Posts

Showing posts from September, 2017

ಪ್ರತಿವಾದಿ ವಿಚಾರಣೆಗೆ ಹಾಜರಾಗಿಲ್ಲ ಎಂದರೆ ದೂರಿನಲ್ಲಿಯ ಆರೋಪಗಳನ್ನು ಒಪ್ಪಿಕೊಂಡಂತೆ

ಗ್ರಾಹಕ ವ್ಯಾಜ್ಯಗಳಲ್ಲಿ ಸಾಮಾನ್ಯವಾಗಿ ಪ್ರತಿವಾದಿಗಳು ವಿಚಾರಣೆಗೆ ಹಾಜರಾಗುವುದಿಲ್ಲ. ಅಂಥ ಸಂದರ್ಭಗಳಲ್ಲಿ ವಿಚಾರಣೆ ಏಕಪಕ್ಷೀಯವಾಗಿ ನಡೆಯುತ್ತದೆ. ಮತ್ತು ದೂರಿನಲ್ಲಿಯ ಆರೋಪಗಳನ್ನು ಪ್ರತಿವಾದಿ ಒಪ್ಪಿಕೊಂಡಿದ್ದಾರೆ ಎಂದೇ ಕಾನೂನುಪ್ರಕಾರವಾಗಿ ಭಾವಿಸಲಾಗುತ್ತದೆ. ಪ್ರಕರಣವೊಂದರಲ್ಲಿ ರಾಷ್ಟ್ರೀಯ ಗ್ರಾಹಕ ಆಯೋಗವೇ ಇದನ್ನು ಸ್ಪಷ್ಟಪಡಿಸಿದೆ. ಗುಡ್ ಲಕ್ ಡೆವೆಲಪರ್ಸ್ ಗೋವಾದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಒಂದು ಕಂಪನಿ. ಇವರ ಮಾರ್ಗೋವಾದ ‘ಕದಂಬ ಆರ್ಕೇಡ್ ಪ್ರಾಜೆಕ್ಟ್’ನಲ್ಲಿ ವಿಘ್ನೇಶ್ ಶಾನುಭಾಗ್ ಎನ್ನುವವರು ಒಂದು ಅಪಾರ್ಟ್‌ಮೆಂಟ್ ಖರೀದಿಸುತ್ತಾರೆ. ೨೦೧೨ರ ನವೆಂಬರ್‌ನಲ್ಲಿ ಅದು ಅವರ ವಶಕ್ಕೆ ಬರುತ್ತದೆ. ೨೧-೧-೨೦೧೩ರಂದು ವಿಘ್ನೇಶ್ ಹೆಸರಿಗೆ ಅದು ನೊಂದಣಿಯಾಗುತ್ತದೆ. ೨೦೧೩ರ ಮಳೆಗಾದಲ್ಲಿ ಅಪಾರ್ಟ್‌ಮೆಂಟ್‌ನ ಗೋಡೆಗಳು ತೇವವಾಗುತ್ತಿರುವುದು ಕಂಡುಬಂತು. ೨೦೧೪ರ ಜೂನ್‌ನಲ್ಲಿ ಭಾರೀ ಮಳೆಯ ಕಾರಣ ಗೋಡೆಗಳಲ್ಲಿ ನೀರು ಬರುವುದು ಹೆಚ್ಚಿತು. ಛಾವಣಿಯಲ್ಲೂ ಸೋರಿಕೆ ಕಂಡಿತು. ಗೋಡೆಯಲ್ಲಿ ನಿಲ್ಲಿಸಿದ್ದ ಕಟ್ಟಿಗೆಯ ಕಬೋರ್ಡ್ ಕೂಡ ಕೆಟ್ಟುಹೋಯಿತು. ಇದನ್ನು ಗುಡ್ ಲಕ್ ಡೆವಲಪರ್ಸ್ ಗಮನಕ್ಕೆ ತರಲಾಯಿತು. ಇದರ ದುರಸ್ತಿವೆಚ್ಚವೆಂದು ೩೦ ಸಾವಿರ ರುಪಾಯಿಯ ಚೆಕಅನ್ನು ವಿಘ್ನೇಶ್ ಅವರಿಗೆ ಕಂಪನಿ ನೀಡಿತು. ಇದು ತಮ್ಮ ಲಕ್ ಎಂದು ಕೊಂಡು ವಿಘ್ನೇಶ್ ಚೆಕ್‌ಅನ್ನು ಬ್ಯಾಂಕ್‌ಗೆ ಹಾಕಿದರೆ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದ ಕಾರಣಕ್ಕೆ ಅದು ತಿರಸ