Posts

Showing posts from July, 2017

ಅಪಘಾತ ಸಮಯದಲ್ಲಿ ಅಧಿಕೃತ ಚಾಲನಾ ಪರವಾನಿಗೆ ಚಾಲಕನ ಬಳಿ ಇಲ್ಲದಿದ್ದರೆ ವಿಮೆ ದೊರಕದು

ಚಾಲನಾ ಪರವಾನಿಗೆ ಇಲ್ಲದ ವ್ಯಕ್ತಿ ವಾಹನ ಚಲಾಯಿಸುತ್ತಿದ್ದಾಗ ಅಪಘಾತವಾದರೆ ಪರಿಹಾರ ಸಿಗುತ್ತದೆಯೇ? ಇಂಥ ಒಂದು ಪ್ರಕರಣ ರಾಷ್ಟ್ರೀಯ ಗ್ರಾಹಕ ಆಯೋಗದ ವರೆಗೂ ಹೋಗಿತ್ತು. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಜಯ ನವನಾಥ ಸೊಂಟಕ್ಕೆ ನ್ಯೂ ಇಂಡಿಯಾ ಅಶ್ಯೂಅರೆನ್ಸ್ ಕಂಪನಿ ವಿರುದ್ಧ ಗ್ರಾಹಕ ವೇದಿಕೆಗೆ ದೂರನ್ನು ಒಯ್ದಿದ್ದರು. ದೂರುದಾರರು ಟಾಟಾ ಇಂಡಿಕಾ ವಿಸ್ಟಾ (ಎಂಎಚ್ ೧೩ ಎಸಿ ೮೫೭೦) ತಮ್ಮ ಸ್ವಂತ ಬಳಕೆಗಾಗಿ ಖರೀದಿಸಿದ್ದರು. ಅವರು ನ್ಯೂ ಇಂಡಿಯಾ ಅಶ್ಯೂಅರೆನ್ಸ್ ಕಂಪನಿಯಿಂದ ಅಪಘಾತ ವಿಮೆಯನ್ನು ಮಾಡಿಸಿದ್ದರು. ವಿಮೆ ಅವಧಿಯಲ್ಲಿಯೇ ೧೦-೦೭-೨೦೧೧ರಂದು ಕಾರು ಅಪಘಾತಕ್ಕೆ ಒಳಗಾಯಿತು. ದೊಡ್ಡ ಪ್ರಮಾಣದಲ್ಲಿಯೇ ಹಾನಿಗೆ ಒಳಗಾಯಿತು. ದೂರುದಾರರು ೭೦,೬೯೦ ರುಪಾಯಿ ಮೆಚ್ಚ ಮಾಡಿ ಅದರ ದುರಸ್ತಿಯನ್ನೂ ಮಾಡಿಸಿಕೊಂಡರು. ಅದಾದ ಬಳಿಕ ಅವರು ವಿಮೆ ಪರಿಹಾರ ಕೋರಿದರು. ವಿಮೆ ಕಂಪನಿಯು ೧೩-೦೯-೨೦೧೧ರಂದು ಬರೆದ ಪತ್ರದಲ್ಲಿ ಅವರಿಗೆ ವಿಮೆ ನೀಡಲು ಬರುವುದಿಲ್ಲ ಎಂದು ತಿಳಿಸಿತು. ಇದನ್ನು ಪ್ರಶ್ನಿಸಿ ಸೊಂಟಕ್ಕೆಯವರು ಜಿಲ್ಲಾ ಗ್ರಾಹಕ ವೇದಿಕೆಗೆ ದೂರನ್ನು ಒಯ್ದರು. ತಾವು ಮಾಡಿದ ವೆಚ್ಚದ ಮೊತ್ತ ೭೦,೬೯೦ ರು. ಅದಕ್ಕೆ ಶೇ.೧೨ರಂತೆ ಬಡ್ಡಿ, ತಮಗಾದ ಮಾನಸಿಕ ಕಿರಿಕಿರಿಗೆ ೧೦ ಸಾವಿರ ರು. ಪರಿಹಾರ, ವ್ಯಾಜ್ಯದ ವೆಚ್ಚವೆಂದು ೧೦ ಸಾವಿರ ರು. ಮತ್ತು ನ್ಯಾಯಯುತವಾಗಿ ತಮಗೆ ಇನ್ನೇನಾದರೂ ಬರುವುದಾದರೆ ಅದನ್ನೂ ಕೊಡಿಸಬೇಕು ಎಂದು ಕೋರಿದರು. ಇದಕ್ಕೆ ಲಿಖಿತ ಉತ್ತರ