Posts

Showing posts from April, 2018

ಕೈಬೆರಳಿಗೆ ಗ್ಯಾಂಗ್ರಿನ್ ಬರಲು ಕಾರಣನಾದ ವೈದ್ಯನಿಗೆ ೧ ಲಕ್ಷ ರು. ದಂಡ

ಉತ್ತರ ಪ್ರದೇಶದ ಶಹರಾನ್‌ಪುರ ಜಿಲ್ಲೆಯ ನಾಗಲ್ ಗ್ರಾಮದ ವಿಜೇಂದ್ರ ಕುಮಾರ್ ಸಾಹಲ್ ಎನ್ನುವವರಿಗೆ ವೃಷಣದಲ್ಲಿ ನೋವು ಕಾಣಿಸಿಕೊಂಡು ಕಿಶೋರ್‌ಭಾಗ್‌ದಲ್ಲಿಯ ಕೆ.ಕೆ. ಆಸ್ಪತ್ರೆಗೆ ತೋರಿಸಿಕೊಳ್ಳಲು ತೆರಳಿದರು. ಅವರು ಡಾ.ಕೆ.ಎಸ್. ವರ್ಮಾ ಅವರನ್ನು ೧೨-೧-೨೦೦೨ರಂದು ಭೆಟ್ಟಿಯಾದರು. ೫೦ ರು. ನೀಡಿ ರಸೀದಿಯನ್ನೂ ಪಡೆದರು. ವೃಷಣದಲ್ಲಿ ನೀರು ತುಂಬಿಕೊಂಡಿದೆ. ಅದಕ್ಕೆ ಶಸ್ತ್ರಚಿಕಿತ್ಸೆ ನಡೆಸಬೇಕು ಎಂದು ಡಾ.ವರ್ಮಾ ಹೇಳಿದರು. ಇದಕ್ಕಾಗಿ ಅವರು ೧೬-೧-೨೦೦೨ರಂದು ಆಸ್ಪತ್ರೆಗೆ ದಾಖಲಾದರು. ಅದೇ ದಿನ ಶಸ್ತ್ರಚಿಕಿತ್ಸೆ ನಡೆಯಿತು. ಚಿಕಿತ್ಸೆಯ ಸಮಯದಲ್ಲಿ ವೈದ್ಯರು ನೋವುನಿವಾರಕ ಚುಚ್ಚುಮದ್ದು ಮತ್ತು ಗ್ಲುಕೋಸ್‌ಅನ್ನು ಸೂಜಿ ಮೂಲಕ ಎಡಗೈಗೆ ನೀಡದರು. ಅವರ ಕೈ ಊದಿಕೊಂಡಿತು. ಕೈಬೆರಳುಗಳು ನೀಲಿ ಬಣ್ಣಕ್ಕೆ ತಿರುಗಿದವು. ಶಸ್ತ್ರಚಿಕಿತ್ಸೆಯ ಬಳಿಕವೂ ವಿಜೇಂದ್ರಕುಮಾರ್‌ಗೆ ನೋವು ನಿಲ್ಲಲಿಲ್ಲ. ಇದಕ್ಕಾಗಿ ಅವರಿಗೆ ನೋವುನಿವಾರಕಗಳನ್ನು ನೀಡಲಾಯಿತು. ೨೦-೧-೨೦೦೨ರ ವರೆಗೂ ಅಲ್ಲಿಯೇ ಅವರಿಗೆ ಚಿಕಿತ್ಸೆ ಮುಂದುವರಿಯಿತು. ೨೩-೧-೨೦೦೨ರಂದು ವಿಜೇಂದ್ರಕುಮಾರ್ ಡಾ.ಪ್ರವೀಣ್ ಜೈನ್ ಎಂಬ ಸರ್ಜನ್‌ರನ್ನು ಭೆಟ್ಟಿಮಾಡಿದರು. ಪರಿಶೀಲನೆ ಬಳಿಕ ರೋಗಿಯ ಕೈ ಬೆರಳುಗಳಿಗೆ ಗ್ಯಾಂಗ್ರಿನ್ ಆಗಿದ್ದು, ಪ್ರಾರಂಭಿಕ ಹಂತದಲ್ಲಿದೆ ಎಂದು ಗೊತ್ತಾಯಿತು. ೨೯-೧-೨೦೦೨ರ ವರೆಗೂ ಅಲ್ಲಿಯೇ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗೆ ದೊಡ್ಡ ಆಸ್ಪತ್ರೆಗೆ ತೆರಳಲು ಅವರಿಗೆ ಸೂಚಿಸಲ

ತಪ್ಪು ವಯಸ್ಸು ನಮೂದಿಸಿದ್ದಾರೆ ಎಂಬ ವಿಮೆ ಕಂಪನಿಯ ತಕರಾರು ನಿಲ್ಲಲಿಲ್ಲ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕೆಂಪಟ್ಟಿಯ ಸದಾಶಿವ ಉಪ್ಪಾರ ಎನ್ನುವವರು ರಿಲಯನ್ಸ್ ಲೈಫ್ ಇನ್ಸುರೆನ್ಸ್‌ನಿಂದ ೧೫ ವರ್ಷ ಅವಧಿಯ ಎಂಟು ಲಕ್ಷದ ಜೀವವಿಮೆ ಪಾಲಿಸಿಯನ್ನು ಪಡೆದುಕೊಂಡಿದ್ದರು. ಪಾಲಿಸಿ ಪಡೆದುಕೊಂಡ ದಿನಾಂಕ ೧೪-೦೨-೨೦೧೩. ಇದರ ವಾರ್ಷಿಕ ಕಂತು ೮೦ ಸಾವಿರ ರುಪಾಯಿಗಳನ್ನು ಅವರು ತುಂಬಿದ್ದರು. ದುರ್ದೈವವಶಾತ್ ಸದಾಶಿವ ಅವರು ೦೪-೦೬-೨೦೧೩ರಂದು ಸಾವಿಗೀಡಾಗುತ್ತಾರೆ. ಸಾವಿನ ಬಳಿಕ ಅವರ ಪತ್ನಿ ಸಾವಿತ್ರಿ ಮತ್ತು ಮೂವರು ಮಕ್ಕಳು ಪಾಲಿಸಿ ಹಣಕ್ಕೆ ಬೇಡಿಕೆ ಸಲ್ಲಿಸುತ್ತಾರೆ. ವಿಮೆ ಕಂಪನಿಯು ಅವರು ತುಂಬಿದ್ದ ೮೦ ಸಾವಿರ ರು. ಮಾತ್ರ ಮರಳಿ ಕೊಟ್ಟು ಉಳಿದ ೭.೨೦ ಲಕ್ಷ ರು. ನೀಡುವುದಕ್ಕೆ ನಿರಾಕರಿಸುತ್ತದೆ. ಅದಕ್ಕೆ ಅವರು ನೀಡಿದ ಕಾರಣ, ಪಾಲಿಸಿದಾರರು ಪಾಲಿಸಿ ಮಾಡುವಾಗ ತಪ್ಪು ವಯಸ್ಸನ್ನು ನೀಡಿದ್ದರು. ಅವರಿಗೆ ೬೦ ವರ್ಷ ವಯಸ್ಸಾಗಿತ್ತು. ಆದರೆ ೪೩ ವರ್ಷ ಎಂದು ಹೇಳಿದ್ದರು. ಈ ಕಾರಣಕ್ಕೆ ವಿಮೆ ಮೊತ್ತ ನೀಡುವುದಿಲ್ಲ ಎಂದು ಹೇಳಿತು. ಪಾಲಿಸಿ ಮಾಡಿಸಿದ ಎರಡು ವರ್ಷಗಳೊಳಗೇ ಸಾವಿಗೀಡಾದ ಕಾರಣ ನಿಯಮದಂತೆ ವಿಮೆ ಕಂಪನಿಯು ತನಿಖೆಯನ್ನು ನಡೆಸಿತು. ತನಿಖೆಯ ವೇಳೆ ಸದಾಶಿವ ಉಪ್ಪಾರ ತನ್ನ ವಯಸ್ಸನ್ನು ೪೩ ಎಂದು ಬರೆಸಿದ್ದರು. ಆದರೆ ಅವರಿಗೆ ೬೦ ವರ್ಷ ವಯಸ್ಸಾಗಿತ್ತು. ಅವರು ತಮ್ಮ ನಿಜವಾದ ವಯಸ್ಸನ್ನು ಹೇಳಿದ್ದರೆ ಅವರಿಗೆ ಪಾಲಿಸಿಯನ್ನೇ ನೀಡುತ್ತಿರಲಿಲ್ಲ. ಇದು ವಿಮೆ ಪಾಲಿಸಿಯ ಷರತ್ತುಗಳಿಗೆ ವಿರುದ್ಧವಾದದ್ದು ಎಂದು ವಿಮೆ ಕಂಪನಿ ಹೇಳ