Posts

Showing posts from November, 2022

ಹಾನಿ ಅಂದಾಜಿಗೆ ವಿಮೆ ಪಡೆದವರೂ ಸರ್ವೇಯರ್ ನೇಮಿಸಬಹುದು

* ಈ ಸಂಬಂಧ 2015ರಲ್ಲಿ ಐಆರ್‌‌ಡಿಎ ಸುತ್ತೋಲೆ ಹೊರಡಿಸಿದೆ ವಿಮೆ ಪರಿಹಾರ ನೀಡುವುದನ್ನು ತಪ್ಪಿಸಿಕೊಳ್ಳಲು ವಿಮೆ ಕಂಪನಿಗಳು ನಾನಾ ರೀತಿಯ ನೆಪಗಳನ್ನು ಮುಂದೊಡ್ಡುತ್ತವೆ. ಸರ್ವೇಯರ್‌ ನೇಮಕ ಮಾಡುವುದನ್ನು ವಿಳಂಬ ಮಾಡುತ್ತವೆ. ಆಗ ವಿಮೆ ಪಡೆದವರು ತಾವೇ ಸರ್ವೇಯರನನ್ನು ನೇಮಿಸಬಹುದೆ? ವಿಮೆ ಕಾನೂನು ಈ ಕುರಿತು ಏನು ಹೇಳುತ್ತದೆ? ರಾಷ್ಟ್ರೀಯ ಆಯೋಗದ ವರೆಗೂ ಮೇಲ್ಮನವಿ ಸಲ್ಲಿಸಿ ಮುಖಭಂಗ ಅನುಭವಿಸಿದ ನ್ಯೂ ಇಂಡಿಯಾ ಅಶ್ಯೂ್ರೆನ್ಸ್‌ ಕಂಪನಿಯ ಪ್ರಕರಣ ಇಲ್ಲಿದೆ. ಇದು ನ್ಯೂ ಇಂಡಿಯಾ ಅಶ್ಯೂ್ರೆನ್ಸ್‌ ಕಂಪನಿ ಮತ್ತು ದೆಹಲಿಯ ಮೆ.ಡೆಮ್ಮ್‌ ಅಟೋ ಇಂಜಿನಿಯರಿಂಗ್‌ ವರ್ಕ್ಸ್‌ ನಡುವಿನ ವ್ಯಾಜ್ಯ. ಮೆ.ಡೆಮ್ಮ್‌ ಅಟೋ ಇಂಜಿನಿಯರಿಂಗ್‌ ವರ್ಕ್ಸ್‌ ಇವರು 12-10-2006ರಿಂದ 11-10-2007ರ ಅವಧಿಗೆ ಬೆಂಕಿ ಮತ್ತು ಇತರ ಅನಾಹುತಗಳಿಂದ ಆಗುವ ಹಾನಿಯಿಂದ ರಕ್ಷಿಸಿಕೊಳ್ಳಲು 70 ಲಕ್ಷ ರುಪಾಯಿಗೆ ವಿಮೆಯನ್ನು ಪಡೆದುಕೊಂಡಿದ್ದರು. ಇದರ ವ್ಯಾಪ್ತಿಗೆ ಅವರ ಅಂಗಡಿಯಲ್ಲಿಯ ಎಲ್ಲ ಅಟೋ ಸಾಮಗ್ರಿಗಳ ಸಂಗ್ರಹ ಸೇರಿತ್ತು. ಅಂಗಡಿಯ ಸಾಮಾನುಗಳು ಪಂಜಾಬ್‌ ನ್ಯಾಶನಲ್‌ ಬ್ಯಾಂಕಿನ ಅಡಮಾನಕ್ಕೆ ಒಳಪಟ್ಟಿತ್ತು. 13-05-2007ರಂದು ರಾತ್ರಿ 9 ಗಂಟೆಗೆ ಈ ವಿಮೆಗೆ ಒಳಪಟ್ಟ ಅಂಗಡಿ ಇದ್ದ ಗುರುನಾನಕ ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ ಬೆಂಕಿ ಅನಾಹುತ ಸಂಭವಿಸಿತು. ಅಗ್ನಿಶಾಮಕ ದಳದವರು ಆಗಮಿಸಿ ಹಲವು ಗಂಟೆಗಳ ಕಾಲ ಶ್ರಮಿಸಿ ಬೆಂಕಿಯನ್ನು ನಂದಿಸಿದರು. ಪೊಲೀಸರಿಗೂ ಸುದ್ದಿ ತಿಳಿಸಲ

ಷರತ್ತು ಉಲ್ಲಂಘಿಸಿದ ವಾಹನ ಅಪಘಾತಕ್ಕೀಡಾದರೆ ವಿಮೆ ಸಿಗುವುದೆ?

