿಲ್ಲರೆ ವಾಪಸ್ ನೀಡಿರಲಿಲ್ಲ. ಪ್ರಯಾಣಿಕ ರಾಷ್ಟ್ರೀಯ ಗ್ರಾಹಕ ಆಯೋಗದವರೆಗೂ ದೂರನ್ನು ಒಯ್ದರು. ಜೊತೆಗೆ ಚಾಲಕ ಧೂಮ್ರಪಾನ ಮಾಡಿದ್ದನ್ನೂ ಅವರು ಪ್ರಶ್ನಿಸಿದರು. ---- ಹರ್ಯಾಣದ ಹಿಸಾರ್ ಜಿಲ್ಲೆಯ ಅಶೋಕ ಕುಮಾರ್ ಪರ್ಜಾಪತ್ ಎಂಬವರು ಹರ್ಯಾಣ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಬಸ್ ಡ್ರೈವರ್ ಸಿಗರೇಟು ಸೇವನೆ ಮಾಡಿದನೆಂದೂ ಮತ್ತು ಅದನ್ನು ನಿಲ್ಲಿಸುವಂತೆ ಮೂರು ಬಾರಿ ಮನವಿ ಮಾಡಿದರೂ ಆತ ಪ್ರತಿ ಬಾರಿಯೂ ತಮ್ಮನ್ನು ನಿರ್ಲಕ್ಷಿಸಿ ಧೂಮ್ರಪಾನ ಮುಂದುವರಿಸಿದನೆಂದೂ ಹಾಗೂ ಬಸ್‌ನ ನಿರ್ವಾಹಕ ನಿಗದಿಗಿಂತ ೨ ರುಪಾಯಿ ಹೆಚ್ಚಿಗೆ ಪಡೆದನೆಂದು ಗ್ರಾಹಕ ವೇದಿಕೆಗೆ ದೂರು ಒಯ್ದಿದ್ದರು. ಇದರಲ್ಲಿ ಅವರು ಹರ್ಯಾಣ ಸಾರಿಗೆ ಇಲಾಖೆ ಮತ್ತು ಹರ್ಯಾಣ ಆರೋಗ್ಯ ಇಲಾಖೆಗಳನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದರು. ದೂರುದಾರ ಅಶೋಕಕುಮಾರ್ ಅವರು ೬-೩-೨೦೧೭ರಂದು ಕೈಥಾಲದಿಂದ ಅಂಬಾಲಾಕ್ಕೆ ಹರ್ಯಾಣ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಪ್ರಯಾಣ ಹೊರಟಿದ್ದರು. ಈ ಪ್ರಯಾಣದ ಅವಧಿಯಲ್ಲಿ ಬಸ್ ಚಾಲಕನು ಮೂರು ಬಾರಿ ಧ್ರೂಮ್ರಪಾನ ಮಾಡಿದನು. ಪ್ರತಿ ಬಾರಿಯೂ ಇವರು ಹಾಗೆ ಮಾಡಬೇಡವೆಂದು ಮನವಿ ಮಾಡಿದರೂ ಆತನು ಅದನ್ನು ಧಿಕ್ಕರಿಸಿ ಧೂಮ್ರಪಾನ ಮುಂದುವರಿಸಿದನು. ಇದರಿಂದ ದೂರುದಾರರಿಗೆ ಬಸ್‌ನಲ್ಲಿ ಉಸಿರುಕಟ್ಟಿದಹಾಗೆ ಆಯಿತು. ಈ ಸಂಬಂಧ ಅವರು ಹರ್ಯಾಣ ರೋಡ್ ವೇಸ್‌ನ ಜನರಲ್ ಮ್ಯಾನೇಜರ್‌ಗೆ ದೂರು ಸಲ್ಲಿಸಿದರು. ಆದರೆ ಚಾಲಕನ ವ

