Posts

Showing posts from September, 2022

ವಾಣಿಜ್ಯ ವ್ಯವಹಾರ ಗ್ರಾಹಕ ರಕ್ಷಣೆ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ

* ಮರು ಮಾರಾಟ ಉದ್ದೇಶದ ನಿವೇಶನ ಖರೀದಿ ವಿವಾದದ ದೂರು ವಜಾ ಗ್ರಾಹಕ ನ್ಯಾಯಾಲಯಗಳಲ್ಲಿ ದೂರನ್ನು ದಾಖಲಿಸುವ ಮೊದಲು ಗ್ರಾಹಕ ರಕ್ಷಣೆ ಕಾಯ್ದೆಯ ಪ್ರಕಾರ ತಾವು ಗ್ರಾಹಕರೇ ಎಂಬುದನ್ನು ಪ್ರತಿಯೊಬ್ಬರೂ ಗಮನಿಸತಕ್ಕದ್ದು. ವಾಣಿಜ್ಯದ ವ್ಯವಹಾರಗಳು ಗ್ರಾಹಕ ರಕ್ಷಣೆ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ. ಅಂದರೆ ನೀವೊಂದು ವಸ್ತುವನ್ನು ಖರೀದಿಸಿ ಅದನ್ನು ಮತ್ತೆ ಮಾರಾಟ ಮಾಡುವವರಿದ್ದರೆ ಈ ಖರೀದಿಯಲ್ಲಿ ನೀವು ಗ್ರಾಹಕರಾಗಿರುವುದಿಲ್ಲ. ಅದು ಲಾಭದ ಉದ್ದೇಶದ ಖರೀದಿಯಾಗಿರುತ್ತದೆ. ಈ ಸೂಕ್ಷ್ಮವನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇಲ್ಲಿ ಅಂಥದ್ದೊಂದು ಪ್ರಕರಣವಿದೆ. ಹೈದ್ರಾಬಾದದ ಸಂಜಯ ಧೀರ್‌ ಎನ್ನುವವರು ಬಹ್ರೇನ್‌ ಮೂಲದ, ಆದರೆ ಬೆಂಗಳೂರಿನಲ್ಲಿ ಕಚೇರಿಯನ್ನು ಹೊಂದಿರುವ ಮೆ.ಎಕ್ಸ್‌ಪಾಟ್‌ ಪ್ರಾಜೆಕ್ಟ್ಸ್‌ ಆ್ಯಂಡ್‌ ಡೆವಲಪರ್ಸ್‌ ಪ್ರೈ.ಲಿ. ಇವರಿಂದ ನಾಲ್ಕು ನಿವೇಶನಗಳನ್ನು (ಪ್ರತಿಯೊಂದೂ 1011.71.ಚ.ಮೀ.) 20,68,000 ರುಪಾಯಿಗಳಿಗೆ ಖರೀದಿಸುವುದಕ್ಕಾಗಿ 9,67,000 ರುಪಾಯಿಗಳನ್ನು ಮುಂಗಡವಾಗಿ ನೀಡಿ ಒಪ್ಪಂದಪತ್ರವನ್ನು ಮಾಡಿಕೊಳ್ಳುತ್ತಾರೆ. ಆದರೆ ಮೆ.ಎಕ್ಸ್‌ಪಾಟ್‌ ಪ್ರಾಜೆಕ್ಟ್ಸ್‌ ಆ್ಯಂಡ್‌ ಡೆವಲಪರ್ಸ್‌ ಪ್ರೈ.ಲಿ. ಇವರು ಸಂಜಯ ಧೀರ್‌ ಅವರಿಗೆ ನಿವೇಶನಗಳನ್ನು ಹಸ್ತಾಂತರಿಸಲೂ ಇಲ್ಲ, ಅವರ ಹೆಸರಿಗೆ ಕ್ರಯಪತ್ರವನ್ನು ಮಾಡಿಸಿ ಕೊಡಲೂ ಇಲ್ಲ. ಇದರಿಂದ ಅಸಮಾಧಾನಗೊಂಡ ಅವರು ಬೆಂಗಳೂರು 2ನೆ ಹಚ್ಚುವರಿ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ವೇದಿ

