Posts

ವಿಶ್ವವಿದ್ಯಾಲಯಗಳು ನೀಡುವ ಶಿಕ್ಷಣ ಸೇವೆಯಲ್ಲ

* ಶಿಕ್ಷಣ ಸಂಸ್ಥೆಗಳ ವ್ಯಾಜ್ಯ ಗ್ರಾಹಕ ಆಯೋಗದ ವ್ಯಾಪ್ತಿಗೆ ಬರುವುದಿಲ್ಲ ಶಿಕ್ಷಣ ಸಂಸ್ಥೆಗಳಿಂದ ನಡೆಯುವ ಸೇವಾನ್ಯೂನತೆಗೆ ಗ್ರಾಹಕ ನ್ಯಾಯಾಲಯಗಳಲ್ಲಿ ಪರಿಹಾರ ಸಿಗಬಹುದೆ ಎಂದು ಕೇಳಿದರೆ ಇಲ್ಲ ಎಂದೇ ಹೇಳಬೇಕು. ಒಂದು ಪ್ರಕರಣದಲ್ಲಿ ಜಿಲ್ಲಾ ವೇದಿಕೆ ಮತ್ತು ರಾಜ್ಯ ಆಯೋಗ ದೂರುದಾರರ ಪರವಾಗಿ ನೀಡಿದ ತೀರ್ಪನ್ನು ರಾಷ್ಟ್ರೀಯ ಆಯೋಗ ರದ್ದುಪಡಿಸಿದೆ. ಇದು ಪಶ್ಚಿಮ ಬಂಗಾಳದ ಹೌರಾದ ಶ್ರೇಯೋಸಿ ಚಟರ್ಜಿ ಮತ್ತು ರೆಜಿಸ್ಟ್ರಾರ್‌, ಮನೋನ್ಮನಿಯಮ್‌ ಸುಂದರನಾರ್ ಯುನಿವರ್ಸಿಟಿ, ಅಭಿಷೇಕಪಟ್ಟಿ, ತಿರುನೆಲ್ವೇಲಿ ನಡುವಿನ ಪ್ರಕರಣ. ಶ್ರೇಯೋಸಿ ಟರ್ಜಿಯವರು ಮೇಲೆ ಹೇಳಿದ ವಿಶ್ವವಿದ್ಯಾನಿಲಯದಿಂದ ಮಾರ್ಕೆಟಿಂಗ್‌ನಲ್ಲಿ ಎಂಬಿಎ ಮಾಡುತ್ತಿದ್ದರು. ಅವರು 2012ರ ಡಿಸೆಂಬರ್‌ನಲ್ಲಿ ಕೋರ್ಸ್‌ ಮುಗಿಸಿದರೂ ಪ್ರಮಾಣಪತ್ರ ನೀಡಿ ಪದವಿಯನ್ನು ದೃಢೀಕರಿಸಿಲ್ಲ ಎಂಬುದು ದೂರು. ಇದರಲ್ಲಿ ಸೇವಾನ್ಯೂನತೆ ತಲೆದೋರಿದೆ ಎಂದು 1.ಮನೋನ್ಮನಿಯಮ್‌ ಸುಂದರನಾರ್ ಯುನಿವರ್ಸಿಟಿ, 2.ಪಿಎಸ್‌ಎಸ್‌ ಪ್ರೊಫೆಶನಲ್‌ ಕಾಲೇಜು, ಕೋಲ್ಕತಾ ಮತ್ತು 3.ದುರ್ಗಾಪುರ ಸ್ಕೂಲ್‌ ಆಫ್‌ ಸೈನ್ಸ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌, ದುರ್ಗಾಪುರ, ಪ.ಬಂಗಾಳ ಇವರನ್ನು ಪ್ರತಿವಾದಿಗಳನ್ನಾಗಿ ಮಾಡಿ ಜಿಲ್ಲಾ ವೇದಿಕೆಯಲ್ಲಿ ದೂರನ್ನು ದಾಖಲಿಸಲಾಯಿತು. ತಮಗೆ ತಕ್ಷಣ ಮಾರ್ಕ್ಸ್‌ಕಾರ್ಡ್‌ ಹಾಗೂ ತಾತ್ಕಾಲಿಕ ಪ್ರಮಾಣಪತ್ರ ನೀಡುವಂತೆ ಆದೇಶಿಸಬೇಕು. ಜೊತೆಗೆ ತಮಗೆ ಪರಿಹಾರ ಮತ್ತು ವ್ಯಾಜ್ಯದ ವೆಚ್ಚವನ್ನು ಕೊಡ