ಷರತ್ತು ಉಲ್ಲಂಘಿಸಿದ ಹಾಲಿಡೇ ರೆಸಾರ್ಟ್‌ಗೆ ದಂಡ

ಆಂಧ್ರಪ್ರದೇಶದ ಸಿಕಂದರಾಬಾದ್‌ನ ಸಿಖ್ ಎಂಬ ಗ್ರಾಮದ ನಿವಾಸಿ, ನಿವೃತ್ತ ಕರ್ನಲ್ ಎಸ್.ಪಿ.ಪುಟ್ಚಾಲ ಅವರು ಸಿಕಂದರಾಬಾದ್‌ನ ಮಹಿಂದ್ರಾ ಹಾಲಿಡೇ ಆ್ಯಂಡ್ ರೆಸಾರ್ಟ್ಸ್ ಇಂಡಿಯಾ ಲಿ. ಮತ್ತು ಬೆಂಗಳೂರಿನ ರೆಸಾರ್ಟ್ ಕಂಡೋಮಿನಿಮಮ್ ಇಂಟರ್‌ನ್ಯಾಶನಲ್ ಲಿ. (ಆರ್‌ಸಿಐ) ವಿರುದ್ಧ ಹೂಡಿದ್ದ ಮೊಕದ್ದಮೆ ಇದು. ದೂರುದಾರ ಎಸ್.ಪಿ.ಪುಟ್ಚಾಲ ಅವರು ೪-೨-೨೦೦೬ರಂದು ಹಾಲಿಡೇ ರೆಸಾರ್ಟ್ಸ್‌ನ ಸದಸ್ಯರಾಗುತ್ತಾರೆ. ಆರಂಭದಲ್ಲಿ ಇವರು ಇದಕ್ಕಾಗಿ ೧,೪೯,೭೩೦ ರು.ನ ಚೆಕ್ ನೀಡುತ್ತಾರೆ. ಹಾಲಿಡೇ ರೆಸಾರ್ಟ್‌ನ ಪ್ರತಿನಿಧಿ ಆ ಚೆಕ್ ಕಳೆದುಹಾಕಿದ್ದರಿಂದ ಅವರು ೧,೮೯,೨೪೦ ರು.ನ ಹೊಸ ಚೆಕ್ ನೀಡುತ್ತಾರೆ. ದೇಶ ವಿದೇಶಗಳಲ್ಲಿ ರೆಸಾರ್ಟ್‌ನಲ್ಲಿ ವಾಸ ಮಾಡುವ ಹಲವು ಆಫರ್‌ಗಳನ್ನು ಕಂಡೋಮಿನಿಮಮ್ ಇಂಟರ್‌ನ್ಯಾಶನಲ್ ಲಿ. ಪುಟ್ಚಾಲ ಅವರಿಗೆ ೩೧-೧೨-೨೦೦೭ರ ಅವಧಿಯ ವರೆಗೆ ನೀಡಿರುತ್ತದೆ. ಎರಡು ರಾತ್ರಿಗಳ ಕಾಂಪ್ಲಿಮೆಂಟರಿ ಹಾಲಿಡೇಯನ್ನು ಹಾಲಿಡೇ ಕ್ಲಬ್‌ನ ಆಯ್ದ ರೆಸಾರ್ಟ್‌ಗಳಲ್ಲಿ ಕಳೆಯುವುದು, ಡೆಕ್ಕನ್ ಏರ್ ವೇಸ್‌ನಲ್ಲಿ ಒಮ್ಮುಖ ಪ್ರಯಾಣದ ೪ ಟಿಕೆಟ್‌ಗಳು, ಆರ್‌ಸಿಐನಲ್ಲಿ ೯ ಬೋನಸ್ ವಾರಗಳು ಇದರಲ್ಲಿ ಸೇರಿದ್ದವು. ಆರ್‌ಸಿಐ ೨೦-೦೨-೨೦೦೬ರಂದು ಒಂದು ಪತ್ರ ಬರೆದು ಅವರ ಸದಸ್ಯತ್ವವನ್ನು ೨೦೧೯ರ ಫೆಬ್ರವರಿ ವರೆಗೂ ದೃಢೀಕರಿಸಿದನ್ನು ತಿಳಿಸುತ್ತದೆ. ಹಾಲಿಡೇ ರೆಸಾರ್ಟ್ ಹೊಸ ಆಫರ್ ನೀಡಿದ ಪತ್ರವನ್ನು ಬರೆದು ಸದಸ್ಯತ್ವದ ಶುಲ್ಕವನ್ನು ೧,೮೯,೨೪೦ ರು.ನಿಂದ ೧,೪೯,೭೩೦ ರು.ಗ