ಐಸಿಐಸಿಐ ಬ್ಯಾಂಕ್‌ ವಿಳಂಬವಾಗಿ ಸಲ್ಲಿಸಿದ ಮೇಲ್ಮನವಿ ವಜಾ

* ಜಿಲ್ಲಾ ವೇದಿಕೆ ತೀರ್ಪಿನ ವಿರುದ್ಧ 45 ದಿನಗಳ ಒಳಗಾಗಿ ಮೇಲ್ಮನವಿ ಸಲ್ಲಿಸಬಹುದು ಗ್ರಾಹಕ ನ್ಯಾಯಾಲಯಗಳ ಸ್ಥಾಪನೆಯ ಉದ್ದೇಶ ತ್ವರಿತವಾಗಿ, ಸರಳವಾಗಿ ಜನಸಾಮಾನ್ಯರಿಗೆ ನ್ಯಾಯವನ್ನು ಒದಗಿಸಬೇಕು ಎಂಬುದು. ಕೆಲವೊಮ್ಮೆ ಸಣ್ಣ ಸಣ್ಣ ಮೊತ್ತಗಳಿಗೂ ದೊಡ್ಡ ದೊಡ್ಡ ಸಂಸ್ಥೆಗಳು ಮೇಲ್ಮನವಿಯನ್ನು ಸಲ್ಲಿಸಿ ವ್ಯರ್ಥವಾಗಿ ಕಾಲ ವಿಳಂಬಕ್ಕೆ ಕಾರಣವಾಗುತ್ತವೆ. ಇದರ ಬಗ್ಗೆ ಗ್ರಾಹಕ ನ್ಯಾಯಾಲಯಗಳು ಕಟುವಾಗಿ ಟಿಪ್ಪಣಿಯನ್ನು ಮಾಡುತ್ತ ಬಂದಿವೆ. ಹೀಗಿದ್ದೂ ವಿಳಂಬವಾಗಿ ಮೇಲ್ಮನವಿಯನ್ನು ಸಲ್ಲಿಸಿ ವಿನಾಯ್ತಿಯನ್ನು ಬೇಡುವ ಪರಿಪಾಠವನ್ನು ಸಂಸ್ಥೆಗಳು ರೂಢಿಸಿಕೊಂಡಿವೆ. ಇಲ್ಲಿ ಅಂಥ ಒಂದು ಪ್ರಕರಣವಿದೆ. ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಅರುಣ ಮಾನದೇವರಾವ್‌ ಗಾವಂಡೆ ಎಂಬವರು ಐಸಿಐಸಿಐ ಬ್ಯಾಂಕಿನಿಂದ 3.60 ಲಕ್ಷ ರುಪಾಯಿ ಗೃಹಸಾಲವನ್ನು ಪಡೆದಿದ್ದರು. ಬ್ಯಾಂಕು ತಮ್ಮಿಂದ ಅಧಿಕ ಬಡ್ಡಿಯನ್ನು ವಸೂಲು ಮಾಡಿದೆ ಎಂಬ ತಕರಾರನ್ನು ಗಾವಂಡೆಯವರು ಅಮರಾವತಿ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ಸಲ್ಲಿಸಿದ್ದರು. ಜಿಲ್ಲಾ ವೇದಿಕೆಯು 03-10-2015ರಂದು ನೀಡಿದ ತೀರ್ಪಿನಲ್ಲಿ ದೂರನ್ನು ಭಾಗಶಃ ಪುರಸ್ಕರಿಸಿತು. ಮತ್ತು ಹೆಚ್ಚುವರಿಯಾಗಿ ವಸೂಲು ಮಾಡಿರುವ 78,123 ರುಪಾಯಿಗಳನ್ನು ಸಾಲದ ಉಳಿದಿರುವ ಮೊತ್ತದಲ್ಲಿ ಮರುಹೊಂದಾಣಿಕೆ ಮಾಡಬೇಕು ಮತ್ತು 01-01-2013ರಿಂದ ಅನ್ವಯವಾಗುವಂತೆ ಈ ಹಣಕ್ಕೆ ಶೇ.8ರಂತೆ ಬಡ್ಡಿಯನ್ನು ನೀಡಬೇಕು. ಪರಿಹಾರವೆಂದು 10 ಸಾವಿರ ರುಪಾಯಿಗಳನ್ನು ಮ

