Posts

Showing posts from August, 2017

ವಿಮೆ ಮಾಡಿಸುವ ಮೊದಲೇ ರೋಗ ಇತ್ತು ಎಂಬುದನ್ನು ಸಾಬೀತು ಮಾಡಲು ಎಲ್ಐಸಿ ವಿಫಲ

ಸಾಮಾನ್ಯವಾಗಿ ಜೀವವಿಮೆ ಮಾಡಿಸುವವರು ತಮ್ಮ ಸ್ವಂತ ಲಾಭದ ವಿಚಾರ ಮಾಡುವುದಿಲ್ಲ. ತಮಗೇನಾದರೂ ಆದರೆ ತಮ್ಮ ಕುಟುಂಬದ ನೆರವಿಗೆ ಆ ಹಣ ಬರುತ್ತದೆ ಎಂದು ಮಾಡಿಸಿರುತ್ತಾರೆ. ಆದರೆ ವಿಮೆ ಕಂಪನಿ ಕೆಲವೊಮ್ಮೆ ಅನಗತ್ಯ ಕಿರಿಕಿರಿ ಮಾಡಿ ಹಣ ನೀಡಲು ನಿರಾಕರಿಸುತ್ತದೆ. ಆ ಸಂದರ್ಭದಲ್ಲಿ ವಿಮೆಯಲ್ಲಿ ನಾಮನಿರ್ದೇಶನಗೊಂಡವರು ಗ್ರಾಹಕ ವೇದಿಕೆಯಲ್ಲಿ ಪರಿಹಾರ ಪಡೆಯಬಹುದು. ಯಾವುದೇ ವಿಮೆ ಕಂಪನಿ ಸುಖಾಸುಮ್ಮನೆ ವಿಮೆ ನಿರಾಕರಿಸಲು ಬರುವುದಿಲ್ಲ. ತಾನು ನಿರಾಕರಿಸುವುದಕ್ಕೆ ಸರಿಯಾದ ಕಾರಣಗಳನ್ನು ಅದು ನೀಡಬೇಕಾಗುತ್ತದೆ. ತನ್ನ ಆರೋಪಗಳನ್ನು ಸಿದ್ಧಪಡಿಸುವ ಜವಾಬ್ದಾರಿ ವಿಮೆ ಕಂಪನಿಯದೇ ಆಗಿರುತ್ತದೆ. ಹರ್ಯಾಣದ ರೋಹತಕ್ ಜಿಲ್ಲೆಯ ದಂಪತಿ ತಮ್ಮ ಮಗನ ವಿಮೆ ಹಣಕ್ಕಾಗಿ ಗ್ರಾಹಕ ವೇದಿಕೆಯಲ್ಲಿ ದೂರು ಸಲ್ಲಿಸಿ ವಿಜಯಿಯಾಗಿದ್ದಾರೆ. ಎಲ್‌ಐಸಿಯು ರಾಷ್ಟ್ರೀಯ ಗ್ರಾಹಕ ವ್ಯಾಜ್ಯನಿವಾರಣೆ ಆಯೋಗದ ವರೆಗೂ ಮೇಲ್ಮನವಿ ಸಲ್ಲಿಸಿದರೂ ಅದರ ಪರವಾಗಿ ತೀರ್ಪು ಬರಲಿಲ್ಲ. ಸರೋಜಿನಿ ಮತ್ತು ರಾಜೇಶ್ ದಂಪತಿಯ ಪುತ್ರ ರವಿಕುಮಾರ್ ಎಲ್‌ಐಸಿಯಿಂದ ೫ ಲಕ್ಷ ರುಪಾಯಿಗೆ ಒಂದು ಪಾಲಿಸಿಯನ್ನು ೨೮-೦೫-೨೦೧೩ರಂದು ಮಾಡಿಸಿದ್ದರು. ಪಾಲಿಸಿ ಮಾಡಿಸುವ ವೇಳೆ ಅವರು ಎಲ್‌ಐಸಿಯ ವೈದ್ಯರಿಂದ ತಪಾಸಣೆಗೆ ಒಳಪಟ್ಟಿದ್ದಾಗಿ ಪಾಲಿಸಿಯಲ್ಲಿ ನಮೂದಾಗಿತ್ತು. ಅವರ ಆರೋಗ್ಯದಲ್ಲಿ ಗಮನಕ್ಕೆ ಬರಬಹುದಾದ ಯಾವುದೇ ರೋಗಲಕ್ಷಣಗಳಿರಲಿಲ್ಲ. ತಮಗೆ ಯಾವುದಾದರೂ ಕಾಯಿಲೆ ಇದೆ ಎಂದು ಅವರಾದರೂ ಪಾಲಿಸಿ ಮಾಡುವಾಗ ತಿಳಿ