Posts

Showing posts from February, 2019

ಕರಾರಿನಂತೆ ಸಾಲದ ಹಣ ಬಿಡುಗಡೆ ಮಾಡದ ಹಣಕಾಸು ಸಂಸ್ಥೆಗೆ ದಂಡ

ಬ್ಯಾಂಕು ಅಥವಾ ಹಣಕಾಸು ಸಂಸ್ಥೆಯೊಂದು ಸಾಲ ಕೊಡುವುದಾಗಿ ಒಪ್ಪಂದ ಮಾಡಿಕೊಂಡು ನಡುವೆಯೇ ನಿಲ್ಲಿಸಿಬಿಟ್ಟರೆ ನೀವು ಏನು ಮಾಡಬಲ್ಲಿರಿ? ಇಂಥ ಅಡನಾಡಿ ಹಣಕಾಸು ಸಂಸ್ಥೆಯ ಕಿಮಿ ಹಿಂಡುವವರು ಇಲ್ಲವೆ? ಇಂಥ ಸಂಸ್ಥೆಗಳ ವಿರುದ್ಧ ನೀವು ನ್ಯಾಯ ಕೇಳಿ ಗ್ರಾಹಕ ವೇದಿಕೆಯ ಮೊರೆಹೋಗಬಹುದು. ಹೀಗೆ ಗ್ರಾಹಕ ವೇದಿಕೆಯ ಮೊರೆಹೋಗಿ ನ್ಯಾಯ ಪಡೆದ ಒಂದು ಪ್ರಕರಣ ಇಲ್ಲಿದೆ. ಮಹಾರಾಷ್ಟ್ರದ ವರ್ಧಾ ಜಿಲ್ಲೆಯ ಸಮುದ್ರಪುರ ತಾಲೂಕಿ ಗಿರದ್‌ನ ನಿವಾಸಿ ನಿರ್ಭಯ ವಿನೋದ ಪಾಂಡೆ ಎಂಬವರು ತಮ್ಮ ಮನೆ ನಿರ್ಮಾಣಕ್ಕಾಗಿ ಮಹಿಂದ್ರಾ ಹೌಸಿಂಗ್ ರೂರಲ್ ಫೈನಾನ್ಸ್ ಲಿ.ನಿಂದ ಸಾಲ ಪಡೆಯಲು ಯೋಚಿಸಿದರು. ಇದಕ್ಕಾಗಿ ಅವರು ಈ ಫೈನಾನ್ಸ್‌ನ ಕಚೇರಿಗೆ ತೆರಳಿ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿದ್ಧಪಡಿಸುವ ಶುಲ್ಕವೆಂದು ೬,೫೦೦ ರು.ಗಳನ್ನು ೨೦೧೦ರ ಡಿಸೆಂಬರ್ ೧೦ರಂದು ತುಂಬಿದರು. ಇದಾದ ಬಳಿಕ ೨೦೧೧ರ ಫೆಬ್ರವರಿಯಲ್ಲಿ ಫೈನಾನ್ಸ್ ಸಂಸ್ಥೆ ಇವರಿಗೆ ೧ ಲಕ್ಷ ರು. ಸಾಲವನ್ನು ಮಂಜೂರು ಮಾಡಿತು. ಈ ಸಾಲಕ್ಕೆ ಸುರಕ್ಷತೆ ಉದ್ದೇಶದಿಂದ ೭-೩-೨೦೧೧ರಂದು ನಿರ್ಭಯ ಅವರ ತಂದೆಯ ಹೆಸರಿನಲ್ಲಿದ್ದ ಮನೆಯನ್ನು ಫೈನಾನ್ಸ್ ಸಂಸ್ಥೆಯು ಒತ್ತೆ ಮಾಡಿಕೊಂಡಿತು. ೧೬-೦೪-೨೦೧೧ರಂದು ಸಾಲದ ಮೊದಲ ಕಂತು ೨೭,೫೦೦ ರು.ಗಳನ್ನು ಬಿಡುಗಡೆ ಮಾಡಿತು. ಅಷ್ಟೊತ್ತಿಗೆ ನಿರ್ಭಯ ಪಾಂಡೆ ೫೦ ಸಾವಿರ ರು. ವೆಚ್ಚಮಾಡಿ ಮನೆಯ ಅಡಿಪಾಯದ ಕೆಲಸವನ್ನು ಮುಗಿಸಿದ್ದರು. ಬಳಿಕ ಇವರು ೩-೧೦-೨೦೧೧ರಂದು ೧,೨೦೦ ರು. ಬಡ್ಡಿಯನ್ನು ತುಂಬಿ