ದೂರುದಾರರ ಪರವಾಗಿ ಗ್ರಾಹಕ ಆಯೋಗ ತಾನೇ ಊಹಿಸಿಕೊಳ್ಳುವುದು ಕಾನೂನು ಸಮ್ಮತವಲ್ಲ

* ಜಂಟಿ ಖಾತೆಗೆ ಅನಕ್ಷರಸ್ಥೆಯ ಹೆಸರು ಸೇರಿಸಿದ ಪ್ರಕರಣದಲ್ಲಿ ರಾಷ್ಟ್ರೀಯ ಆಯೋಗದ ತೀರ್ಪು ಆಧುನಿಕ ಯುಗದಲ್ಲಿ ಬ್ಯಾಂಕು ಪ್ರತಿಯೊಬ್ಬರ ಜೀವನದಲ್ಲೂ ಹಾಸುಹೊಕ್ಕಾಗಿದೆ. ದೇಶದ ಪ್ರತಿ ಕುಟುಂಬವೂ ಒಂದು ಬ್ಯಾಂಕ್‌ ಅಕೌಂಟನ್ನು ಹೊಂದಿರುತ್ತದೆ. ಅಕೌಂಟ್‌ ಹೊಂದಿರುವ ವ್ಯಕ್ತಿ ಅಕ್ಷರಸ್ಥನೋ ಅನಕ್ಷರಸ್ಥನೋ ಎಂಬುದು ಇಲ್ಲಿ ಪರಿಗಣನೆಗೆ ಬರುವುದಿಲ್ಲ. ತಮ್ಮ ಅನಕ್ಷರತೆಯ ಕಾರಣದಿಂದಾಗಿ ಬ್ಯಾಂಕ್‌ ವ್ಯವಹಾರದಲ್ಲಿ ಮೋಸ ಹೋದರೆ ಗ್ರಾಹಕ ವೇದಿಕೆಗಳು ನೆರವಿಗೆ ಬರುತ್ತವೆಯೆ ಎಂಬುದು ಪ್ರಶ್ನೆ. ಇಲ್ಲಿ ಅಂಥ ಒಂದು ಪ್ರಕರಣ ಇದೆ. ಮುಂಬಯಿಯ ಶಂಭುನಾಥ ಅಮೃತ್ ಚೌಹಾಣ ಎಂಬವರು ಸಿಂಗಾಪುರದ ಪಾನ್‌ ಯುನೈಟೆಡ್‌ ಶಿಪ್ಪಿಂಗ್‌ ಪ್ರೈ.ಲಿ.ನ ಪಿ.ವಿ.ಹಾರ್ಮನಿ ಎಂಬ ಹಡಗಿನಲ್ಲಿ ವೆಲ್ಡರ್‌ ಆಗಿ ಕೆಲಸ ಮಾಡುತ್ತಿದ್ದರು. ಅವರು ಕರ್ತವ್ಯದ ಮೇಲೆ ಇದ್ದಾಗ ಚೀನಾದ ಟಿಯಾನ್ಜಿನ್‌‌ ಬಂದರಿನಲ್ಲಿ ಅಪಘಾತದಲ್ಲಿ ಸಾವನ್ನಪ್ಪುತ್ತಾರೆ. ಭಾರತದ ರಾಯಭಾರ ಕಚೇರಿಯ ಮೂಲಕ ಪರಿಹಾರಕ್ಕೆ ಅರ್ಜಿ ಸಲ್ಲಿಕೆಯಾಗುತ್ತದೆ. ಪರಿಹಾರವೆಂದು 93,115.76 ಸಿಂಗಾಪುರ ಡಾಲರ್‌‌ ಬರುತ್ತದೆ. ಕಂಪನಿಯು ಇದಕ್ಕೆ ಸಮನಾದ 55,000 ಅಮೆರಿಕದ ಡಾಲರಿನ ಚೆಕ್‌ ಅನ್ನು ಅವರ ವಾರಸುದಾರರಾದ ಪತ್ನಿ ಬುನಿಯಾದೇವಿ ಚೌಹಾಣ, ಮಕ್ಕಳಾದ ಧರ್ಮೇಂದ್ರ ಚೌಹಾಣ, ರವೀಂದ್ರ ಚೌಹಾಣ, ಸ್ನೇಹಾ ಚೌಹಾಣ ಅವರಿಗೆ ಕಂಪನಿಯ ಮುಂಬಯಿ ಕಚೇರಿಯಲ್ಲಿ 30.08.2004 ರಂದು ನೀಡುತ್ತದೆ. ಈ ಸಂದರ್ಭದಲ್ಲಿ ಮೃತನ ಸಹೋದರ

