Posts

Showing posts from April, 2019

ತಪ್ಪಾಗಿ ಖಾತೆ ತರೆದು ನಂತರ ಬಡ್ಡಿಗೆ ಕೈಎತ್ತಿದ ಅಂಚೆ ಇಲಾಖೆಗೆ ಮುಖಭಂಗ

ಅಧಿಕಾರಿಗಳು ಮತ್ತು ಕಾನೂನು ಮಾಡುವವರು ಸ್ವಲ್ಪ ವಿವೇಚನೆ ಬಳಸಿದರೆ ಸಾರ್ವಜನಿಕರ ಬದುಕು ಅದೆಷ್ಟೋ ಸರಳವಾಗಿರುತ್ತಿತ್ತು. ಅನಗತ್ಯವಾಗಿ ಕೋರ್ಟ್ ಕಚೇರಿ ತಿರುಗುವುದು ತಪ್ಪುತ್ತಿತ್ತು. ಅಂಚೆ ಇಲಾಖೆಯ ಅಧಿಕಾರಿಗಳ ಅನಗತ್ಯ ಕಿರಿಕಿರಿಯೊಂದು ರಾಷ್ಟ್ರೀಯ ಗ್ರಾಹಕ ಆಯೋಗದವರೆಗೂ ಹೋಗಿತ್ತು. ಅಲ್ಲಿ ಅದಕ್ಕೆ ಮುಖಭಂಗವಾಯಿತು. ಗುಜರಾತ ರಾಜ್ಯದ ಭಾವನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ರಸೇಂದುಭಾಯಿ ಶಾಂತಿಲಾಲ್ ಪಾರೇಖ್ ಎನ್ನುವವರು ತಮ್ಮ ನಿವೃತ್ತಿಯ ಬಳಿಕ ಹಿರಿಯ ನಾಗರಿಕರ ಸೇವಾ ಯೋಜನೆಯ ಖಾತೆಯೊಂದನ್ನು ತೆರೆದಿದ್ದರು. ಅದನ್ನು ಅಂಚೆ ಇಲಾಖೆಯ ಏಜೆಂಟ್ ಒಬ್ಬನ ಮೂಲಕ ತೆರೆದದ್ದು. ಈ ಖಾತೆಯನ್ನು ಅಂಚೆ ಇಲಾಖೆಯು ಅಂಗೀಕರಿಸಿತ್ತು. ಆದರೆ ಈ ಖಾತೆಗೆ ಆಡಿಟ್ ಆಕ್ಷೇಪಣೆ ಬಂತು. ಆಗ ಅಂಚೆ ಕಚೇರಿಯು ಈ ಖಾತೆಯನ್ನು ಸ್ಥಗಿತಗೊಳಿಸಿತು. ಇದನ್ನು ಖಾತೆದಾರರಿಗೆ ತಿಳಿಸಿತು. ನಿಮಗೆ ಈಗಾಗಲೇ ಕೊಟ್ಟಿರುವ ಬಡ್ಡಿಯನ್ನು ವಜಾ ಮಾಡಿಕೊಂಡು ಖಾತೆಯಲ್ಲಿರುವ ಉಳಿದ ಹಣವನ್ನು ವಾಸಪ್ ನೀಡುವುದಾಗಿ ಹೇಳಿತು. ಆದರೆ ಇದಕ್ಕೆ ಅರ್ಜಿದಾರರು ಒಪ್ಪಲಿಲ್ಲ. ಭಾವನಗರ ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ದೂರು ದಾಖಲಿಸಿದರು. ಜಿಲ್ಲಾ ವೇದಿಕೆಯು ದೂರನ್ನು ಪುರಸ್ಕರಿಸಿತು. ದೂರುದಾರರು ಖಾತೆ ತೆರೆಯುವುದಕ್ಕೆ ಅರ್ಹರಲ್ಲ ಎಂದಿದ್ದರೆ ಅವರಿಗೆ ಖಾತೆ ತೆರೆಯುವುದಕ್ಕೆ ಅವಕಾಶ ನೀಡಬಾರದಿತ್ತು. ಅದು ಅಂಚೆ ಕಚೇರಿಯ ಕರ್ತವ್ಯ ಮತ್ತು ಜವಾಬ್ದಾರಿ ಎಂದು ಅದು ಹೇಳಿತು. ಇದರ ವಿರುದ್ಧ ಅಂಚೆ ಕಚ

