Posts

Showing posts from December, 2017

ಗೃಹ ನಿರ್ಮಾಣ ಸಹಕಾರ ಸಂಘಗಳು ಮೋಸ ಮಾಡಿದರೆ ಗ್ರಾಹಕ ಕೋರ್ಟಲ್ಲಿ ಪ್ರಶ್ನಿಸಬಹುದು

ಕರ್ನಾಟಕದಲ್ಲಿ ಗೃಹನಿರ್ಮಾಣ ಸಹಕಾರ ಸಂಘಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ. ಆದರೆ ಇವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವವರು ಯಾರು? ಸಾಮಾನ್ಯ ಸದಸ್ಯನಿಗೆ ಈ ಸೊಸೈಟಿಯಿಂದ ಮೋಸವಾದರೆ ಆತ ಎಲ್ಲಿಗೆ ಹೋಗಬೇಕು? ನಿವೇಶನವನ್ನು ಫ್ಲ್ಯಾಟನ್ನೋ ನೀಡುತ್ತೇನೆ ಎಂದು ಭರವಸೆ ನೀಡಿ ಕೊನೆಗೆ ಕೈ ಎತ್ತಿದರೆ ಆ ಸದಸ್ಯ ಇಂಥ ಗೃಹನಿರ್ಮಾಣ ಸಹಕಾರ ಸಂಘದ ವಿರುದ್ಧ ಗ್ರಾಹಕ ನ್ಯಾಯಾಲಯದ ಕಟ್ಟೆ ಏರಬಹುದು. ಅಂಥದ್ದೊಂದು ಪ್ರಕರಣ ಇಲ್ಲಿದೆ. ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ನೌಕರರ ಸಹಕಾರ ಸಂಘವು ತನ್ನ ಸದಸ್ಯರಿಗಾಗಿ ಬೆಂಗಳೂರಿನಲ್ಲಿ ನಿವೇಶನಗಳನ್ನು ಅಭಿವೃದ್ಧಿ ಪಡಿಸಿತ್ತು. ಈ ಸಂಘದ ಸದಸ್ಯರಾದ ಎಸ್.ಬಿ.ಈಶ್ವರಪ್ಪ ಎಂಬವರಿಗೆ ನಿವೇಶನ ಸಿಕ್ಕಿತ್ತು. ನಿವೇಶನದ ಮೌಲ್ಯ ೯೯,೫೦೦ ರುಪಾಯಿ. ಇದರಲ್ಲಿ ಅವರು ಸಂಘಕ್ಕೆ ೬೪,೦೦೦ ರು. ತುಂಬಿದರು. ಆದರೆ ಸಂಘ ಕೊನೆಗೂ ಇವರಿಗೆ ನಿವೇಶನದ ಕ್ರಯಪತ್ರ ಮಾಡಿ ಕೊಡಲೇ ಇಲ್ಲ. ಇದನ್ನು ಪ್ರಶ್ನಿಸಿ ಅವರು ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ದೂರನ್ನು ದಾಖಲಿಸಿದರು. ಸೊಸೈಟಿಯ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಅಧ್ಯಕ್ಷರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು. ಇವರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿತ್ತು. ಆದರೂ ಯಾರೊಬ್ಬರೂ ಹಾಜರಾಗಲಿಲ್ಲ. ಅವರ ಗೈರು ಹಾಜರಿಯಲ್ಲೇ ಜಿಲ್ಲಾ ಗ್ರಾಹಕ ವೇದಿಯುೆ ಅರ್ಜಿದಾರರಿಗೆ ಸೊಸೈಟಿಯು ನಿವೇಶನವನ್ನು ನೀಡಬೇಕು. ಅವರಿಂದ ಉಳಿ