ವಿದ್ಯುತ್‌ ಆಘಾತದ ಸಾವಿಗೆ ಸಂಬಂಧಿಸಿದ ವಿತ್ಯುತ್‌ ನಿಗಮ ಪರಿಹಾರ ನೀಡಬೇಕು

* ರಾಷ್ಟ್ರೀಯ ವರಮಾನದ ಆಧಾರದಲ್ಲಿ ಪರಿಹಾರ ನಿಗದಿ ಮಾಡಬೇಕು ವಿದ್ಯುತ್ತು ದೇಶದ ಹಳ್ಳಿಹಳ್ಳಿಗೂ ಇಂದು ತಲುಪಿದೆ. ವಿದ್ಯುತ್‌ ಉತ್ಪಾದನೆ, ವಿತರಣೆ ಒಂದು ಜಾಲದ ಮೂಲಕ ಗ್ರಾಹಕನ ವರೆಗೆ ತಲುಪುತ್ತದೆ. ಬಹುತೇಕ ವಿದ್ಯುತ್‌ ಬಳಕೆದಾರರಿಗೆ ತಾನು ಗ್ರಾಹಕನೆಂಬ ಕಲ್ಪನೆ ಇರುವುದಿಲ್ಲ. ವಿದ್ಯುತ್‌ ಪೂರೈಕೆಯ ಸೇವೆಯಲ್ಲಿ ವ್ಯತ್ಯಯವಾಗಿ ಬಳಕೆದಾರನಿಗೆ ಹಾನಿ ಸಂಭವಿಸಿದರೆ ಅದಕ್ಕೆ ವಿದ್ಯುತ್‌ ನಿಗಮಗಳು ಪರಿಹಾರವನ್ನು ನೀಡಬೇಕಾಗುತ್ತದೆ. ವಿದ್ಯುತ್‌ ತೆಗೆಯುವುದಿದ್ದರೂ ಗ್ರಾಹಕರಿಗೆ ಮುಂಚಿತವಾಗಿ ತಿಳಿಸಬೇಕಾಗುತ್ತದೆ. ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಎಂಬ ಸುದ್ದಿ ಅಥವಾ ಜಾಹೀರಾತು ಪತ್ರಿಕೆಗಳಲ್ಲಿ ಪ್ರಕಟವಾಗುವುದು ಇಂಥ ಉತ್ತರದಾಯಿತ್ವದ ಕಾರಣದಿಂದಾಗಿಯೇ. ಪ್ರಸ್ತುತ ಪ್ರಕರಣವು ಚಿತ್ರದುರ್ಗ ಜಿಲ್ಲೆಯ ಗ್ರಾಹಕ ವೇದಿಕೆಯಲ್ಲಿ ದಾಖಲಾಗಿದ್ದು. ವಿದ್ಯುತ್‌ ಇಲಾಖೆಯ ನೌಕರರು ವಿದ್ಯುತ್‌ ವಯರಿಗೆ ಸರಿಯಾಗಿ ಟೇಪನ್ನು ಅಂಟಿಸದೇ ಇದ್ದುದರಿಂದ ಗೋಲಿಯಾಡುತ್ತಿದ್ದ ಬಾಲಕನೊಬ್ಬ ಗೋಲಿ ಹೆಕ್ಕಲು ಹೋದಾಗ ಆ ವಯರನ್ನು ಮುಟ್ಟಿ ಪ್ರಾಣ ಕಳೆದುಕೊಳ್ಳುತ್ತಾನೆ. ಆತನ ಸಾವಿಗೆ ಯಾರು ಪರಿಹಾರವನ್ನು ಕೊಡಬೇಕು ಎಂಬ ವಿಚಾರ ಗ್ರಾಹಕ ವೇದಿಕೆಯ ಮೆಟ್ಟಿಲನ್ನು ಏರಿತ್ತು. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದ ಭೋವಿ ಕಾಲನಿಯ ಶಿವಮೂರ್ತಿ ಎಂಬವರ ಪುತ್ರ ಕಿರಣ್‌ 01-06-2015ರಂದು 1 ಗಂಟೆ ಸುಮಾರಿಗೆ ಪಂಪ್‌ ಹೌಸ್‌ ಹತ್ತಿರ ಸ್ನೇಹಿತನ ಜೊತೆ ಗೋಲಿಯಾಡುತ್ತ