* ಅಂದಾಜಿಸಿದ ಹಾನಿಯ ಶೇ.75ರಷ್ಟು ಪರಿಹಾರ ನೀಡಬೇಕೆಂದು ಸುಪ್ರೀಂ ಕೋರ್ಟ್‌ ಆದೇಶವೇ ಇದೆ. ಪ್ರತಿಯೊಂದು ವಾಹನಕ್ಕೂ ವಿಮೆಯನ್ನು ಮಾಡಿಸುವುದು ಕಡ್ಡಾಯ. ಅದು ಸ್ವಂತ ಬಳಕೆಗಿರಬಹುದು ಅಥವಾ ಬಾಡಿಗೆಗೆ ಬಳಸುವ ಉದ್ದೇಶದ್ದು ಇರಬಹುದು. ನೀವು ಪಡೆದುಕೊಳ್ಳುವ ಸೌಲಭ್ಯಗಳ ಆಧಾರದ ಮೇಲೆ ವಿಮೆಯ ಕಂತು ನಿರ್ಧಾರವಾಗುತ್ತದೆ. ವಿಮೆಯ ಪಾಲಿಸಿಯಲ್ಲಿ ಹಲವು ಷರತ್ತುಗಳು ಇರುತ್ತದೆ. ಖಾಸಗಿ ನೊಂದಣಿ ವಾಹನವನ್ನು ಬಾಡಿಗೆಗೆ ಬಳಸುವಂತಿಲ್ಲ. ಚಾಲಕನು ಸರಿಯಾಗಿರುವ ಚಾಲನೆ ಪರವಾನಿಗೆಯನ್ನು ಹೊಂದಿರಬೇಕು, ಅಪ್ರಾಪ್ತರು ವಾಹನ ಚಲಾಯಿಸಬಾರದು, ಪರವಾನಿಗೆ ಇರುವುದಕ್ಕಿಂತ ಹೆಚ್ಚಿನ ಜನರನ್ನು ತುಂಬಬಾರದು ಇತ್ಯಾದಿ ಇತ್ಯಾದಿ. ಈ ಷರತ್ತಿನ ಉಲ್ಲಂಘನೆಯಾದರೆ ವಿಮೆ ಸಿಗುವುದಿಲ್ಲವೆ? ಸಿಗುವುದಾದರೆ ಎಷ್ಟು ಸಿಗುತ್ತದೆ? ಖಾಸಗಿ ನೊಂದಣಿ ವಾಹನವನ್ನು ಬಾಡಿಗೆಗೆ ಬಳಸಿದಾಗ ಅಪಘಾತವಾದ ಒಂದು ಪ್ರಕರಣ ಇಲ್ಲಿದೆ. ಮಧ್ಯಪ್ರದೇಶದ ಇಂದೋರದ ಅನಿಲ್‌ ರಾಮ ಸ್ವರೂಪ್‌ ಅವರು ವಾಹನವೊಂದನ್ನು ಖಾಸಗಿ ಬಳಕೆಗೆಂದು ನೊಂದಾಯಿಕೊಂಡು ಅದಕ್ಕೆ ಐಎಫ್‌ಎಫ್‌ಸಿಐ ಟೋಕಿಯೋ ಜಿಐಸಿ ಲಿ.ನಿಂದ ವಿಮೆ ಪಡೆದುಕೊಂಡಿದ್ದರು. ಆದರೆ ಅವರು ಆ ವಾಹನವನ್ನು ದೂರದರ್ಶನದ ಸಿಬ್ಬಂದಿಯ ಸಾಗಾಟಕ್ಕೆ ಬಳಸುತ್ತಿದ್ದರು. ಆ ವಾಹನ ಅಪಘಾತಕ್ಕೆ ಈಡಾಗುತ್ತದೆ. ಅವರು ವಿಮೆ ಪರಿಹಾರವನ್ನು ಕೋರುತ್ತಾರೆ. ವಿಮೆ ಕಂಪನಿಯು ಸರ್ವೇಯರ್‌ ಒಬ್ಬರನ್ನು ನೇಮಿಸುತ್ತದೆ. ಅವರು ಹಾನಿಯನ್ನು 1,96,850 ರು. ಎಂದು ವರದಿ ನೀಡ