ಫ್ಲ್ಯಾಟ್ ಕೊಡದ ಯುನಿಟೆಕ್‌ಗೆ ಹಣ ಮರಳಿಸಲು ಆದೇಶ

ಒಂದು ಕಾಲದಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ಯುನಿಟೆಕ್ ಕಂಪನಿಯದು ದೊಡ್ಡ ಹೆಸರಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅದು ತನ್ನ ಗ್ರಾಹಕರಿಗೆ ನಿಗದಿತ ಅವಧಿಯಲ್ಲಿ ಫ್ಲ್ಯಾಟ್‌ಗಳನ್ನು ಕೊಡುವಲ್ಲಿ ವಿಫಲವಾಗಿದೆ. ಇದರ ವಿರುದ್ಧ ನೂರಾರು ಗ್ರಾಹಕರು ಕೋರ್ಟ್‌ಕಟ್ಟೆ ಏರಿದ್ದಾರೆ. ಹಲವು ಪ್ರಕರಣಗಳು ಗ್ರಾಹಕ ವೇದಿಕೆಯ ಎದುರೂ ಇವೆ. ಇಲ್ಲಿ ಅಂಥದ್ದೊಂದು ಪ್ರಕರಣ ಇದೆ. ಯುನಿಟೆಕ್ ವಿರುದ್ಧ ಅನಿಲ್ ಮೆಹ್ರೋತ್ರಾ ಎಂಬವರು ರಾಷ್ಟ್ರೀಯ ಗ್ರಾಹಕ ಆಯೋಗದಲ್ಲಿ ಹೂಡಿದ್ದ ಪ್ರಕರಣ ಇದು. ಇದೇ ಪ್ರಕರಣದ ಜೊತೆಯಲ್ಲಿ ಯುನಿಟೆಕ್ ವಿರುದ್ಧ ರಾಕೇಶ್ ಕುಮಾರ್ ಎಂಬವರು ದಾಖಲಿಸಿದ ಪ್ರಕರಣವನ್ನೂ ರಾ.ಗ್ರಾ.ಆಯೋಗ ಜೊತೆಯಾಗಿಯೇ ವಿಚಾರಣೆ ನಡೆಸಿ ತೀರ್ಪು ನೀಡಿದೆ. ಅನಿಲ್ ಹಾಗೂ ರಾಕೇಶ್‌ಕುಮಾರ್ ಅವರು ಉತ್ತರ ಪ್ರದೇಶದ ನೊಯ್ಡಾದಲ್ಲಿ ಯುನಿಟೆಕ್ ನಿರ್ಮಸಿದ ‘ರೆಸಿಡೆನ್ಸೀಸ್’ನಲ್ಲಿ ಫ್ಲ್ಯಾಟ್ ಖರೀದಿಸಿದ್ದರು. ಇವರಲ್ಲದೆ ಇನ್ನೂ ಹಲವರು ಇಲ್ಲಿ ಫ್ಲ್ಯಾಟ್ ಖರೀದಿಸಿದ್ದರು. ಹೀಗೆ ಫ್ಲ್ಯಾಟ್ ಖರೀದಿಸಿದವರು ‘ರೆಸಿಡೆನ್ಸೀಸ್ ಫ್ಲ್ಯಾಟ್ ಬೈಯರ್ಸ್ ಅಸೋಸಿಯೇಶನ್’ ಸ್ಥಾಪಿಸಿಕೊಂಡಿದ್ದರು. ಈ ಅಸೋಸಿಯೇಶನ್ನಿನ ಯಾರಿಗೂ ಫ್ಲ್ಯಾಟ್ ಹಸ್ತಾಂತರವಾಗಿರಲಿಲ್ಲ. ಅವರೆಲ್ಲ ಈ ಸಂಘದ ಮೂಲಕ ರಾಷ್ಟ್ರೀಯ ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು. ಅವರೆಲ್ಲರಿಗೂ ಅವರು ತುಂಬಿದ್ದ ಹಣವನ್ನು ವಾಪಸ್ ನೀಡಬೇಕು ಮತ್ತು ಅದಕ್ಕೆ ಅವರು ಹಣ ನೀಡಿದ ದಿನದಿಂದ ಶೇ.೧೦ರಂತೆ ಬಡ್ಡಿ ನೀಡಬೇಕು ಎಂದು ಆಯೋಗ