ನೆಟ್‌ವರ್ಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರಷ್ಟೇ ಯಶಸ್ವಿನಿ ವಿಮೆ ಪರಿಹಾರ

* ಕಾನೂನಿನ ಜ್ಞಾನ ಇಲ್ಲದಿರುವುದು ಕ್ಷಮೆಗೆ ಅರ್ಹವಲ್ಲ ಜನಸಾಮಾನ್ಯರ ಕಲ್ಯಾಣಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುತ್ತದೆ. ಅದರ ಸರಿಯಾದ ತಿಳಿವಳಿಕೆ ಇಲ್ಲದೆಯೇ ಅನೇಕರು ಫಲಾನುಭವಿಗಳಾಗುವ ಅವಕಾಶದಿಂದ ವಂಚಿತರಾಗುತ್ತಾರೆ. ಇಲ್ಲಿ ಅಂಥ ಒಂದು ಪ್ರಕರಣ ಇದೆ. ಬಡವರಿಗೆ ತುರ್ತಾಗಿ ಅನಾರೋಗ್ಯದ ಚಿಕಿತ್ಸೆಗೆ ದೊಡ್ಡ ಮೊತ್ತದ ಅಗತ್ಯ ಒದಗಿದರೆ ಅದನ್ನು ಒದಗಿಸುವುದಕ್ಕೆ ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಸ್ಥಳೀಯ ವ್ಯವಸಾಯ ಸೇವಾ ಸಹಹಕಾರಿ ಸಂಘಗಳು ಮತ್ತಿತರ ಸಂಸ್ಥೆಗಳ ಮೂಲಕ ಇದಕ್ಕೆ ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ. ಮೈಸೂರಿನ ಕಲಾಲವಾಡಿ ಗ್ರಾಮದ 54 ವರ್ಷದ ಎ.ಪಿ.ಚಂದ್ರಶೇಖರ ಎಂಬವರು 31-12-2012ರಂದು ಪುತ್ತೂರಿನ ಧನ್ವಂತರಿ ಆಸ್ಪತ್ರೆಗೆ ಒಳರೋಗಿಯಾಗಿ ಸೇರ್ಪಡೆಯಾಗುತ್ತಾರೆ. ಅಲ್ಲಿ ಅವರಿಗೆ ಹರ್ನಿಯಾ ಶಸ್ತ್ರಚಿಕಿತ್ಸೆಯನ್ನು ಮಾಡುತ್ತಾರೆ. 3-01-2013ರಂದು ಅವರು ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಾರೆ. ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆಗೆಂದು 19,990 ರುಪಾಯಿ ವೆಚ್ಚ ಮಾಡಿರುತ್ತಾರೆ. ಯಶಸ್ವಿನಿ ಯೋಜನೆಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದರಿಂದ ತಮ್ಮ ಚಿಕಿತ್ಸೆಯ ವೆಚ್ಚವನ್ನು ನೀಡುವಂತೆ ಅವರು ಯಶಸ್ವಿನಿ ಕೋ-ಆಪರೇಟಿವ್‌‌ ಫಾರ್ಮರ್ಸ್‌ ಹೆಲ್ತ್‌ ಕೇರ್‌ ಟ್ರಸ್ಟ್‌ಗೆ ಅರ್ಜಿ ಸಲ್ಲಿಸುತ್ತಾರೆ, ಆದರೆ ಚಂದ್ರಶೇಖರ ಅವರು ಈ ವಿಮೆ ಪಡೆಯಲು ಅರ್ಹರಲ್ಲ ಎಂದು ಟ್ರಸ್ಟ್‌