ಬ್ಯಾಂಕ್‌ ಸಿಬ್ಬಂದಿ ತಪ್ಪೆಸಗಿದರೆ ನಷ್ಟವನ್ನು ಅವರಿಂದಲೇ ವಸೂಲು ಮಾಡಬೇಕು

* ಒಂದೇ ದಿನ ಒಬ್ಬರೇ ಒಂದೇ ಮೊತ್ತದ ಎರಡು ಎಫ್‌ಡಿ ಮಾಡಿದ್ದರಿಂದ ಆದ ಗೊಂದಲ ಇದು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಮತ್ತು ಕೋಲ್ಕತಾದ ಸಮರ್‌ ರಾಯ್‌ ಚೌಧರಿ ನಡುವಿನ ಪ್ರಕರಣ. ದೂರುದಾರ ಸಮರ್‌ ರಾಯ್‌ ಚೌಧರಿ ಮತ್ತು ಅವರ ಪತ್ನಿ ಎಸ್‌ಬಿಐನಲ್ಲಿ ಎರಡು ನಿಶ್ಚಿತ ಠೇವಣಿಗಳನ್ನು ಮಾಡಿದ್ದರು. ಅವು TDcs0495619 ಮತ್ತು TDcs0495621. ಇವರೆಡನ್ನೂ ಠೇವಣಿ ಮಾಡಿದ ದಿನಾಂಕ 17-03-2007 ಹಾಗೂ ಅವುಗಳ ಮುಕ್ತಾಯದ ದಿನಾಂಕ 17-03-2011 ಆಗಿತ್ತು. ಠೇವಣಿ ಮೊತ್ತ ಕ್ರಮವಾಗಿ 54,425 ರು. ಮತ್ತು 5,59,668 ರು. ಹಾಗೂ ಅವುಗಳ ಪಕ್ವತೆಯ ಮೊತ್ತ 81,480 ರು. ಮತ್ತು 8,,22,762 ರು. ಆಗಿದ್ದವು. ಈ ಎರಡು ನಿಶ್ಚಿತ ಠೇವಣಿ ಮತ್ತು ಇನ್ನೊಂದು ನಿಶ್ಚಿತ ಠೇವಣಿಯ ಸರ್ಟಿಫಿಕೇಟುಗಳನ್ನು ಅಡವು ಮಾಡಿ ಚೌಧರಿಯವರು 2009ರ ಜನವರಿಯಲ್ಲಿ ಅದೇ ಬ್ಯಾಂಕಿನಲ್ಲಿ ಡಿಮಾಂಡ್‌ ಲೋನ್‌ ಪಡೆದುಕೊಳ್ಳುತ್ತಾರೆ. ಅವರು ಸಾಲ ತೀರಿಸಿದ ಬಳಿಕ ಆ ಸರ್ಟಿಫಿಕೇಟುಗಳನ್ನು ಅವರಿಗೆ ಮರಳಿಸಲಾಗುತ್ತದೆ. 