ವಿಮೆಯಲ್ಲಿ ರಿಸ್ಕ್ ಘೋಷಣೆಯಾದ ದಿನಕ್ಕೆ ಬೆಲೆ ಇಲ್ಲ, ಪಾಲಿಸಿ ನೀಡಿದ ದಿನವೇ ಲೆಕ್ಕಕ್ಕೆ

ಮಧ್ಯಪ್ರದೇಶದ ಸಾಗರ ಜಿಲ್ಲೆಯ ಮರಾನಿ ಗ್ರಾಮದ ಜಸ್ವಂತ್ ಸಿಂಗ್ ಮತ್ತು ಬಬಿತಾ ಅವರದು ಅನ್ಯೋನ್ಯ ದಾಂಪತ್ಯ. ಬಬಿತಾ ಅವರು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ದಿಂದ ೧ ಲಕ್ಷ ರುಪಾಯಿಯ ವಿಮೆಯನ್ನು ಇಳಿಸಿದ್ದರು. ದುರ್ದೈವವಶಾತ್ ಅವರು ೨೦೦೨ರ ಅಕ್ಟೋಬರ್ ೯ರಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ವಿಮೆ ಪಾಲಿಸಿಯನ್ನು ನೀಡಿದ ದಿನಾಂಕ ೨೮-೧೧-೧೯೯೯. ಆದರೆ ರಿಸ್ಕ್ ಘೋಷಣೆಯಾದ ದಿನಾಂಕ ೨೮-೦೯-೧೯೯೯ ಎಂದಿತ್ತು. ಜಸ್ವಂತ್ ಸಿಂಗ್ ಅವರು ವಿಮೆ ಪರಿಹಾರ ನೀಡುವಂತೆ ಎಲ್‌ಐಸಿಯನ್ನು ಕೋರುತ್ತಾರೆ. ವಿಮೆ ಮೊತ್ತವನ್ನು ನೀಡುವುದಕ್ಕೆ ಎಲ್‌ಐಸಿ ತಕರಾರು ಎತ್ತುತ್ತದೆ. ವಿಮೆ ಪಾಲಿಸಿಯ ಷರತ್ತುಗಳು ಮತ್ತು ನಿಬಂಧನೆಗಳ ನಿಯಮ ೪(ಬಿ) ಪ್ರಕಾರ ಪಾಲಿಸಿ ನೀಡಿದ ಮೂರು ವರ್ಷಗಳ ಒಳಗೆ ವಿಮೆ ಹೊಂದಿದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೆ ವಿಮೆಯನ್ನು ನೀಡಲು ಬರುವುದಿಲ್ಲ. ಬಬಿತಾ ಅವರು ಮೂರು ವರ್ಷ ತುಂಬುವ ಮೊದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಾರಣ ನೀಡಿತು. ಆದರೆ ಪಾಲಿಸಿಗೆ ಅದುವರೆಗೆ ತುಂಬಿದ್ದ ೨೪,೪೪೦ ರು.ಗಳನ್ನು ಮಾತ್ರ ನೀಡಿತು. ಇದರ ವಿರುದ್ಧ ಜಸ್ವಂತ್ ಸಿಂಗ್ ಅವರು ಸಾಗರ ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ದೂರನ್ನು ಸಲ್ಲಿಸಿದರು. ದೂರನ್ನು ಜಿಲ್ಲಾ ವೇದಿಕೆ ಪುರಸ್ಕರಿಸಿತು. ವಿಮೆ ಕಂಪನಿಯು ಈಗಾಗಲೆ ನೀಡಿರುವ ಮೊತ್ತವನ್ನು ಕಳೆದು ಉಳಿದ ೭೫,೫೬೦ ರು.ಗಳನ್ನು ಮತ್ತು ಅದಕ್ಕೆ ಸಿಗಬೇಕಾದ ಬೋನಸ್ ಸಹಿತ ಒಂದು ತಿಂಗಳೊಳಗೆ ನೀಡಬೇಕು. ಸೇವಾ ನ್ಯೂನತ