ವೈದ್ಯರ ನಿರ್ಲಕ್ಷ್ಯಕ್ಕೆ ಗ್ರಾಹಕ ವೇದಿಕೆಯಲ್ಲಿ ಪರಿಹಾರ ಪಡೆಯಬಹುದು

* ಅರ್ಹತೆ ಇಲ್ಲದಿದ್ದರೂ ಆಸ್ಪತ್ರೆ ನಡೆಸುವ, ಶಸ್ತ್ರಚಿಕಿತ್ಸೆ ನಡೆಸುವ ವೈದ್ಯರಿದ್ದಾರೆ, ಎಚ್ಚರ! ವಿಶಾಲವಾದ ಅರ್ಥದಲ್ಲಿ ಎಲ್ಲ ಖರೀದಿದಾರರು ಮತ್ತು ಸೇವೆಯನ್ನು ಹಣಕ್ಕೆ ಪಡೆಯುವವರು ಗ್ರಾಹಕರು. ಎಲ್ಲಿ ಗ್ರಾಹಕ ಜಾಗೃತನಾಗಿರುತ್ತಾನೋ ಅಲ್ಲಿ ವ್ಯವಹಾರದಲ್ಲಿ ಮೋಸ ಕಡಿಮೆಯಾಗಿರುತ್ತದೆ. ಭಾರತ ಸರ್ಕಾರವೇ ಜಾಗೋ ಗ್ರಾಹಕ್ ಎಂದು ಪ್ರಚಾರ ಮಾಡುತ್ತಿದೆ. ಕೇಂದ್ರ ಸರ್ಕಾರದಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆ ಎಂಬ ಮಂತ್ರಾಲಯವೇ ಇದೆ. ಒಂದು ವೇಳೆ ಗ್ರಾಹಕ ತನಗೆ ಮೋಸವಾಗಿದೆ ಎಂದು ಭಾವಿಸಿದರೆ ಅದಕ್ಕೆ ಆತ ಪರಿಹಾರವನ್ನು ಎಲ್ಲಿ ಹೇಗೆ ಪಡೆಯಬಹುದು? ಸರ್ಕಾರವು ಇದಕ್ಕೆ ಒಂದು ವ್ಯವಸ್ಥೆಯನ್ನು ರೂಪಿಸಿದೆ. ನ್ಯಾಯಾಂಗಕ್ಕೆ ಸಮಾನಾಂತರವಾಗಿ ಮತ್ತು ಅಷ್ಟೇ ಅಧಿಕಾರವನ್ನು ಹೊಂದಿರುವ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವನ್ನು ಹುಟ್ಟುಹಾಕಿದೆ. ಜಿಲ್ಲಾ ಮಟ್ಟದಲ್ಲಿ ಗ್ರಾಹಕ ವ್ಯಾಜ್ಯ ನಿವಾರಣೆ ವೇದಿಕೆಗಳು ಇದ್ದರೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಆಯೋಗಗಳಿವೆ. ಜಿಲ್ಲಾ ವೇದಿಕೆಯ ತೀರ್ಪು ತೃಪ್ತಿ ತರದಿದ್ದರೆ ರಾಜ್ಯ ಆಯೋಗಕ್ಕೂ, ರಾಜ್ಯ ಆಯೋಗದ ತೀರ್ಪಿನ ವಿರುದ್ಧ ರಾಷ್ಟ್ರೀಯ ಆಯೋಗಕ್ಕೂ ಮೇಲ್‌‌ಮನವಿ ಸಲ್ಲಿಸಬಹುದು. ಸಂದರ್ಭ ಒದಗಿದಾಗ ಇವುಗಳ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲಾಗುವುದು. ಬಹುತೇಕ ಜನರಿಗೆ ವೈದ್ಯಕೀಯ ಸೇವೆಯು ಗ್ರಾಹಕ ಕಾಯ್ದೆಯ ಅಡಿಯಲ್ಲಿ ಬರುತ್ತದೆ ಎಂಬುದು ಗೊತ್ತಿರಲಿಕ್ಕಿಲ್ಲ. ವೈದ್ಯೋ ನಾರಾಯಣೋ ಹರಿಃ ಎಂದು ವೈದ್ಯರ