ಅತಿರಂಜಿತ ಹಾನಿ ತೋರಿಸಿ ಪರಿಹಾರ ಕೇಳಿದರೆ ವಿಮೆ ಸಿಗಲಾರದು

* ಸರ್ವೇಯರ್‌ ವರದಿ ನೀಡಿದ್ದೇ ಅಂತಿಮವಲ್ಲ, ವಿಮೆ ಕಂಪನಿ ಮತ್ತೊಮ್ಮೆ ಸರ್ವೆ ಮಾಡಿಸಬಹುದು ದೊಡ್ಡ ದೊಡ್ಡ ಉದ್ಯಮಗಳು ಆಕಸ್ಮಿಕಗಳಿಂದ ಆಗುವ ನಷ್ಟವನ್ನು ತಪ್ಪಿಸಿಕೊಳ್ಳಲು ವಿಮೆಯನ್ನು ಮಾಡಿಸುತ್ತವೆ. ಹಾಗೆ ಮಾಡಿಸಿದ ವಿಮೆಯ ಪರಿಹಾರ ಕೋರುವಾಗ ಎಷ್ಟು ಪ್ರಾಮಾಣಿಕರಾಗಿರುತ್ತೇವೋ ಅಷ್ಟು ಸುರಕ್ಷಿತ. ಹೇಗೂ ವಿಮೆ ಮಾಡಿಸಿದ್ದೇವಲ್ಲ, ಪರಿಹಾರ ಸ್ವಲ್ಪ ಹೆಚ್ಚಿಗೆಯೇ ಕೋರಬಹುದು ಎಂದು ದುರಾಸೆಗೆ ಒಳಗಾಗಿ ಸುಳ್ಳು ಲೆಕ್ಕ ತೋರಿಸಿದರೆ ಏನೂ ಸಿಗದೆ ಬರಿಗೈಯಲ್ಲಿ ಮರಳಬೇಕಾಗಬಹುದು. ಇಲ್ಲಿ ಅಂಥ ಒಂದು ಪ್ರಕರಣ ಇದೆ. ಪಶ್ಚಿಮ ಬಂಗಾಳದ ಹೂಗ್ಲಿಯ ಮೆ.ಫೆನಾಸಿಯಾ ಲಿ. ಕಂಪನಿಯು ಯುನೈಟೆಡ್‌‌ ಇಂಡಿಯಾ ಇನ್ಸುರೆನ್ಸ್‌ ಕಂಪನಿಯಿಂದ ಬೆಂಕಿ ಇತ್ಯಾದಿ ಅಪಘಾತಗಳಿಂದ ರಕ್ಷಣೆ ಪಡೆಯಲು ವಿಮೆಯನ್ನು ಪಡೆದಿತ್ತು. ಈ ಫೆನಾಸಿಯಾ ಕಂಪನಿಯು ವಿವಿಧ ರೀತಿಯ ರಾಸಾಯನಿಕಗಳನ್ನು ಉತ್ಪಾದಿಸುತ್ತಿತ್ತು. ಇದರಲ್ಲಿ ರಫ್ತು ಮಾಡುವ ಗುಣಮಟ್ಟದ್ದು ಮತ್ತು ರಫ್ತು ಮಾಡದೆ ಇರುವ ಗುಣಮಟ್ಟದ್ದು ಎಂಬ ವೈವಿಧ್ಯವಿತ್ತು. ಇದನ್ನು ಫೆನಾಸಿಯಾ ಬ್ರಾಂಡ್‌ ಹೆಸರಿನಲ್ಲಿ ಮಾರುತ್ತಿತ್ತು. ಈ ಉತ್ಪನ್ನ ದೇಶ ಮತ್ತು ವಿದೇಶದಲ್ಲಿ ಚರ್ಮದ ಉುತ್ಪನ್ನಗಳನ್ನು ತಯಾರು ಮಾಡುವ ಕಂಪನಿಗಳು ಖರೀದಿಸುತ್ತಿದ್ದವು. ಫೆನಾಸಿಯಾ ಲಿ. ಕಂಪನಿಯು 30-04-2008ರಂದು ಯುನೈಟೆಡ್‌‌ ಇಂಡಿಯಾ ಇನ್ಸುರೆನ್ಸ್‌ ಕಂಪನಿಯಿಂದ 7 ಕೋಟಿ ರುಪಾಯಿಗೆ ಸ್ಟ್ಯಾಂಡರ್ಡ್‌‌ ಫೈರ್‌ ಮತ್ತು ಸ್ಪೆಶಿಯಲ್‌ ಪೆರಿಲ್‌ ಪಾಲಿ