17-03-2011ರಂದು ಈ ನಿಶ್ಚಿತ ಠೇವಣಿಗಳು ಪಕ್ವಗೊಂಡಾಗ ಅವುಗಳನ್ನು ಮತ್ತೊಂದು ಅವಧಿಗೆ ನವೀಕರಿಸಲು ಚೌಧರಿಯವರು ಬ್ಯಾಂಕಿಗೆ ಹೋಗುತ್ತಾರೆ. ಆದರೆ ಬ್ಯಾಂಕು, ಇವರ ಹೆಸರಿನಲ್ಲಿದ್ದ ಠೇವಣಿ ಖಾತೆಗಳು ನಿರ್ವಹಣೆಯಲ್ಲಿ ಇಲ್ಲ ಎಂದು ಹೇಳಿ ನವೀಕರಿಸುವುದಿಲ್ಲ. ಇದಕ್ಕೆ ಯಾವುದೇ ವಿವರಣೆಯನ್ನೂ ನೀಡುವುದಿಲ್ಲ. ಬಳಿಕ ಚೌಧರಿಯವರು ಬ್ಯಾಂಕಿನ ಮೆನೇಜರ್‌ಗೆ 23-05-2011 ರಂದು ಒಂದ

ಚಾಲಕನೇ ವಾಹನ ಕದ್ದರೂ ವಿಮೆ ಕಂಪನಿ ಪರಿಹಾರ ನೀಡಬೇಕು

* ಕರಾರಿನ ಭಾಗವಲ್ಲದ, ಹೊರಗಿನ ನಿಯಮಗಳ ಲಾಭ ವಿಮೆ ಕಂಪನಿಗಿಲ್ಲ. ಪರಿಹಾರ ನೀಡಬೇಕಾಗಿ ಬಂದಾಗ ವಿಮೆ ಕಂಪನಿಗಳು ವಿಮೆಯ ಮೂಲ ಉದ್ದೇಶವನ್ನೇ ಮರೆತು ಪರಿಹಾರ ನೀಡುವುದನ್ನು ತಪ್ಪಿಸಲು ಇಲ್ಲದ ಕಾರಣಗಳನ್ನು ಹುಡುಕುತ್ತವೆ. ಕರಾರಿನ ಭಾಗವಲ್ಲದ ಮತ್ತು ಪಾಲಿಸಿದಾರರಿಗೆ ತಿಳಿಸದೇ ಇರುವ ನಿಯಮಗಳನ್ನು ಉುಲ್ಲೇಖಿಸುವುದನ್ನು ಪರಿಪಾಠ ಮಾಡಿಕೊಂಡಿವೆ. ಇವುಗಳ ಬಗ್ಗೆ ಗ್ರಾಹಕ ಆಯೋಗವಷ್ಟೇ ಅಲ್ಲ ಸುಪ್ರೀಂ ಕೋರ್ಟ್‌ ಕೂಡ ಮಾರ್ಗದರ್ಶಿಯಾಗುವಂಥ ತೀರ್ಪುಗಳನ್ನು ನೀಡಿದೆ. ಇದು ನ್ಯೂ ಇಂಡಿಯಾ ಅಶ್ಯುಅರನ್ಸ್‌ ಕಂ.ಲಿ. ಮತ್ತು ಮಹಾರಾಷ್ಟ್ರದ ಗೊಂಡಿಯಾದ ರಾಜಗೋಪಾಲಾಚಾರಿ ವಾರ್ಡ್‌ನ ತೀರ್ಥಸಿಂಗ್‌ ಅವತಾರಸಿಂಗ್‌ ಭಾಟಿಯಾ ನಡುವಿನ ಪ್ರಕರಣ. ತೀರ್ಥಸಿಂಗ್‌ ಅವರು ತಮ್ಮ ಅಶೋಕ್‌ ಲೇಲ್ಯಾಂಡ್‌ ಟ್ರಕ್‌ಗೆ ನ್ಯೂ ಇಂಡಿಯಾ ಅಶ್ಯುಅರನ್ಸ್‌ ಕಂಪನಿಯಿಂದ 03-05-2011 ರಿಂದ 02-05-2012ರ ಅವಧಿಗೆ ಕಮರ್ಷಿಯಲ್‌ ಪ್ಯಾಕೇಜ್‌ ವಿಮೆಯನ್ನು ಪಡೆದುಕೊಂಡಿದ್ದರು. ಪಾಲಿಸಿಯಲ್ಲಿ ಘೋಷಿಸಲಾದ ಮೌಲ್ಯ 21,66,000.00 ರುಪಾಯಿಗಳು. 