ಹರಾಜು ಖರೀದಿದಾರ ಗ್ರಾಹಕನಲ್ಲ; ಹರಾಜು ಪ್ರಕ್ರಿಯೆಯನ್ನು ಗೃಹಮಂಡಳಿ ರದ್ದುಮಾಡಬಹುದು

ಹರಾಜಿನಲ್ಲಿ ಹೆಚ್ಚು ಮೊತ್ತವನ್ನು ನಮೂದಿಸಿದ ಮಾತ್ರಕ್ಕೇ ಗೃಹಮಂಡಳಿ ನಿವೇಶನವನ್ನು ನೊಂದಾಯಿಸಿಕೊಡಬೇಕಾಗಿಲ್ಲ. ಅದನ್ನು ರದ್ದುಗೊಳಿಸುವ ಅಧಿಕಾರ ಗೃಹಮಂಡಳಿಗೆ ಇದೆ. ---------------- ಗೃಹಮಂಡಳಿಯ ಮನೆಯೇ ಇರಬಹುದು ಅಥವಾ ಇನ್ನಾವುದೇ ವಸ್ತು ಇರಬಹುದು ನೀವು ಅದನ್ನು ಹರಾಜಿನಲ್ಲಿ ಖರೀದಿಸಿದಾಗ ನೀವು ಗ್ರಾಹಕ ಅನ್ನಿಸಿಕೊಳ್ಳುತ್ತೀರಾ? ಅಲ್ಲಿ ನಿಮಗೆ ಅನ್ಯಾಯವಾದರೆ ಗ್ರಾಹಕ ವೇದಿಕೆಯಲ್ಲಿ ದೂರನ್ನು ದಾಖಲಿಸಬಹುದೆ? ಗೃಹಮಂಡಳಿ ಹರಾಜಿನಲ್ಲಿ ನಿಮಗೆ ಮಂಜೂರಾಗಿದ್ದ ನಿವೇಶನವನ್ನು ರದ್ದುಮಾಡಿದರೆ ಅದು ಗ್ರಾಹಕ ಕಾಯ್ದೆಯಲ್ಲಿ ಹೇಳಿರುವ ಹಾಗೆ ಸೇವಾನ್ಯೂನತೆಯ ವ್ಯಾಪ್ತಿಯಲ್ಲಿ ಬರುತ್ತದೆಯೆ? ಹರಾಜಿನಲ್ಲಿ ಭಾಗವಹಿಸಿದ ವ್ಯಕ್ತಿ ಗ್ರಾಹಕ ಅನ್ನಿಸಿಕೊಳ್ಳುತ್ತಾನೆಯೆ? ಇಂಥದ್ದೊಂದು ಸ್ವಾರಸ್ಯಕರ ಪ್ರಕರಣ ರಾಷ್ಟ್ರೀಯ ಗ್ರಾಹಕ ಆಯೋಗದ ವರೆಗೂ ಹೋಗಿತ್ತು. ರಾಜಸ್ಥಾನದ ಚಿತ್ತೋರಗಡದ ಅಂಬಾವಾಡಿಯ ನಿವಾಸಿ ಭರ್ನ್ವ ಲಾಲ್ ಅಲ್ಲಿಯ ಗೃಹಮಂಡಳಿಯ ನಿವೇಶನ ಹರಾಜಿನಲ್ಲಿ ಪಡೆದುಕೊಳ್ಳುತ್ತಾರೆ. ನಂತರ ಗೃಹಮಂಡಳಿಯು ಆ ನಿವೇಶನವನ್ನು ಅವರಿಗೆ ನೊಂದಣಿ ಮಾಡಿಸಿಕೊಡದೆ ಹರಾಜನ್ನೇ ರದ್ದುಪಡಿಸುತ್ತದೆ. ಹೀಗೆ ನಿವೇಶನ ಕೈತಪ್ಪಿದಾಗ ಅವರು ಗ್ರಾಹಕ ವೇದಿಕೆಯ ಮೆಟ್ಟಿಲು ಏರಿದ್ದರು. ಭನ್ವರ್‌ಲಾಲ್ ವೃತ್ತಿಯಿಂದ ಪತ್ರಕರ್ತರು. ರಾಜಸ್ಥಾನ ಗೃಹಮಂಡಳಿಯ ಉದಯಪುರ ವಿಭಾಗವು ಚಿತೋರಗಡದಲ್ಲಿ ತನ್ನ ಸೆಂತಿ ವಿಸ್ತರಣೆ ಯೋಜನೆಯಲ್ಲಿ ಕೆಲವು ನಿವೇಶನಗಳನ್ನು ಹರಾಜು ಮೂಲಕ ಮಾರಾಟ

ವಿಮೆ ಕಂಪನಿಯೂ ಒಮ್ಮೊಮ್ಮೆ ದಾಖಲೆ ತಿದ್ದಿಬಿಡುತ್ತದೆ

ತನ್ನ ಲಾಭಕ್ಕಾಗಿ ವಿಮೆ ಕಂಪನಿಯೂ ಕೆಲವೊಮ್ಮೆ ದಾಖಲೆಗಳನ್ನು ತಿದ್ದಿಬಿಡುತ್ತದೆ. ಅಂಥ ಒಂದು ಪ್ರಕರಣ ರಾಷ್ಟ್ರೀಯ ಗ್ರಾಹಕ ಆಯೋಗದವರೆಗೂ ಹೋಗಿತ್ತು. ಆಂಧ್ರಪ್ರದೇಶದ ವಿಜಯವಾಡದ ಮೆ.ಸೋನೋವಿಷನ್ ಎಂಟರ್‌ಪ್ರೈಸಸ್ ಸಂಸ್ಥೆಯು ನ್ಯಾಶನಲ್ ಇನ್ಸುರೆನ್ಸ್ ಕಂಪನಿಯಿಂದ ವಿಮೆ ಪಾಲಿಸಿಯನ್ನು ಪಡೆದುಕೊಂಡಿತ್ತು. ಈ ಸಂಸ್ಥೆ ಇದ್ದದ್ದು ಎಲುರು ರಸ್ತೆಯ ಸೋನೋವಿಷನ್ ಕಟ್ಟಡದಲ್ಲಿ. ಇಲ್ಲಿ ಸಂಸ್ಥೆಯ ಷೋರೂಂ ಮತ್ತು ಮೊದಲ ಮಹಡಿಯಲ್ಲಿ ಗೋಡೌನ್ ಇತ್ತು. ಇದೇ ಕಟ್ಟಡದ ಎರಡು ಮತ್ತು ಮೂರನೆ ಮಹಡಿಯಲ್ಲಿಯೂ ಗೋಡೌನ್ ಇದ್ದು, ಇವು ವಿಜಯ ಎಂಟರ್‌ಪ್ರೈಸಸ್ ಮತ್ತು ಸೋನೋವಿಷನ್ ಎಲೆಕ್ಟ್ರಾನಿಕ್ಸ್ ಹೆಸರಿನಲ್ಲಿದ್ದವು. ಆದರೆ ಇವು ಮೂರೂ ಸಂಸ್ಥೆಗೂ ಪೊಟ್ಲುರಿ ಭಾಸ್ಕರ ಮೂರ್ತಿ ಒಬ್ಬರೇ ಮಾಲೀಕರು. ವ್ಯವಹಾರದ ಕಾರಣಕ್ಕಾಗಿ ಮೂರು ಸಂಸ್ಥೆ ಮಾಡಿಕೊಂಡಿದ್ದರು. ಇವರೇ ಈ ಪ್ರಕರಣ ಮೂಲ ದಾವೆದಾರರು. ಈ ಮೂರೂ ಸಂಸ್ಥೆಗಳಿಗೂ ಸೇರಿ ನ್ಯಾಶನಲ್ ಇನ್ಸುರೆನ್ಸ್ ಕಂಪನಿಯಿಂದ ವಿಮೆ ಪಡೆದುಕೊಳ್ಳಲಾಗಿತ್ತು. ೨೫-೪-೨೦೦೨ರಂದು ಆ ಕಟ್ಟಡದಲ್ಲಿ ಬೆಂಕಿ ಆಕಸ್ಮಿಕ ನಡೆಯಿತು. ನೆಲಮಹಡಿಯ ಷೋರೂಂ ಹಾಗೂ ಮೊದಲ ಮಹಡಿಯ ಗೋಡೌನ್‌ನಲ್ಲಿದ್ದ ವಸ್ತುಗಳು ಸುಟ್ಟುಹೋದವು. ಹಾನಿ ಅಂದಾಜಿಗೆ ವಿಮೆ ಕಂಪನಿಯು ೨೬-೦೪-೨೦೦೨ರಂದು ಒಬ್ಬ ಸರ್ವೇಯರ್‌ನನ್ನು ನೇಮಿಸಿತು. ಸೋನೋವಿಷನ್ ಎಂಟರ್‌ಪ್ರೈಸಿಸ್ ಪ್ರಕಾರ ಆಗಿದ್ದ ಹಾನಿ ೨೩,೧೭,೪೦೦ ರು. ಆದರೆ ಸರ್ವೇಯರ್ ಈ ಹಾನಿಯನ್ನು ೫,೭೩,೬೯೯ ಎಂದು ಅಂದಾಜು ಮಾಡುತ್ತ