ವಿಮೆ ಕಾಯ್ದೆಯ ತಿದ್ದುಪಡಿ ಹಿಂದಿನ ಪಾಲಿಸಿಗಳಿಗೆ ಅನ್ವಯಿಸದು

೧೯೩೮ರ ವಿಮೆ ಕಾಯ್ದೆಯ ಸೆಕ್ಷನ್ ೪೫ರ ಪ್ರಕಾರ ಪಾಲಿಸಿಯ ೨ ವರ್ಷ ಮುಗಿದ ಬಳಿಕ ಪಾಲಿಸಿಯ ಲೋಪದೋಷಗಳನ್ನು ಪರಿಗಣಿಸುವಂತಿಲ್ಲ. ಆದರೆ ಇದಕ್ಕೆ ೨೬-೧೨-೨೦೧೪ರಂದು ತಿದ್ದುಪಡಿ ತರಲಾಗಿದೆ. ಇದು ನಂತರದ ಪಾಲಿಸಿಗಳಿಗೆ ಅನ್ವಯವೇ ಹೊರತು ಪೂರ್ವಾನ್ವಯವಾಗುವುದಿಲ್ಲ. ------------ ಜಿಂದಗಿ ಕೆ ಸಾಥ್ ಭಿ ಜಿಂದಗಿ ಕೆ ಬಾದ್ ಭಿ ಎಂಬ ಘೋಷಣೆಯೊಂದಿಗೆ ನಿಮಗೆ ವಿಮೆಯನ್ನು ನೀಡುವುದಕ್ಕೆ ಮುಂದೆ ಬರುವ ಭಾರತೀಯ ಜೀವ ವಿಮಾ ನಿಗಮವು ಈ ಘೋಷಣೆಗೆ ಅನುಗುಣವಾಗಿ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆಯೇ ಎಂಬ ಕುರಿತು ಅನುಮಾನ ವ್ಯಕ್ತಪಡಿಸುವಂಥ ಪ್ರಕರಣವೊಂದು ಇಲ್ಲಿದೆ. ವಿಮೆ ಪಡೆದ ವ್ಯಕ್ತಿಯ ವಾರಸುದಾರರಿಗೆ ವಿಮೆಯ ಮೊತ್ತ ಸಿಗದ ಹಾಗೆ ಮಾಡಲು ಏನಾದರೂ ಒಳಸುಳಿಗಳನ್ನು ಅದು ಹುಡುಕುತ್ತಲೇ ಇರುತ್ತದೆ. ಹೀಗೆ ತಕ್ಷಣಕ್ಕೆ ವಿಮೆಯ ಹಣ ವಾರಸುದಾರರಿಗೆ ಸಿಗದೆ ಹೋದಾಗ ವಿಮೆ ಮಾಡಿಸುವುದರ ಮೂಲ ಉದ್ದೇಶವೇ ವಿಫಲವಾಗುತ್ತದೆ. ಹಾಗೆಯೇ ವಿಮೆ ಮಾಡಿಸುವ ಧಾವಂತದಲ್ಲಿ ವಿಮೆಯ ಏಜೆಂಟರು ಏನೇನೋ ಬಣ್ಣದ ಕನಸುಗಳನ್ನು ಬಿತ್ತುತ್ತಾರೆ. ಫಾರ್ಮ್‌ಗೆ ಸಹಿ ಮಾಡಿಸಿಕೊಳ್ಳುತ್ತಾರೆ. ಉಳಿದುದನ್ನು ತಾವೇ ತುಂಬಿಕೊಳ್ಳುತ್ತಾರೆ. ಹೀಗೆ ಏಜೆಂಟ್ ತುಂಬಿದ ಫಾರ್ಮ್‌ನ ವಿವರಗಳಿಗೆ ಪಾಲಿಸಿದಾರ ಹೊಣೆಯಾಗುತ್ತಾನೆಯೇ? ಇಲ್ಲ ಎಂದು ಗ್ರಾಹಕ ನ್ಯಾಯಾಲಯಗಳ ತೀರ್ಪುಗಳು ಹೇಳುತ್ತವೆ. ಏನಿದು ಪ್ರಕರಣ?: ಪ್ರಕರಣದ ದೂರುದಾರರಾದ ಚಂಡೀಗಡದ ಜಸ್ವಿಂದರ ಕೌರ್ ಅವರ ಪತಿ ಗುರುಬೀರ್ ಸಿಂಗ್ ರಿಯಾರ್ ಅವರ