28-06-2011ರಂದು ತೀರ್ಥಸಿಂಗ್‌ ಅವರ ಚಾಲಕ ಜುನೈದ್‌ ಇದ್ರಿಶ್ ಶೇಕ್‌ ಎನ್ನುವವ ರಸಗೊಬ್ಬರ ತುಂಬಿದ ಈ ಟ್ರಕ್‌ಅನ್ನು ಗೊಂಡಿಯಾದಿಂದ ಮಶಾಲ್‌ಗೆ ಒಯ್ದಿದ್ದ. ಅಲ್ಲಿ ರಾತ್ರಿ 7-30ರ ಸುಮಾರಿಗೆ ಮಾಲನ್ನು ಕೆಳಗಿಸಿ ಗಡ್ಚಿರೋಲಿಯ ದೇಸಾಯಿಗಂಜ್‌ಗೆ ಬರುತ್ತಾನೆ. ಅಲ್ಲಿ ಮೆ.ಸಾಯಿಬಾಬಾ ರೋಡ್‌ಲೈನ್ಸ್‌ನಲ್ಲಿ ಟ್ರಕ್‌ ನಿಲ್ಲಿಸಿ ನಿದ್ರೆಹೋಗುತ್ತಾನ

ಸರ್ವೆ ವರದಿ ಬಂದ 30 ದಿನದೊಳಗೆ ವಿಮೆ ಪರಿಹಾರ ನೀಡುವುದು ಕಡ್ಡಾಯ

* ಸರ್ವೆಯರ್‌ ತನ್ನ ವರದಿಯನ್ನು 30ರಿಂದ45 ದಿನಗಳೊಳಗೆ ನೀಡಲೇಬೇಕು ವಿಮೆ ಕಂಪನಿಗಳು ಅಥವಾ ವಿಮೆ ಪಡೆದವರು ಹಾನಿಯ ಅಂದಾಜಿಗೆ ಸರ್ವೆಯರನ್ನು ನೇಮಿಸಿದಾಗ ಅವರು ಮನಬಂದಂತೆ ವಿಳಂಬ ಮಾಡಲು ಬರುವುದಿಲ್ಲ. ನೇಮಕ ಪತ್ರ ಸಿಕ್ಕ ಬಳಿಕ 30 ದಿನಗಳೊಳಗೆ ಹೆಚ್ಚೆಂದರೆ 45 ದಿನಗಳೊಳಗೆ ವರದಿ ಸಲ್ಲಿಸಬೇಕು. ಹೀಗೆ ವರದಿ ಸಲ್ಲಿಕೆಯಾದ 30 ದಿನಗಳೊಳಗೆ ವಿಮೆ ಕಂಪನಿ ಪರಿಹಾರ ಸಂದಾಯ ಮಾಡಬೇಕು. ಇದನ್ನು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌‌ಡಿಎ)ದ ನಿಯಮ 9 ಹೇಳುತ್ತದೆ. ಹಾಗೆಯೇ ಪರಿಹಾರ ನೀಡುವುದು ಆರು ತಿಂಗಳಿಗೂ ವಿಳಂಬವಾದರೆ ಬ್ಯಾಂಕ್‌ ಬಡ್ಡಿ ದರಕ್ಕಿಂತ ಶೇ.2ರಷ್ಟು ಹೆಚ್ಚಿಗೆ ನೀಡಬೇಕಾಗುತ್ತದೆ. ಈ ಪ್ರಕರಣ ಹೈದ್ರಾಬಾದದ ಮೆ.