ಫೋರ್ಜರಿ ವಿಷಯ ಇತ್ಯರ್ಥ ಮಾಡುವುದು ಗ್ರಾಹಕ ವೇದಿಕೆಯಲ್ಲ

* ಅದರ ಇತ್ಯರ್ಥದ ಬಳಿಕ ಬ್ಯಾಂಕಿನ ಸೇವಾನ್ಯೂನತೆ ವಿಚಾರಣೆ ಎಂದ ಆಯೋಗ ಗ್ರಾಹಕ ನ್ಯಾಯಾಲಯಗಳ ಸ್ಥಾಪನೆ ತ್ವರಿತ ನ್ಯಾಯದಾನ ಮತ್ತು ಕಡಿಮೆ ವೆಚ್ಚದಲ್ಲಿ ದೂರುದಾರರಿಗೆ ಪರಿಹಾರ ಒದಗಿಸಬೇಕು ಎಂಬ ಉದ್ದೇಶವನ್ನು ಹೊಂದಿದೆ. ಹಾಗಂತ ಎಲ್ಲ ಪ್ರಕರಣಗಳನ್ನೂ ಗ್ರಾಹಕ ನ್ಯಾಯಾಲಯಗಳಿಗೆ ಒಯ್ಯುವಂತಿಲ್ಲ. ಅದಕ್ಕೂ ಗಡಿಗಳಿವೆ. ಈ ಗಡಿಯ ಅರಿವಿಲ್ಲದೆ ಗ್ರಾಹಕ ವೇದಿಕೆಯ ಮೊರೆಹೋದ ಒಂದು ಪ್ರಕರಣ ಇಲ್ಲಿದೆ. ದೆಹಲಿಯ ಮನಿಶಾ ಸೋಹಿಲ್‌ಕುಮಾರ ಚೋವಾಟಿಯಾ ಎನ್ನುವವರು ಎಚ್‌ಡಿಎಫ್‌ಸಿ ಬ್ಯಾಂಕು ಮತ್ತು ಗುಜರಾತಿನ ಜುನಾಗಡ ತಾಲೂಕಿನ ಪರೇಶ್‌ಭಾಯಿ ಮೋಹನಲಾಲ್‌ ಮನ್ಪಾರ ಎಂಬವರ ವಿರುದ್ಧ ಹೂಡಿದ್ದ ಮೊಕದ್ದಮೆ ಇದು. ಮನಿಶಾ ಅವರ ಪರವಾಗಿ ಅವರ ಪವರ್‌ ಆಫ್‌ ಅಟಾರ್ನಿ ಸುನಿಲ್‌ಕುಮಾರ ಗರ್ಗ್‌ ಅವರು ದೂರು ಸಲ್ಲಿಸಿದ್ದರು. ದೂರಿನಲ್ಲಿ, ಪ್ರತಿವಾದಿಗಳು ತಮಗೆ 1.71 ಕೋಟಿ ರುಪಾಯಿಗಳಷ್ಟು ಮೋಸ ಮಾಡಿದ್ದಾರೆ. ತಮಗೆ ಈ ಮೊತ್ತವನ್ನು ಮರಳಿ ಕೊಡಿಸಬೇಕು ಮತ್ತು 11-01-11ರಿಂದ ದೂರು ದಾಖಲಾದ ದಿನಾಂಕದ ವರೆಗೆ ಶೇ.10ರಂತೆ ಬಡ್ಡಿಯನ್ನೂ ಕೊಡಿಸಬೇಕು ಎಂದು ಕೋರಲಾಗಿತ್ತು. ದೂರುದಾರರು ಒಬ್ಬ ಅನಿವಾಸಿ ಭಾರತೀಯರಾಗಿದ್ದು ಈಕ್ವೆಡಾರ್‌ನಲ್ಲಿ ವಾಸಿಸುತ್ತಿದ್ದರು. ಅವರು ಗುಜರಾತಿನ ಜೇತ್ಪುರದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕಿನ ಶಾಖೆಯಲ್ಲಿ ಮೂರನೆ ಪ್ರತಿವಾದಿ ಪರೇಶ‌ಭಾಯಿ ಮುನ್ಪಾರ ಅವರ ಸಲಹೆಯ ಮೇರೆಗೆ 24.06.2009ರಂದು ಖಾತೆಯನ್ನು ತೆರೆಯುತ್ತಾರೆ. ಎಚ್ಚರಿಕೆಯ ಸಂದೇಶ ಸ್ವೀಕ