ಲೋಕೇಶ್‌ ಮೆಷಿನ್ಸ್‌ ಲಿ. ಮತ್ತು ನ್ಯೂ ಇಂಡಿಯಾ ಅಶ್ಯುಅರನ್ಸ್‌ ಕಂ.ಲಿ. ನಡುವಿನದು. ಮೆ.ಲೋಕೇಶ್‌ ಮೆಷಿನ್ಸ್‌ ಲಿ. ಇದು ಒಂದು ಪಬ್ಲಿಕ್‌ ಲಿ. ಕಂಪನಿ. ಇದು ಯಂತ್ರೋಪಕರಣಗಳು ಮತ್ತು ಬಿಡಿಭಾಗಗಳನ್ನು ತಯಾರಿಸುವ ಕಂಪನಿಯಾಗಿತ್ತು. ಟೆಲ್ಕೋ, ಅಶೋಕ್‌ ಲೇಲ್ಯಾಂಡ್‌, ಎಲ್‌ ಆ್ಯಂಡ್‌ ಟಿ, ಜಾಂಡೀರ್‌, ಮಹೀಂದ್ರಾ ಮತ್ತು ಮಹೀಂದ್ರಾ, ಎಸ್ಕಾರ್ಟ್‌, ಬಜಾಜ್‌ ಆಟೋ ಮತ್ತು ಹೊಂಡಾ ಮೋಟಾರ್ಸ್‌ನಂಥ ಪ್ರಮುಖ ಕಂಪನಿಗಳಿಗೆ ತನ್ನ ಉತ್ಪನ್ನವನ್ನು ಮಾರಾಟ ಮಾಡುತ್ತಿತ್ತು. ಇವರ ಹೆಚ್ಚಿದ ಬೇಡಿಕೆಗಳನ್ನು ಪೂರೈಸಲು ಮತ್ತು ತನ್ನ ವ್ಯವಹಾರವನ್ನು ವಿಸ್ತರಿಸಲು ಕಂಪನಿಯು ಜರ್ಮನಿಯಿಂದ ಕೆಲವು ಯಂತ್ರಗಳನ್ನು ತರಿಸಲ

ಆಡಳಿತಾತ್ಮಕ ಲೋಪಗಳು ವಿಳಂಬ ಮನ್ನಾ ಕೋರಿಕೆಗೆ ಸಾಕಾಗದು

* ಮೇಲ್ಮನವಿ ವಿಳಂಬವಾಗಿ ಸಲ್ಲಿಸಿದ್ದಕ್ಕೆ ಕಾರಣಗಳು ಬಲವಾಗಿರಬೇಕು ಗ್ರಾಹಕ ವೇದಿಕೆಗಳಲ್ಲಿ ದೂರು ಸಲ್ಲಿಸಲು ಮತ್ತು ಮೇಲ್ಮನವಿ ಸಲ್ಲಿಸಲು ಕಾಲಮಿತಿ ಇರುತ್ತದೆ. ಆ ಕಾಲಮಿತಿಯನ್ನು ಮೀರಿ ದೂರು ಸಲ್ಲಿಸುವುದು ಮತ್ತು ಮೇಲ್ಮನವಿ ಸಲ್ಲಿಸುವುದನ್ನು ಮಾಡಿದರೆ ದೂರನ್ನು ಅಥವಾ ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸದೆಯೂ ಇರಬಹುದಾಗಿದೆ. ಸಾಮಾನ್ಯವಾಗಿ ಘಟನೆ ನಡೆದ ಎರಡು ವರ್ಷಗಳ ಒಳಗಾಗಿ ದೂರನ್ನು ಸಲ್ಲಿಸಬಹುದು. ಹಾಗೆಯೇ ಜಿಲ್ಲಾ ವೇದಿಕೆಯ ತೀರ್ಪಿನ ವಿರುದ್ಧ ರಾಜ್ಯ ಆಯೋಗದಲ್ಲಿ ತೀರ್ಪು ಬಂದ 45 ದಿನಗಳ ಒಳಗಾಗಿ ಮೇಲ್ಮನವಿ ಸಲ್ಲಿಸಬಹುದಾಗಿದೆ. ಅದೇ ರೀತಿ ರಾಜ್ಯ ಆಯೋಗದ ತೀರ್ಪಿನ ವಿರುದ್ಧ ರಾಷ್ಟ್ರೀಯ ಆಯೋಗದಲ್ಲಿ ತೀರ್ಪು ಬಂದ 45 ದಿನಗಳ ಒಳಗಾಗಿ ಮೇಲ್ಮನವಿ ಸಲ್ಲಿಸಬಹುದು. ರಾಷ್ಟ್ರೀಯ ಆಯೋಗದ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ 30 ದಿನಗಳ ಒಳಗಾಗಿ ಮೇಲ್ಮನವಿ ಸಲ್ಲಿಸಬಹುದಾಗಿದೆ. ಈ ಕಾಲಮಿತಿಯಿಂದಾಗಿ ಅನಗತ್ಯ ವಿಳಂಬವನ್ನು ತಪ್ಪಿಸಬಹುದಾಗಿದೆ. ಅತಿ ವಿಳಂಬವಾಗಿ ಸಲ್ಲಿಸಿದ ಮೇಲ್ಮನವಿಯೊಂದನ್ನು ರಾಜ್ಯ ಆಯೋಗ ವಜಾ ಮಾಡಿದ ಪ್ರಕರಣವೊಂದು ಇಲ್ಲಿದೆ. ಇದು ಮೆ.ವಿಹಾನ್‌ ಡೈರೆಕ್ಟ್‌ ಸೆಲ್ಲಿಂಗ್‌ (ಇಂಡಿಯಾ) ಪ್ರೈವೇಟ್‌ ಲಿ. ವಿರುದ್ಧ ಮಂಗಳೂರಿನ ಲೋಹಿತ್‌ ಶೆಟ್ಟಿ ಎಂಬವರ ದೂರು. ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ವೇದಿಕೆಯ ತೀರ್ಪಿನ ವಿರುದ್ಧ ವಿಹಾನ್‌ ಕಂಪನಿಯು ಸಲ್ಲಿಸಿದ ಮೇಲ್ಮನವಿಯಾಗಿತ್ತು. ಮೆ.ವಿಹಾನ್‌ ಡೈರೆಕ್ಟ್‌ ಸೆಲ್ಲ

ಕಳುವಾದ ವಾಹನಕ್ಕೆ ಪರಿಹಾರ ನಿರಾಕರಿಸುವ ವಿಮೆ ಕಂಪನಿಯ ಯತ್ನ ವಿಫಲ

* ಕಳುವಾದ ನಂತರ ವಿಮೆ ಪಡೆಯಲಾಯಿತೆಂಬ ಅದರ ವಾದ ನಿಲ್ಲಲಿಲ್ಲ. ವಾಹನ ಕಳುವಾದ ಮಾರನೆ ದಿನ ವಿಮೆ ಪಡೆದು ಪರಿಹಾರ ಕೇಳಲಾಗುತ್ತಿದೆ ಎಂದು ವಿಮೆ ಕಂಪನಿಯು ವಾದಿಸಿ ಪರಿಹಾರವನ್ನು ನಿರಾಕರಿಸುವುದಕ್ಕೆ ಯತ್ನಿಸಿ ಜಿಲ್ಲಾ ವೇದಿಕೆಯ ತೀರ್ಪಿನ ವಿರುದ್ಧ ರಾಷ್ಟ್ರೀಯ ವೇದಿಕೆಯ ವರೆಗೂ ಹೋಗಿದ್ದು ತ್ವರಿತ ನ್ಯಾಯದಾನದ ಆಶಯಕ್ಕೆ ವಿರುದ್ಧವಾದದ್ದು ಮತ್ತು ಉದ್ದೇಶಪೂರ್ವಕ ವಿಳಂಬ ನೀತಿ ಅನುಸರಿಸಿದ್ದಕ್ಕೆ ಒಂದು ಉದಾಹರಣೆಯಾಗಿದೆ. ಈ ಪ್ರಕರಣ ಓರಿಯಂಟಲ್‌ ಇನ್ಸುರನ್ಸ್‌ ಕಂಪನಿ ಲಿ. ಮತ್ತು ಬಿಹಾರದ ಬೋಧಗಯಾದ ನೃಪೇಂದ್ರಕುಮಾರ ಇಂದ್ರಜಿತ್‌ ಸಿಂಗ್‌ ನಡುವಿನದು. ರಾಷ್ಟ್ರೀಯ ಆಯೋಗದಲ್ಲಿ ಮೇಲ್ಮನವಿಯನ್ನು 64 ದಿನ ವಿಳಂಬವಾಗಿ ಸಲ್ಲಿಸಲಾಗಿತ್ತು. ಆದರೆ ಪ್ರತಿವಾದಿ ವಕೀಲರಿಂದ ಯಾವುದೇ ಆಕ್ಷೇಪ ಇರದ ಕಾರಣ, ಅರ್ಹತೆಯ ಆಧಾರದಲ್ಲಿ ನ್ಯಾಯ ಸಿಗಲಿ ಎಂಬ ಉದ್ದೇಶದಿಂದ ವಿಳಂಬವನ್ನು ಮನ್ನಾ ಮಾಡಿ ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸಲಾಗಿತ್ತು. ಜಿಲ್ಲಾ ಗ್ರಾಹಕ ವೇದಿಕೆಯು 12-02-2008ರಂದು ನೀಡಿದ ತೀರ್ಪಿನಲ್ಲಿ ದೂರುದಾರರು ಸೂಕ್ತ ಸಿವಿಲ್‌ ನ್ಯಾಯಾಲಯದಲ್ಲಿ ಪರಿಹಾರ ಕಂಡುಕೊಳ್ಳಲು ಆದೇಶಿಸಿತ್ತು. ಇದರ ವಿರುದ್ಧ ಬಿಹಾರ ರಾಜ್ಯ ಗ್ರಾಹಕ ಆಯೋಗದಲ್ಲಿ ನೃಪೇಂದ್ರಕುಮಾರ ಅವರು ಮೇಲ್ಮನವಿಯನ್ನು ಸಲ್ಲಿಸುತ್ತಾರೆ. ರಾಜ್ಯ ಆಯೋಗವು ದೂರನ್ನು ಅಂಗೀಕರಿಸುತ್ತದೆ. 04-02-2016ರಂದು ನೀಡಿದ ತೀರ್ಪಿನಲ್ಲಿ ವಿಮೆ ಕಂಪನಿಗೆ ಕಳುವಾಗಿರುವ ವಾಹನಕ್ಕೆ ವಿಮೆ ಮೊತ್ತವ

ವಿಮೆ ಕಂಪನಿಯ ನಿಯಮ ಮೀರಿಯೂ ಮೆಡಿಕ್ಲೇಮ್‌ ಪರಿಹಾರ

* ರಾಷ್ಟ್ರೀಯ ಆಯೋಗ ಕೂಡ ಜಿಲ್ಲಾ ವೇದಿಕೆಯ ತೀರ್ಪನ್ನು ಸಮ್ಮತಿಸಿತು ಗ್ರಾಹಕ ನ್ಯಾಯಾಲಯ ಕೆಲವೊಮ್ಮೆ ನಿಯಮಗಳ ಆಚೆಗೂ ಸಾಧ್ಯತೆಗಳ ಹುಡುಕಾಟ ನಡೆಸುತ್ತದೆ. ಗ್ರಾಹಕರಿಗೆ ನ್ಯಾಯ ಒದಗಿಸುವ ಕಟ್ಟಕಡೆಯ ಸಾಧ್ಯತೆಯನ್ನೂ ಅದು ಪರಿಶೀಲಿಸುತ್ತದೆ. ಮೆಡಿಕ್ಲೇಮ್‌ ಪಾಲಿಸಿಯಲ್ಲಿ ರೋಗಿ ಆಸ್ಪತ್ರೆಗೆ ಸೇರಿದಾಗ ಅದರ ವೆಚ್ಚ, ಔಷಧ ಎಲ್ಲದಕ್ಕೂ ವಿಮೆ ಸಿಗುತ್ತದೆ. ಆದರೆ ರೋಗಿ ಆಸ್ಪತ್ರೆಯಿಂದ ಮನೆಗೆ ಮರಳಿದಾಗ ರೋಗಕ್ಕೆ ಸಂಬಂಧಿಸಿ ಬಳಸುವ ಉಪಕರಣ ಖರೀದಿಸಿದರೆ ಅದಕ್ಕೆ ಪರಿಹಾರ ಸಿಗಬಹುದೆ? ಉದಾಹರಣೆಗೆ ಸರಾಗವಾಗಿ ಉಸಿರಾಡಲು ಮನೆಯಲ್ಲಿ ಬಳಸುವ ಸಿಪಿಎಪಿ ಯಂತ್ರ. ರೋಗಕ್ಕೆ ಸಂಬಂಧಿಸಿ ವೈದ್ಯರೇ ಖರೀದಿಗೆ ಸೂಚಿಸಿದ್ದು. ಇದಕ್ಕೆ ವಿಮೆ ಪರಿಹಾರ ಕೋರಿದಾಗ ಆದದ್ದು ಏನು? ಈ ಪ್ರಕರಣ ನ್ಯೂ ಇಂಡಿಯಾ ಅಶ್ಯೂಅರೆನ್ಸ್‌ ಕಂಪನಿ ಮತ್ತು ಹರ್ಯಾಣದ ಸೋನಾಲಿ ಸರೀನ್‌ ಅವರ ನಡುವಿನದು. ಇದು ಮೆಡಿಕ್ಲೇಮ್‌ಗೆ ಸಂಬಂಧಿಸಿದ್ದು. ಈ ಪ್ರಕರಣದಲ್ಲಿ ಜಿಲ್ಲಾ ವೇದಿಕೆ 08-03-2010ರಂದು ತೀರ್ಪು ನೀಡಿತ್ತು. ಮೇಲ್ಮನವಿಯಲ್ಲಿ ರಾಜ್ಯ ಆಯೋಗವು 09-12-2014ರಂದು ಜಿಲ್ಲಾ ವೇದಿಕೆಯ ತೀರ್ಪನ್ನು ಎತ್ತಿಹಿಡಿದಿತ್ತು. ಅದರ ವಿರುದ್ಧ ವಿಮೆ ಕಂಪನಿಯು ರಾಷ್ಟ್ರೀಯ ಆಯೋಗದಲ್ಲಿ ಮೇಲ್ಮನವಿಯನ್ನು ಸಲ್ಲಿಸಿತ್ತು. ಈ ಮೇಲ್ಮನವಿಯನ್ನು 40 ದಿನ ವಿಳಂಬವಾಗಿ ಸಲ್ಲಿಸಿತ್ತು. ಆದರೆ ಅದನ್ನು ಮನ್ನಿಸುವಂತೆ ಮನವಿ ಮಾಡಿಕೊಂಡಿತ್ತು. ವಿಳಂಬವಾಗಿದೆ ಎಂಬ ಏಕೈಕ ಕಾರಣಕ್ಕೆ ಅದನ್ನು ವಜಾ