ನ್ಯಾಯಾಧೀಶರು ಸಾಧ್ಯತೆ ಕಲ್ಪಿಸಿಕೊಂಡು ತೀರ್ಪು ನೀಡಬಾರದು

* ತನ್ನ ನಿರೀಕ್ಷಣೆಯನ್ನು ಸಮರ್ಥಿಸುವಂಥ ಪುರಾವೆಗಳನ್ನು ಕಂಡುಕೊಳ್ಳಬೇಕಾಗುತ್ತದೆ ವೈದ್ಯರ ನಿರ್ಲಕ್ಷ್ಯ ಆರೋಪಿಸಿದ ಎಲ್ಲ ಪ್ರಕರಣಗಳೂ ಗ್ರಾಹಕ ನ್ಯಾಯಾಲಗಳಲ್ಲಿ ಸಿಂಧುವಾಗಲಾರವು. ಚಿಕಿತ್ಸೆಯ ಬಳಿಕ ರೋಗಿಯೂ ಪಾಲಿಸಬೇಕಾದ ಹಲವು ಸಂಗತಿಗಳು ಇರುತ್ತವೆ. ಅವು ಪಾಲನೆಯಾಗಿದೆಯೋ ಇಲ್ಲವೋ ಎಂಬುದನ್ನೂ ಗ್ರಾಹಕ ನ್ಯಾಯಾಲಯಗಳು ಗಮನಿಸುತ್ತವೆ. ಇಲ್ಲಿ ಅಂಥ ಒಂದು ಪ್ರಕರಣ ಇದೆ. ಉತ್ತರ ಪ್ರದೇಶದ ಪರಗಣದ ಗಾಯತ್ರಿ ಮೊಹಲ್ಲಾದ ರಾಜಕುಮಾರ ಎಂಬಾತ 10-04-2010ರಂದು ರಸ್ತೆ ಅಪಘಾತದಲ್ಲಿ ಗಾಯಗೊಳ್ಳುತ್ತಾನೆ. ಆತನ ಎಡಗಾಲು ತೀವ್ರ ಜಖಂಗೊಂಡಿರುತ್ತದೆ. ಆತನನ್ನು ಬೀರೌತ್‌ನ ಡಾ.ನರೇಂದರ್‌ ಮೆಮೋರಿಯಲ್‌ ಮೂರ್ತಿ ನರ್ಸಿಂಗ್‌ ಹೋಂನಲ್ಲಿ ಮೂಳೆ ತಜ್ಞ ಡಾ. ರಾಜೀವ ಜೈನ್‌ ಎಂಬವರು ತಪಾಸಣೆ ನಡೆಸುತ್ತಾರೆ. 17-04-2010ರಂದು ಅವರು ಶಸ್ತ್ರಚಕಿತ್ಸೆ ನಡೆಸುತ್ತಾರೆ. ಆದರೆ ರಾಜಕುಮಾರ ಸರಿಹೋಗುವುದಿಲ್ಲ. ಒಳಗೆ ಅಳವಡಿಸಿದ್ದ ಪ್ಲೇಟ್‌ ಸರಿಯಾಗಿರಲಿಲ್ಲ. ಈ ಕಾರಣಕ್ಕೆ 9-11-20110ರಂದು ಮತ್ತೊಮ್ಮೆ ಶಸ್ತ್ರಚಿಕಿತ್ಸೆಯನ್ನು ನಡೆಸುತ್ತಾರೆ. ಆದರೂ ಅಪೇಕ್ಷಿತ ಫಲ ದೊರೆಯಲಿಲ್ಲ. ಅದಾದ ಬಳಿಕ ಡಾ.ಜೈನ್‌ ಅವರು ರಾಜಕುಮಾರನಿಗೆ ಚಿಕಿತ್ಸೆ ಮುಂದುವರಿಸಲು ನಿರಾಕರಿಸುತ್ತಾರೆ. ಬಳಿಕ ಆತ ಬಾಗಪತ್‌ನ ರಕ್ಷಾ ಆಸ್ಪತ್ರೆಯಲ್ಲಿ ಡಾ.ತೋಮರ್‌ ಎಂಬವರನ್ನು ಸಂಪರ್ಕಿಸುತ್ತಾನೆ. ಅಲ್ಲಿ ಅವರು 3ನೆ ಶಸ್ತ್ರಚಿಕಿತ್ಸೆಯನ್ನು ನಡೆಸುತ್ತಾರೆ. ಅದಕ್ಕಾಗಿ ರಾಜಕುಮಾರ ಒಂದು ಲಕ್ಷ ರ